ETV Bharat / state

ಬೆಳಗಾವಿಯಲ್ಲಿ ಮೃಣಾಲ್ ಸೋಲಿಗೆ ನಾನು ಕಾರಣ ಅಲ್ಲ: ಸತೀಶ್ ಜಾರಕಿಹೊಳಿ - Satish Jarkiholi

ಬೆಳಗಾವಿ ಕ್ಷೇತ್ರದ ಮತದಾರರನ್ನು ಅಸೆಸ್ ಮಾಡುವಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಫಲರಾದರು. ಇದೇ ಕಾಂಗ್ರೆಸ್ ‌ಸೋಲಿಗೆ ಕಾರಣ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ (ETV Bharat)
author img

By ETV Bharat Karnataka Team

Published : Jun 5, 2024, 6:07 PM IST

Updated : Jun 5, 2024, 6:31 PM IST

ಸತೀಶ್ ಜಾರಕಿಹೊಳಿ (ETV Bharat)

ಬೆಳಗಾವಿ: ಲೋಕಸಭೆ ಚುನಾವಣೆಯಲ್ಲಿ ಡಬಲ್ ಡಿಜಿಟ್ ರೀಚ್ ಆಗದೇ ಇರುವುದಕ್ಕೆ ನಮ್ಮ ನಾಯಕರ ಅತಿಯಾದ ಆತ್ಮವಿಶ್ವಾಸ ಕಾರಣ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಗೋಕಾಕ ನಗರದಲ್ಲಿಂದು ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ನಾಯಕರ ನಿರ್ಲಕ್ಷ್ಯ ಹಿನ್ನಡೆಗೆ ಕಾರಣ: ಡೈರೆಕ್ಟರ್, ಪ್ರೊಡ್ಯೂಸರ್ ಫೇಲ್ ಆದರೆ ಈ ರೀತಿಯ ಫಲಿತಾಂಶ ನಿರೀಕ್ಷಿತ. ಚುನಾವಣೆಗೆ ಸಮಯ ಕಡಿಮೆ ಇರುತ್ತದೆ. ಆ ಸಮಯದಲ್ಲಿ ಅಲರ್ಟ್ ಆಗಿರಬೇಕು. ಇಲ್ಲವಾದರೆ ಚುನಾವಣೆ ಬಂದು ಹೋಗುತ್ತದೆ. ಆಗಲೇ ನಾವು ಕೆಲಸ ಮಾಡಬೇಕು. ನಮ್ಮ ನಾಯಕರು ಹಲವು ಕ್ಷೇತ್ರಗಳನ್ನು ನಿರ್ಲಕ್ಷಿಸಿದ್ದೂ ನಮ್ಮ ಹಿನ್ನಡೆಗೆ ಕಾರಣ. ಗೆಲ್ಲುವ ವಿಶ್ವಾಸದ ಕಾರಣಕ್ಕೆ ಇನ್ನೂ ಹಲವು ಕ್ಷೇತ್ರಗಳಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಪ್ರಚಾರ ಕಾರ್ಯ ನಡೆಯಲಿಲ್ಲ. ಕೆಲವೆಡೆ ಕಡಿಮೆ ಮತಗಳ ಅಂತರದಿಂದ ಸೋಲಲು ನಮ್ಮ ನಿರ್ಲಕ್ಷ್ಯ ಕಾರಣ ಎಂದರು.

ಲಿಂಗಾಯತ, ಮರಾಠ ಮತ ಸೆಳೆಯಲು ವಿಫಲ: ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ನಾನು ಕಾರಣನಲ್ಲ. 5 ಲಕ್ಷ ಲಿಂಗಾಯತ ಮತದಾರರು ಬೆಳಗಾವಿಯಲ್ಲಿದ್ದಾರೆ. ಅವರೇನು ನನ್ನ ಮಾತು ಕೇಳ್ತಾರಾ?. ಬೆಳಗಾವಿ ಕ್ಷೇತ್ರದ ಮತದಾರರನ್ನು ಅಸೆಸ್ ಮಾಡುವಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಫಲರಾದರು. ಇದೇ ಕಾಂಗ್ರೆಸ್ ‌ಸೋಲಿಗೆ ಕಾರಣವಾಯಿತು. ಈ‌ ಸಲ ನಾವು ಗೆಲ್ಲುವ‌ ನಿಟ್ಟಿನಲ್ಲಷ್ಟೇ ಕೆಲಸ ಮಾಡಿದ್ದೇವೆಯೇ ಹೊರತು ಸೋಲಿಸಲು ಅಲ್ಲ. ಬೆಳಗಾವಿ ಗ್ರಾಮೀಣ ‌ಕ್ಷೇತ್ರದಲ್ಲೇ ಮೃಣಾಲ್‌ಗೆ ತೀವ್ರ ಹಿನ್ನಡೆ ಆಗಿದೆ. ಲಿಂಗಾಯತ ಹಾಗೂ ಮರಾಠ ಮತಗಳನ್ನು ಸೆಳೆಯಲು ವಿಫಲವಾಗಿದ್ದೇ ಸೋಲಿಗೆ ಕಾರಣ ಎಂದು ಹೇಳಿದರು.

ಪಕ್ಷದ ಬೆಂಬಲ, ನಮ್ಮ ವರ್ಚಸ್ಸು, ಅಭಿವೃದ್ಧಿ ಕೆಲಸದಿಂದ ಚಿಕ್ಕೋಡಿಯಲ್ಲಿ ಪ್ರಿಯಾಂಕಾ ಗೆಲುವಾಗಿದೆ. ನಿರಂತರ ಸಂಪರ್ಕ ಈ ಚುನಾವಣೆ ಗೆಲ್ಲಲು ಅನುಕೂಲವಾಗಿದೆ ಎಂದರು.

ಇನ್ನು, ತಮ್ಮ ವಿರುದ್ಧದ ಅಪಪ್ರಚಾರದ ವಿಚಾರವಾಗಿ ಪ್ರತಿಕ್ರಿಯಿಸಿ, ವಿರೋಧಿಗಳು ತಮ್ಮ ದೃಷ್ಟಿಕೋನದಲ್ಲಿ ಮಾತ್ರ ವಿಚಾರ ಮಾಡುತ್ತಾರೆ. ಜಾತಿವಾದಿಗಳಿಗೆ ಎಲ್ಲಿ ನಿಂತರೂ ಅವಕಾಶ ಇರುವುದಿಲ್ಲ. ಹೊರಗಿನವರು ಬಂದ್ರು ಒಳಗಿನವರು ಬಂದ್ರು ಅನ್ನೋದು ತಪ್ಪೆಂದು ತಿರುಗೇಟು ಕೊಟ್ಟರು.

ಚಿಕ್ಕೋಡಿಯಲ್ಲಿ ಬಿಜೆಪಿ ನಾಯಕರು ಬೆಂಬಲಿಸಿರುವ ಬಗ್ಗೆ ಮಾತನಾಡುತ್ತಾ, ಬಿಜೆಪಿ ನಾಯಕರಿಗಿಂತ ಮತದಾರರು ನಮ್ಮ ಜತೆಗಿದ್ದರು. ಅಲ್ಲಿನ ಅಭ್ಯರ್ಥಿ ಬಗ್ಗೆ ಅಸಮಾಧಾನವಿತ್ತು. ಅದು ನಮಗೆ ಅನುಕೂಲವಾಗಿದೆ. ಸ್ವಪಕ್ಷದ ವಿರೋಧಿಗಳ ವಿರುದ್ಧ ದೂರು ನೀಡಲ್ಲ, ವರಿಷ್ಠರ ಗಮನಕ್ಕೆ ತರುತ್ತೇವೆ. ಪತ್ರ ಕೊಟ್ಟರೂ ಏನೂ ಪ್ರಯೋಜನ ಆಗುವುದಿಲ್ಲ‌‌. ಯಾವುದೇ ಕ್ರಮವೂ ಆಗಲ್ಲ. ಹೀಗಾಗಿ ದೂರು ಕೊಡುವುದಿಲ್ಲ, ಗಮನಕ್ಕೆ ತರುತ್ತೇನೆ. ನಮಗೆ ಅವರು ಮೋಸ ಮಾಡದೇ ಇದ್ದಿದ್ದರೆ ಇನ್ನೂ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ಅವಕಾಶವಿತ್ತು ಎಂದು ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಕರ್ನಾಟಕದಿಂದ 20 ಮಂದಿ ಮೊದಲ ಬಾರಿ ಸಂಸತ್​ಗೆ ಎಂಟ್ರಿ; ಕಾಂಗ್ರೆಸ್​ನಿಂದ ಗೆದ್ದ ಎಲ್ಲ 9 ಅಭ್ಯರ್ಥಿಗಳು ಹೊಸಬರೇ! - Lok Sabha Election Results

Last Updated : Jun 5, 2024, 6:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.