ETV Bharat / state

ಗೋಕಾಕ್ ಬ್ಯಾಂಕ್​ನ​ 74.89 ಕೋಟಿ ರೂ. ವಂಚನೆ ಕೇಸ್: ಬೆಳಗಾವಿ SP ಹೇಳಿದ್ದೇನು? - Gokak Bank fraud case

ಬೆಳಗಾವಿ ಎಸ್​ಪಿ ಡಾ. ಭೀಮಾಶಂಕರ ಗುಳೇದ್ ಅವರು ಗೋಕಾಕ್ ನಗರದ ಮಹಾಲಕ್ಷ್ಮಿ ಅರ್ಬನ್​ ಕೋ-ಆಪರೇಟಿವ್​​ ಕ್ರೆಡಿಟ್​ ಬ್ಯಾಂಕಿನ ವಂಚನೆ ಪ್ರಕರಣದ ಕುರಿತು ಮಾತನಾಡಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.

SP Dr. Bhima Shankar Guled
ಬೆಳಗಾವಿ ಎಸ್​ಪಿ ಡಾ. ಭೀಮಾಶಂಕರ ಗುಳೇದ್ (ETV Bharat)
author img

By ETV Bharat Karnataka Team

Published : Sep 23, 2024, 7:15 PM IST

Updated : Sep 23, 2024, 8:43 PM IST

ಬೆಳಗಾವಿ : ಗೋಕಾಕ್​​ ನಗರದ ಮಹಾಲಕ್ಷ್ಮಿ ಅರ್ಬನ್ ಕೋ-ಆಪರೇಟಿವ್​ ಕ್ರೆಡಿಟ್ ಬ್ಯಾಂಕಿನ 74.89 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಅದೇ ರೀತಿ ಪ್ರಕರಣವನ್ನು ಸಿಐಡಿಗೆ ವಹಿಸಲು ಕೇಂದ್ರ ಕಚೇರಿಗೆ ಪತ್ರ ಬರೆಯುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ್ ತಿಳಿಸಿದ್ದಾರೆ.

ಇಂದು ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಠೇವಣಿದಾರರ ಹಿತರಕ್ಷಣೆಗಾಗಿ ವಂಚನೆ ಮತ್ತು ಹಣಕಾಸಿನ ವಂಚನೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಆಸ್ತಿಗಳನ್ನು ಜಪ್ತಿ ಮಾಡಲು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 107ರ ಅಡಿ ಅವಕಾಶವಿದೆ. ಹಾಗಾಗಿ, ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು. ಇನ್ನು ಬ್ಯಾಂಕಿನ ಇತರ ಸಿಬ್ಬಂದಿ ಮತ್ತು ಠೇವಣಿದಾರರ ಸಹಕಾರದಿಂದ ನಾವು ಆರೋಪಿಗಳ ಒಟ್ಟು 112 ಆಸ್ತಿಗಳನ್ನು ಗುರುತಿಸಿದ್ದು, ಆ ಆಸ್ತಿಯ ಸರ್ಕಾರಿ ಮೌಲ್ಯ 13.80 ಕೋಟಿ ರೂ. ಮಾರುಕಟ್ಟೆ ಮೌಲ್ಯ 50 ಕೋಟಿ ರೂ. ಇದೆ. ಇಂಥ ಪ್ರಕರಣಗಳಲ್ಲಿ ತನಿಖಾಧಿಕಾರಿಯು ಪೊಲೀಸ್‌ ಅಧೀಕ್ಷಕರ ಅನುಮತಿ ಪಡೆದು, ಆರೋಪಿಗಳ ಆಸ್ತಿ ಜಪ್ತಿ ಪಡಿಸಿಕೊಳ್ಳಲು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ವಿವರಿಸಿದರು.

ಎಸ್​ಪಿ ಡಾ. ಭೀಮಾಶಂಕರ ಗುಳೇದ್ (ETV Bharat)

ಬೇರೆ ದಾಖಲೆಗಳನ್ನು ತೋರಿಸಿರುವುದು ಸ್ಪಷ್ಟವಾಗಿದೆ : 2021ರಲ್ಲಿ ಗೋಕಾಕಿನ ಈ ಬ್ಯಾಂಕ್‌ನಲ್ಲಿ ವಂಚನೆ ಶುರುವಾಗಿದೆ. ಪ್ರಕರಣದಲ್ಲಿ 14 ಮಂದಿ ವಿರುದ್ಧ ದೂರು ದಾಖಲಾಗಿದೆ. ಇದರಲ್ಲಿ 1ರಿಂದ 5ನೇ ಆರೋಪಿಗಳು ಬ್ಯಾಂಕ್ ಸಿಬ್ಬಂದಿಗಳೇ ಇದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ(ಆರ್‌ಬಿಐ) ಅಧಿಕಾರಿಗಳು ನಡೆಸಿದ ಲೆಕ್ಕ ಪರಿಶೋಧನೆಯಲ್ಲೂ ಪ್ರಕರಣ ಬೆಳಕಿಗೆ ಬಾರದಂತೆ ಆರೋಪಿಗಳು ನೋಡಿಕೊಂಡಿದ್ದಾರೆ. ಲೆಕ್ಕ ಪರಿಶೋಧನೆಗೆ ಬಂದವರಿಗೆ ಬೇರೆ ದಾಖಲೆಗಳನ್ನು ತೋರಿಸಿರುವುದು ಸ್ಪಷ್ಟವಾಗಿದೆ ಎಂದು ಡಾ. ಭೀಮಾಶಂಕರ ಗುಳೇದ್​ ವಿವರಿಸಿದರು.

ಆರೋಪಿಗಳ ಬಂಧನಕ್ಕೆ ಏಳು ತಂಡಗಳ ರಚನೆ : ಪ್ರಕರಣದ‌ ಆರೋಪಿಗಳು‌ ಬ್ಯಾಂಕಿನ ವ್ಯವಸ್ಥಾಪಕ ಸಿದ್ದಪ್ಪ ಪವಾರ, ಸಿಬ್ಬಂದಿಗಳಾದ ಸಾಗರ ಸಬಕಾಳೆ, ವಿಶ್ವನಾಥ ಬಾಗಡೆ, ಸಂಭಾಜಿ ಘೋರ್ಪಡೆ, ದಯಾನಂದ ಉಪ್ಪಿನ, ಸಂಜನಾ ಸಬಕಾಳೆ, ಮಾಲವ್ವ ಸಬಕಾಳೆ, ಗೌರವ್ವ ಹವಾಲ್ದಾರ, ಚಂದ್ರವ್ವ ಹವಾಲ್ದಾರ, ಮಾಯವ್ವ ಜಾಧವ, ಪರಸಪ್ಪ ಮಾಳೋಜಿ, ರಾಧಾ ಮಾಳೋಜಿ, ಸಂದೀಪ ಮರಾಠೆ, ಕಿರಣ ಸುಪಲಿ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಲೆಮರೆಸಿಕೊಂಡಿದ್ದಾರೆ. ಈ ಆರೋಪಿಗಳ ಬಂಧನಕ್ಕೆ ಏಳು ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾಹಿತಿ ಒದಗಿಸಿದರು.

ಸಿಬ್ಬಂದಿ ಸಿದ್ದಪ್ಪ ಪವಾರ ತನ್ನ ಸ್ನೇಹಿತರು ಹಾಗೂ ಸಂಬಂಧಿಕರ ಹೆಸರಿನಲ್ಲಿ ತಮ್ಮದೇ ಬ್ಯಾಂಕ್‌ನಲ್ಲಿ 6.87 ಕೋಟಿ ರೂ. ಹಣ ಠೇವಣಿ ಇರಿಸಿದ್ದ. ಇದನ್ನೇ ಆಧಾರವಾಗಿ ಇಟ್ಟುಕೊಂಡು, ಎಲ್ಲ ಆರೋಪಿಗಳು 81 ಕೋಟಿ ರೂ. ಲೋನ್ ಪಡೆದಿದ್ದಾರೆ. ಅದೇ ಹಣದಲ್ಲಿ ಗೋಕಾಕ್, ಚಿಕ್ಕೋಡಿ, ಹುಬ್ಬಳ್ಳಿ ಸೇರಿದಂತೆ ಮತ್ತಿತರ ಕಡೆ ಆಸ್ತಿ ಖರೀದಿಸಿರುವುದು ಸ್ಪಷ್ಟವಾಗಿದೆ ಎಂದರು.

ಹಣ ಮರುಪಾವತಿಯ ಬಗ್ಗೆ ಬ್ಯಾಂಕ್ ಆಡಳಿತ ಮಂಡಳಿ ಭರವಸೆ : ಇನ್ನು ಠೇವಣಿದಾರರು, ಬ್ಯಾಂಕ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಜೊತೆಗೆ ನಾವು ಮಾತುಕತೆ ನಡೆಸಿದ್ದೇವೆ. ವಂಚನೆ ಪ್ರಕರಣ ಹೊರತುಪಡಿಸಿ, ಬ್ಯಾಂಕ್​ನಿಂದ ತಮ್ಮ ಗ್ರಾಹಕರಿಗೆ 45 ಕೋಟಿ ರೂ. ಸಾಲ ನೀಡಿದ್ದಾರೆ. ಆರ್‌ಬಿಐನಲ್ಲಿ ಬ್ಯಾಂಕಿನ 32 ಕೋಟಿ ಸುರಕ್ಷಿತವಾಗಿದೆ. ಎಲ್ಲ ಠೇವಣಿಗಳಿಗೆ 5 ಲಕ್ಷ ವಿಮೆ ಸೌಲಭ್ಯ ಕಲ್ಪಿಸಲಾಗಿದೆ. ಸಾಲ ವಸೂಲಾತಿ ಮಾಡುತ್ತೇವೆ. ಅಲ್ಲದೇ ಆರ್‌ಬಿಐನಲ್ಲಿರುವ ಹಣವನ್ನು ಬಳಸಿಕೊಂಡು ಠೇವಣಿದಾರರಿಗೆ ಹಣವನ್ನು ಮರು ಪಾವತಿ ಮಾಡುತ್ತೇವೆ ಎಂದು ಬ್ಯಾಂಕ್‌ ಆಡಳಿತ ಮಂಡಳಿ ಭರವಸೆ ನೀಡಿದೆ ಎಂದು ಡಾ. ಭೀಮಾಶಂಕರ ಗುಳೇದ್ ತಿಳಿಸಿದರು.

ಇದನ್ನೂ ಓದಿ : ಗೋಕಾಕ: ಬ್ಯಾಂಕ್ ಸಿಬ್ಬಂದಿ ವಿರುದ್ಧ 74 ಕೋಟಿ ರೂ ವಂಚನೆ ಆರೋಪ, ಠೇವಣಿದಾರರ ಆಕ್ರೋಶ - Bank Fraud Case

Last Updated : Sep 23, 2024, 8:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.