ETV Bharat / state

'ಹಿರಿತನ, ಬುದ್ಧಿಮತ್ತೆ, ಚಾರಿತ್ರ್ಯ ಪರಿಗಣಿಸಿದರೆ ಹಲವರು ಉನ್ನತ ಸ್ಥಾನದಲ್ಲಿರುತ್ತಿದ್ದರು': ಆರ್.ವಿ. ದೇಶಪಾಂಡೆ ಒಡಲಾಳದ ಇಂಗಿತ! - RV Deshpande

ಸಚಿವ ಸ್ಥಾನದ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚೆಯಾಗಲಿ, ಆ ಕುರಿತು ತಲೆನೂ ಕೆಡಿಸಿಕೊಂಡಿಲ್ಲ ಎಂದು ಆರ್​. ವಿ. ದೇಶಪಾಂಡೆ ಸ್ಪಷ್ಟ ಪಡಿಸಿದ್ದಾರೆ.

RV DESHPANDE
ಆರ್.ವಿ. ದೇಶಪಾಂಡೆ (ETV Bharat)
author img

By ETV Bharat Karnataka Team

Published : Jun 27, 2024, 7:44 AM IST

ಆರ್.ವಿ. ದೇಶಪಾಂಡೆ ಹೇಳಿಕೆ (ETV Bharat)

ಕಾರವಾರ: ‘ಸಚಿವ ಸ್ಥಾನದ ಕುರಿತಾಗಿ ಮುಖ್ಯಮಂತ್ರಿಗಳ ಬಳಿ ಯಾವುದೇ ಚರ್ಚೆ ಮಾಡಿಲ್ಲ. ಸಚಿವ ಸ್ಥಾನದ ಬಗ್ಗೆ ವಿಚಾರವನ್ನೂ ಮಾಡಿಲ್ಲ, ತಲೆನೂ ಕೆಡಿಸಿಕೊಂಡಿಲ್ಲ' ಎಂದು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್​​.ವಿ. ದೇಶಪಾಂಡೆ ಹೇಳಿದ್ದಾರೆ.

ರಾಜ್ಯ ಸಂಪುಟದಲ್ಲಿ ಖಾಲಿ ಇರುವ ಸಚಿವ ಸ್ಥಾನಕ್ಕೆ ತಮ್ಮ ಹೆಸರನ್ನು ಪರಿಗಣಿಸುವ ವಿಚಾರವಾಗಿ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಸಚಿವ ಸ್ಥಾನ ಖಾಲಿ ಆಗುತ್ತಿರುತ್ತದೆ. ಅದನ್ನು ಹಾಗೆ ತುಂಬಿಕ್ಕೊಳ್ಳಲಾಗುತ್ತದೆ. ಜಿಲ್ಲೆಯಲ್ಲಿ ಸಚಿವ ಸ್ಥಾನಕ್ಕೆ ನನ್ನ ಹೆಸರು ಚರ್ಚೆಯಾಗುತ್ತಿರುವುದು ಗಮನಕ್ಕೆ ಬಂದಿದೆ. ಆದರೆ ಅನಗತ್ಯ ಚರ್ಚೆಯನ್ನು ಕೈಬಿಡುವುದು ಒಳ್ಳೆಯದು" ಎಂದರು.

ಇನ್ನು ಅವಕಾಶ ಸಿಕ್ಕರೆ ಮತ್ತೆ ಸಚಿವರಾಗುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, "ಅವಕಾಶ ಸಿಕ್ಕರೆ ಯಾರು ತಾನೇ ಬೇಡ ಎನ್ನುತ್ತಾರೆ? ಆದರೆ ಹಿರಿತನ, ಬುದ್ಧಿಮತ್ತೆ, ಚಾರಿತ್ರ್ಯ ಪರಿಗಣಿಸುವುದಾದರೆ ಹಲವರು ಉನ್ನತ ಸ್ಥಾನದಲ್ಲಿರುತ್ತಿದ್ದರು. ಈ ಎಲ್ಲ ಅಂಶಗಳ ಪರಿಗಣನೆ ಈಗ ಉಳಿದಿಲ್ಲ" ಎನ್ನುವ ಮೂಲಕ, ಅರ್ಹನಿದ್ದರೂ ಸಚಿವ ಸ್ಥಾನ ಸಿಗದಿದ್ದಕ್ಕೆ ಪರೋಕ್ಷವಾಗಿ ದೇಶಪಾಂಡೆ ಬೇಸರ ವ್ಯಕ್ತಪಡಿಸಿದರು.

"ಯಾವ ಸಮಯದಲ್ಲಿ ಏನಾಗಬೇಕೋ ಅದು ಆಗುತ್ತದೆ, ತಾಳ್ಮೆ ಇರಬೇಕು. ತಾಳ್ಮೆ ಇದ್ದವರು ಜೀವನದಲ್ಲಿ ಗೆಲ್ಲುತ್ತಾರೆ. ಮುಖ್ಯಮಂತ್ರಿಗಳು ಬೇರೆ ಬೇರೆ ಪ್ರಯೋಗ ಮಾಡಿ ನೋಡುತ್ತಾರೆ. ದೇಶಪಾಂಡೆ ಸಚಿವನಿದ್ದಾಗ ಏನಾಯಿತು. ಈಗ ಮಂಕಾಳು ವೈದ್ಯ ಇದ್ದಾಗ ಏನಾಗುತ್ತಿದೆ ನೋಡಬೇಕಲ್ವಾ" ಎಂದು ಮಾಜಿ ಸಚಿವ ಆರ್.ವಿ.ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: 'ನೀವು ಯೋಗ್ಯರಲ್ಲ ಅಂದ್ಮೇಲೆ ಏನ್‌ ಮಾಡಬೇಕೆಂದು ನೀವೇ ತೀರ್ಮಾನಿಸಿ' - Chalavadi Narayanaswamy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.