ETV Bharat / state

'ಜಲಮಂಡಳಿಯಿಂದ 'RRR ಜನಾಂದೋಲನ': ಅಧ್ಯಕ್ಷ ರಾಮ್​​ ಪ್ರಸಾತ್​ ಮನೋಹರ್​​ - RRR Janandolana

ಬೆಂಗಳೂರು ನಗರದ ಜಲಮೂಲಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಜಲಮಂಡಳಿ ವತಿಯಿಂದ 'ತ್ರಿಬಲ್ ಆರ್ ಜನಾಂದೋಲನ' ಆರಂಭಿಸಲಾಗುತ್ತಿದ್ದು, ನಾಗರಿಕರು ಕೈ ಜೋಡಿಸಬೇಕು ಎಂದು ಜಲಮಂಡಳಿ ಅಧ್ಯಕ್ಷರು ಕರೆ ನೀಡಿದ್ದಾರೆ.

'RRR ಜನಾಂದೋಲನ
'RRR ಜನಾಂದೋಲನ
author img

By ETV Bharat Karnataka Team

Published : Apr 11, 2024, 6:51 AM IST

ಬೆಂಗಳೂರು: ನಗರದ ಜಲಮೂಲಗಳನ್ನು ಪುನಶ್ಚೇತನಗೊಳಿಸುವ ಮೂಲಕ 2026ರ ಜುಲೈ ಒಳಗಾಗಿ ನಗರವನ್ನು ವಾಟರ್​​ ಸರ್‌ಪ್ಲಸ್​​ ಮಾಡಲಾಗುವುದು. ಈ ನಿಟ್ಟಿನಲ್ಲಿ ಜಲಮಂಡಳಿಯಿಂದ 'ತ್ರಿಬಲ್ ಆರ್ ಜನಾಂದೋಲನ' ಆರಂಭಿಸಲಾಗುತ್ತಿದೆ. ಇದಕ್ಕೆ ನಗರದ ನಾಗರಿಕರು ಹೆಚ್ಚಿನ ಪ್ರಮಾಣದಲ್ಲಿ ಕೈ ಜೋಡಿಸಬೇಕು ಎಂದು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಮನವಿ ಮಾಡಿದ್ದಾರೆ.

'RRR ಜನಾಂದೋಲನ
'RRR ಜನಾಂದೋಲನ

ಬುಧವಾರ ನಗರದ ಅರ್ಕಾವತಿ ಮತ್ತು ವೃಷಭಾವತಿ ನದಿ ಪಾತ್ರದ ಪರಿಶೀಲನೆ ನಡೆಸಿದ ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಧ್ಯಕ್ಷರು ಮಾತನಾಡಿದರು. 'ಅರ್ಕಾವತಿ ಮತ್ತು ವೃಷಭಾವತಿ ನದಿಗಳ ಪಾತ್ರದಲ್ಲಿ ಬಹಳಷ್ಟು ಒತ್ತುವರಿಯಾಗಿದ್ದು, ನೀರಿನ ಸಮರ್ಪಕ ಹರಿವಿಗೆ ತೊಂದರೆಯಾಗಿದೆ. ಅದರಂತೆ ವೃಷಭಾವತಿ ಹಾಗೂ ಅರ್ಕಾವತಿ ವ್ಯಾಲಿಯಲ್ಲಿನ ನೀರಿನ ಹರಿವಿನ ಬಗ್ಗೆೆ ಪರಿಶೀಲನೆ ನಡೆಸಲಾಗಿದೆ. ಈ ಒತ್ತುವರಿ ತೆರವುಗೊಳಿಸುವ ಮೂಲಕ ನೀರಿನ ಸರಾಗ ಹರಿವಿಗೆ ಅನುವು ಮಾಡಿಕೊಡುವುದು ಜಲಮಂಡಳಿಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಬೆಂಗಳೂರು ನಾಗರಿಕರ ಪಾತ್ರವೂ ಬಹಳ ಮುಖ್ಯವಾಗಿದ್ದು, ಜನರು ಹೆಚ್ಚಿನ ಸಂಖ್ಯೆೆಯಲ್ಲಿ ಇದರ ಪುನರುಜ್ಜೀವನಕ್ಕೆೆ ಕೈಜೋಡಿಸಬೇಕು' ಎಂದರು.

'ಮಳೆ ನೀರು ಕೊಯ್ಲು ಹಾಗೂ ಅದರ ಮರುಪೂರಣವನ್ನು ಕಡ್ಡಾಯಗೊಳಿಸಲಾಗಿದೆ. ಆದರೆ, ಬಹುಪಾಲು ಜನರು ತಮ್ಮ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಅಳವಡಿಸಿದ್ದರೂ ಅದನ್ನು ಮರುಪೂರಣ ಮಾಡುವ ವ್ಯವಸ್ಥೆೆ ಕಲ್ಪಿಸಿಲ್ಲ. ಸಮರ್ಪಕವಾಗಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡಿರುವ ಹಾಗೂ ಆ ನೀರಿನ ಸದ್ಬಳಕೆ (ಮರುಪೂರಣ ಅಥವಾ ಬಳಕೆ) ಮಾಡಲು ವ್ಯವಸ್ಥೆೆ ಮಾಡಿರುವ ಜನರಿಗೆ ಜಲಮಂಡಳಿ ಪ್ರೋತ್ಸಾಹ ನೀಡಲಿದೆ. ಇದಕ್ಕೆೆ ಹೆಮ್ಮೆಯ ಬೆಂಗಳೂರು ನಾಗರಿಕ ಎನ್ನುವ ಅಭಿಯಾನವನ್ನು ನಡೆಸಲಾಗುವುದು' ಎಂದು ತಿಳಿಸಿದರು.

'ಈ ಅಭಿಯಾನದ ಮೂಲಕ ಸಮರ್ಪಕವಾಗಿ ರೈನ್ ವಾಟರ್ ರಿಚಾರ್ಜಿಂಗ್ ಅಳವಡಿಸಿಕೊಂಡಿರುವ ಕಟ್ಟಡಗಳ ಮೇಲೆ ಜಲಮಂಡಳಿ ವತಿಯಿಂದ ನಮ್ಮ ಹೆಮ್ಮೆಯ ಬೆಂಗಳೂರು ನಾಗರಿಕ ಎನ್ನುವ ಭಿತ್ತಿಪತ್ರವನ್ನು ಅಂಟಿಸಲಾಗುವುದು ಹಾಗೂ ಅವರ ನೀರಿನ ಬಿಲ್‌ನಲ್ಲಿಯೂ ಹೆಮ್ಮೆಯ ಬೆಂಗಳೂರು ನಾಗರಿಕ ಎನ್ನುವುದನ್ನು ನಮೂದಿಸಲಾಗುವುದು. ಮುಂದಿನ ದಿನಗಳಲ್ಲಿ ಈ ಕಟ್ಟಡಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲೂ ಚಿಂತನೆ ನಡೆಸಲಾಗುವುದು' ಎಂದರು.

'RRR ಜನಾಂದೋಲನ
'RRR ಜನಾಂದೋಲನ

'ನಗರದಲ್ಲಿರುವಂತಹ ಕೆರೆಗಳನ್ನು ಪುನಃಶ್ಚೇತನಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ 15 ಕ್ಕೂ ಹೆಚ್ಚು ಕೆರೆಗಳನ್ನು ಸಂಸ್ಕರಿಸಿದ ನೀರಿನಿಂದ ತುಂಬಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಗರದ ವ್ಯಾಪ್ತಿಯಲ್ಲಿರುವಂತಹ 185 ಕೆರೆಗಳನ್ನು ಪುನಶ್ಚೇತನಗೊಳಿಸುವುದು. ಅವುಗಳಲ್ಲಿನ ಹೂಳು ತೆಗೆಯುವುದು, ಉತ್ತಮ ನೀರು ತುಂಬಿಸುವುದರ ಮೂಲಕ ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು' ಎಂದು ಹೇಳಿದರು.

ಇದನ್ನೂ ಓದಿ: 4,000 ನಲ್ಲಿಗಳಿಗೆ ಏರಿಯೇಟರ್​​ ಅಳವಡಿಕೆ: ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್​​ ಮನೋಹರ್​​ - aerators installed

ETV Bharat Logo

Copyright © 2024 Ushodaya Enterprises Pvt. Ltd., All Rights Reserved.