ETV Bharat / state

ರೌಡಿಶೀಟರ್ ಹತ್ಯೆ ಪ್ರಕರಣ: ಕೆಲ ಗಂಟೆಗಳಲ್ಲೇ 12 ಮಂದಿ ಆರೋಪಿಗಳ ಬಂಧನ - Rowdy Sheeter Murder Case - ROWDY SHEETER MURDER CASE

ಕಮ್ಮನಹಳ್ಳಿಯ ಸರ್ವೀಸ್ ಅಪಾರ್ಟ್​ಮೆಂಟ್​ನಲ್ಲಿ ಬರ್ಬರವಾಗಿ ರೌಡಿಶೀಟರ್ ದಿನೇಶ್​ನನ್ನು ಹತ್ಯೆಗೈದು ಪರಾರಿಯಾಗಿದ್ದ 12 ಮಂದಿ ಆರೋಪಿಗಳನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

rowdy sheeter murder case
ರೌಡಿಶೀಟರ್​ ಹತ್ಯೆ ಪ್ರಕರಣದ ಆರೋಪಿಗಳು
author img

By ETV Bharat Karnataka Team

Published : Mar 28, 2024, 7:19 PM IST

ಬೆಂಗಳೂರು: ಕಮ್ಮನಹಳ್ಳಿಯ ಸರ್ವೀಸ್ ಅಪಾರ್ಟ್​ಮೆಂಟ್​ನಲ್ಲಿ ಬರ್ಬರವಾಗಿ ರೌಡಿಶೀಟರ್ ದಿನೇಶ್​ನನ್ನು ಕೊಲೆ ಮಾಡಿ ಪರಾರಿಯಾಗಿದ್ದ 12 ಮಂದಿ ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಬಾಣಸವಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ಪೊಲೀಸರು ತ್ವರಿತಗತಿಯಲ್ಲಿ ತನಿಖೆ ನಡೆಸಿ ಅರವಿಂದ, ದಿಲೀಪ್‌ ಸಾಗರ್, ಅಜಯ್ ಕ್ರಿಸ್ಟೋಫರ್, ನಿಖಿಲ್, ಗೌತಮ್, ಮೆಲ್ವಿನ್, ಕಾರ್ತಿಕ್, ಸತೀಶ್, ಕಿಶೋರ್, ದಿವಾಕರ್ ಹಾಗೂ ಶೇಖರ್ ಸೇರಿದಂತೆ 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳ ಪೈಕಿ ದಿಲೀಪ್ ಸಾಗರ್ ಹಾಗೂ ಅಜಯ್ ಕ್ರಿಸ್ಟೋಫರ್ ಅವರು ರಾಮಮೂರ್ತಿ ನಗರ ಹಾಗೂ ಬಾಣಸವಾಡಿ ಠಾಣೆಯ ರೌಡಿಶೀಟರ್​ಗಳಾಗಿದ್ದಾರೆ. ಆರೋಪಿ ಅರವಿಂದ ಕೊಲೆಗೀಡಾದ ದಿನೇಶ್ ಜೊತೆ ಓಡಾಡುತ್ತಿದ್ದ. ಈ ಹಿಂದೆ ದಿನೇಶ​ನು ರೌಡಿಶೀಟರ್​​ಗಳಿಗೆ ಹಪ್ತಾ ನೀಡುವಂತೆ ಬೆದರಿಸಿದ್ದ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಸಾಯಿಸುವುದಾಗಿ ಹೇಳಿದ್ದ. ಜೊತೆಯಲ್ಲಿದ್ದ ಅರವಿಂದ್​​​ಗೂ ವಾರ್ನ್ ಮಾಡಿದ್ದ. ರೌಡಿಗಳಾದ ದಿಲೀಪ್ ಸಾಗರ್, ಅಜಯ್ ಜೊತೆ ಒಳಸಂಚು ರೂಪಿಸಿದ ಎಲ್ಲರನ್ನು ಒಗ್ಗೂಡಿಸಿಕೊಂಡು ದಿನೇಶ್​ ಹತ್ಯೆ ಪ್ಲ್ಯಾನ್ ರೂಪಿಸಿದ್ದ.

ಈ ವೇಳೆ ಮಾತುಕತೆ ನಡೆಸಲು ಕಮ್ಮನಹಳ್ಳಿಯಲ್ಲಿರುವ ಸರ್ವೀಸ್ ಅಪಾರ್ಟ್​ಮೆಂಟ್ ರೂಮ್ ಬುಕ್‌ ಮಾಡಲು ದಿನೇಶ್ ಹಾಗೂ ಅರವಿಂದ್ ಸಹಚರರು ಬಂದಿದ್ದರು. ರೂಮ್ ಬುಕ್ ಮಾಡಲು ಸಿಬ್ಬಂದಿ ಹಣ ಕೇಳಿದ್ದಕ್ಕೆ ಆರೋಪಿಗಳು ಫೋನ್ ಪೇ ಮಾಡಲು ಮುಂದಾಗಿದ್ದರು. ನೇರವಾಗಿ ಹಣ ನೀಡುವಂತೆ ಕೇಳಿದ್ದಕ್ಕೆ ಎಟಿಎಂಗೆ ಹೋಗಿ ಹಣ ವಿತ್ ಡ್ರಾ ಮಾಡಿಕೊಂಡು ಬರುವುದಾಗಿ ಇಬ್ಬರು ಹೊರ ಹೋಗಿದ್ದರು. ಈ ವೇಳೆ ಸೋಫಾದಲ್ಲಿ ಕುಳಿತಿದ್ದ ದಿನೇಶ್​​ನನ್ನು ಗುರಿಯಾಗಿಸಿ ಏಕಾಏಕಿ ಮಾರಕಾಸ್ತ್ರಗಳಿಂದ ಹತ್ಯೆ ಮಾಡಿದ್ದರು‌.

ರೌಡಿಶೀಟರ್ ದಿನೇಶ್​ನ ಹತ್ಯೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸ​​ರು ವಿಶೇಷ ಆರು ತಂಡಗಳನ್ನು ರಚಿಸಿ ಕೆಲ ಗಂಟೆಗಳಲ್ಲೇ 12 ಮಂದಿ ಆರೋಪಿಗಳನ್ನು ಬಂಧಿಸಿರುವ ಬಗ್ಗೆ ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ಮಾಹಿತಿ ನೀಡಿದ್ದಾರೆ‌.

ಇದನ್ನೂಓದಿ:ಅಕ್ರಮ‌ ಮರಳು ದಂಧೆ ವಿರುದ್ಧ ಕಲಬುರಗಿ ಪೊಲೀಸರ ಸಮರ: 565 ಲೋಡ್ ಮರಳು ಜಪ್ತಿ, 11 ಜನರ ವಿರುದ್ಧ ಎಫ್ಐಆರ್ - Illegal sand racket

ETV Bharat Logo

Copyright © 2025 Ushodaya Enterprises Pvt. Ltd., All Rights Reserved.