ಚಾಮರಾಜನಗರ: ದಿಢೀರ್ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಅಪಾಯಕ್ಕೆ ಸಿಲುಕಿದ್ದ ಪ್ರವಾಸಿಗರನ್ನು ರಕ್ಷಿಸಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರದ ಕಾವೇರಿ ನದಿಯಲ್ಲಿ ನಡೆದಿದೆ.
ಬೆಂಗಳೂರಿನ ಜೆ.ಪಿ.ನಗರ ಮೂಲದ ಒಂದು ಮಗು ಸೇರಿ ಐವರು ಭರಚುಕ್ಕಿ ಜಲಪಾತಕ್ಕೆ ಬಂದಿದ್ದರು. ಬಳಿಕ ಕುಟುಂಬ ಸಮೇತ ಜೀರೋ ಪಾಯಿಂಟ್‌ನ ನೀರು ಹರಿಯುವ ಬಂಡೆಗಳ ಮೇಲೆ ಹೋಗಿದ್ದರು. ಈ ವೇಳೆ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಶೇಖರಿಸಿದ್ದ ನೀರನ್ನು ದಿಢೀರನೇ ನದಿಗೆ ಹರಿಬಿಡಲಾಗಿದೆ. ಪರಿಣಾಮ ಪ್ರವಾಸಿಗರು ದಡಕ್ಕೆ ಬರಲಾಗದೇ ಬಂಡೆಗಳ ಬಳಿ ಸಿಲುಕಿದ್ದರು.
ಇದನ್ನು ಕಂಡ ತೆಪ್ಪ ನಡೆಸುವವರಾದ ಶಾಂತರಾಜು, ಭೈರನಾಯಕ, ಗೋವಿಂದನಾಯ್ಕ ಇತರರು ತಕ್ಷಣ ತೆಪ್ಪ ಸಮೇತ ಧಾವಿಸಿ ನಡುನೀರಿನಲ್ಲಿ ಸಿಲುಕಿದ್ದವರನ್ನು ದಡಕ್ಕೆ ಕರೆತಂದು ಜೀವ ಉಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ಮುಂದುವರಿದ ಮಳೆ ಆರ್ಭಟ: 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ - karnataka rain alert