ETV Bharat / state

ಶಿವಮೊಗ್ಗದ ರಾಗಿಗುಡ್ಡದಲ್ಲಿ ಶಾಂತಿ ನೆಲೆಸಲು ರಿಪಬ್ಲಿಕ್ ಡೇ ಕಪ್ ಕ್ರಿಕೆಟ್ ಆಯೋಜನೆ

ಶಿವಮೊಗ್ಗ ರಾಗಿಗುಡ್ಡ ಬಡಾವಣೆಯಲ್ಲಿ ಶಾಂತಿ, ಸೌಹಾರ್ದತೆ ತರಲು ಪೊಲೀಸ್ ಇಲಾಖೆ ರಿಪಬ್ಲಿಕ್ ಡೇ ಕಪ್ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಂಡಿದೆ. ರಿಪಬ್ಲಿಕ್ ಡೇ ಕಪ್ ಕ್ರಿಕೆಟ್​ ಪಂದ್ಯದಲ್ಲಿ ಎಂಟು ತಂಡಗಳು ಭಾಗಿಯಾಗಿದ್ದು,ಒಂದು ತಂಡದಲ್ಲಿ ಇಬ್ಬರು ಪೊಲೀಸರು, ಇಬ್ಬರು ಪತ್ರಕರ್ತರು ಉಳಿದವರು ಎಲ್ಲ ಧರ್ಮದವರು ಇರುವಂತೆ ನೋಡಿಕೊಳ್ಳಲಾಗಿದೆ.

Republic Day Cup cricket tournament inaugurated by SP Mithun Kumar
ರಿಪಬ್ಲಿಕ್ ಡೇ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಎಸ್ಪಿ ಮಿಥುನ್ ಕುಮಾರ್ ಚಾಲನೆ ನೀಡಿದರು.
author img

By ETV Bharat Karnataka Team

Published : Jan 24, 2024, 9:14 PM IST

Updated : Jan 24, 2024, 11:01 PM IST

ರಿಪಬ್ಲಿಕ್ ಡೇ ಕಪ್ ಕ್ರಿಕೆಟ್ ಆಯೋಜನೆ

ಶಿವಮೊಗ್ಗ: ಕೆಲವು ತಿಂಗಳ ಹಿಂದೆ ನಗರದ ರಾಗಿಗುಡ್ಡ ಬಡಾವಣೆಯಲ್ಲಿ ಈದ್ ಮಿಲಾದ್ ವೇಳೆ ಕಲ್ಲು ತೂರಾಟ ಹಾಗೂ ಗಲಾಟೆಯಿಂದ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು. ಕೆಲ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಇದರಿಂದ ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಗಲಾಟೆಯಲ್ಲಿ ಭಾಗಿಯಾಗಿದವರ ವಿರುದ್ಧ ಪೊಲೀಸರು ಕೇಸ್​ ಕೂಡಾ ದಾಖಲಿಸಿದ್ದರು.

ಅನೇಕರು ಇಂದಿಗೂ ಸಹ ಮನೆಯಿಂದ ಹೋದವರು ವಾಪಸ್ ಆಗಿಲ್ಲ. ನಗರದ ರಾಗಿಗುಡ್ಡದಲ್ಲಿರುವ ಭಯದ ವಾತಾವರಣ ಕಡಿಮೆ ಮಾಡಲು ಈಗ ಜಿಲ್ಲಾ ಪೊಲೀಸ್ ಇಲಾಖೆ ರಿಪಬ್ಲಿಕ್ ಡೇ ಕಪ್ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿ, ಸೌಹಾರ್ದತೆ ಸಾರಲು ಮುಂದಾಗಿದೆ.

ರಿಪಬ್ಲಿಕ್ ಡೇ ಕಪ್ ಪಂದ್ಯದಲ್ಲಿ ಒಟ್ಟು ಎಂಟು ತಂಡಗಳು ಭಾಗಿಯಾಗಿವೆ. ಇಲ್ಲಿ ಒಂದು ತಂಡದಲ್ಲಿ ಇಬ್ಬರು ಪೊಲೀಸರು, ಇಬ್ಬರು ಪತ್ರಕರ್ತರು ಉಳಿದವರು ಎಲ್ಲ ಧರ್ಮದವರು ಇರುವಂತೆ ನೋಡಿಕೊಳ್ಳಲಾಗಿದೆ. ಈ ಪಂದ್ಯಾವಳಿ ಮೂಲಕ ರಾಗಿಗುಡ್ಡದಲ್ಲಿ ಸೌಹರ್ದತೆ ಜಾರಿಗೆ ತರಲು ಪೊಲೀಸ್ ಇಲಾಖೆ ಪ್ರಯತ್ನಿಸುತ್ತಿದೆ. ಇಂದು ಮತ್ತು ನಾಳೆ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಗೆದ್ದ ತಂಡಕ್ಕೆ ಜನವರಿ 26 ಎಂದು ಡಿಎಆರ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ನಡೆಯಲಿದೆ.

ಅಹಿತಕರ ಘಟನೆ ಮರೆಯಿರಿ: ಕ್ರಿಕೆಟ್ ಆಯೋಜನೆ ಕುರಿತು ಎಸ್ಪಿ ಮಿಥುನ್ ಕುಮಾರ್ ಮಾತನಾಡಿ, ಕಳೆದ 3 ತಿಂಗಳ ಹಿಂದೆ ರಾಗಿಗುಡ್ಡದಲ್ಲಿ ನಡೆದ ಅಹಿತಕರ ಘಟನೆ ಎಲ್ಲರಿಗೂ ತಿಳಿದಿದೆ.‌ ಈ ಕುರಿತು ಕಾನೂನಾತ್ಮಕವಾದ ಕೆಲಸ ನಡೆಯುತ್ತಿದೆ. ಹಿಂದೆ ನಡೆದ ಅಹಿತಕರ ಘಟನೆಯನ್ನು ಮರೆತು ಮುಂದುವರಿಯಬೇಕಾಗಿದೆ.

ಈಗ ನಾವು ಬೇರೆಯವರಿಗೆ ರೂಲ್‌ ಮಾಡಲ್ ಆಗಬೇಕಿದೆ. ಇದರಿಂದ ಕ್ರಿಕೆಟ್ ಪಂದ್ಯಾವಳಿ ಪೊಲೀಸ್ ಇಲಾಖೆ ಆಯೋಜಿಸಿದೆ. ಇಲ್ಲಿ ಪ್ರತಿಯೊಂದು ಟೀಂನಲ್ಲೂ ಎಲ್ಲ ವರ್ಗದವರನ್ನು ಸೇರಿಸಿ ಟೀಂ ಮಾಡಲಾಗಿದೆ. ಇಲ್ಲಿ ಪೊಲೀಸ್, ಪ್ರೆಸ್ ಸೇರಿದಂತೆ ಎಲ್ಲರನ್ನು ಒಳಗೊಂಡ ತಂಡ ಮಾಡಲಾಗಿದೆ. ಎಲ್ಲರೂ ಚೆನ್ನಾಗಿ ಆಟ ಆಡಿ ಎಂದ ಅವರು, ಕ್ರೀಡೆಯಲ್ಲಿ ಗೆಲ್ಲುವುದಕ್ಕಿಂತ ಭಾಗವಹಿಸುವಿಕೆ ಮುಖ್ಯ ಎಂದು ತಿಳಿಸಿದರು.

ಜಯದೇವಪ್ಪ ಮಾತನಾಡಿ, ನಮ್ಮ‌ ಏರಿಯಾದಲ್ಲಿ ಅಹಿತಕರ ಘಟನೆ ನಡೆದಿತ್ತು. ಇದರಿಂದ ನಮ್ಮಲ್ಲಿ ಕೆಲ ಗೊಂದಲ ಉಂಟಾಗಿತ್ತು. ಇದರಿಂದ ಪೊಲೀಸ್ ಇಲಾಖೆಯು ಈಗ ರಾಗಿಗುಡ್ಡದ ಎಲ್ಲ ಸಮಾಜದವರನ್ನು ಒಳಗೊಂಡಂತೆ ಕ್ರಿಕೆಟ್ ಪಂದ್ಯಾವಳಿ ನಡೆಸಲಾಗುತ್ತಿದೆ. ಎಲ್ಲ ಯುವಕರನ್ನು ಒಳಗೊಂಡ ಕಾರ್ಯಪಡೆ ಮಾಡಲಾಗಿದೆ. ಇದರಲ್ಲಿ ಹಿಂದೂ, ಕ್ರಿಶ್ಚಿಯನ್ ಹಾಗೂ ಕ್ರೈಸ್ತ ಸೇರಿದಂತೆ ಎಲ್ಲ ಸಮಾಜದವರು ಇದ್ದಾರೆ. ಈಗ ಕ್ರಿಕೆಟ್ ಆಟ ಆಡಿಸುವ ಮೂಲಕ ಗೊಂದಲಕ್ಕ ತೆರೆ ಎಳೆಯಲು ಪೊಲೀಸ್ ಇಲಾಖೆ ಪ್ರಯತ್ನಿಸುತ್ತಿದೆ. ಈ ಕಾರ್ಯ ಸ್ವಾಗತರ್ಹ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂಓದಿ:ಭೂಮಿ ಮೇಲೆ ಇರುವವರೆಗೆ ಪ್ರತಿಯೊಬ್ಬರು ದುಡಿದು ತಿನ್ನಬೇಕು: ಗವಿಸಿದ್ಧೇಶ್ವರ ಶ್ರೀ ಸಲಹೆ

Last Updated : Jan 24, 2024, 11:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.