ETV Bharat / state

ದರ್ಶನ್ ಹೌಸ್​ಕೀಪರ್​ ಮನೆಯಲ್ಲಿ ಸ್ಥಳ ಮಹಜರು: 30 ಲಕ್ಷ ರೂ. ಸೀಜ್ ಮಾಡಿದ ಪೊಲೀಸರು - Renukaswamy murder case

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ನಟ ದರ್ಶನ್ ಮನೆಯ ಕೆಲಸಗಾರನಾಗಿದ್ದ ಆರೋಪಿ ಪವನ್ ಮನೆಯಲ್ಲಿ ಮಹಜರು ನಡೆಸಿ, 30 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದರ್ಶನ್ ಮನೆಯ ಕೆಲಸಗಾರನ ಮನೆಯಲ್ಲಿ ಮಹಜರು
ದರ್ಶನ್ ಮನೆಯ ಕೆಲಸಗಾರನ ಮನೆಯಲ್ಲಿ ಮಹಜರು (ETV Bharat)
author img

By ETV Bharat Karnataka Team

Published : Jun 15, 2024, 3:52 PM IST

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು, ಆರೋಪಿಗಳಾದ ಪವನ್ ಮತ್ತು ನಿಖಿಲ್​ನನ್ನು ಮಹಜರಿಗೆ ಒಳಪಡಿಸಿದರು. ಬನಶಂಕರಿ 6ನೇ ಹಂತದಲ್ಲಿರುವ ಪವನ್ ಮನೆಗೆ ಇಬ್ಬರನ್ನೂ ಕರೆದೊಯ್ದು ತನಿಖೆ ನಡೆಸಿದರು. ಈ ವೇಳೆ ಮನೆಯಲ್ಲಿದ್ದ 30 ಲಕ್ಷ ಹಣವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ರೇಣುಕಾಸ್ವಾಮಿಯನ್ನ ಅಪಹರಿಸುವಂತೆ ಚಿತ್ರದುರ್ಗದ ರಾಘವೇಂದ್ರಗೆ ದರ್ಶನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್ ಸೂಚಿಸಿದ್ದನಂತೆ. ಅಪಹರಿಸಿದ ಬಳಿಕ ಪಟ್ಟಣಗೆರೆ ಶೆಡ್​ನಲ್ಲಿ ದರ್ಶನ್ ಸೇರಿ ಬಂಧಿತ ಆರೋಪಿಗಳೆಲ್ಲರೂ ಮಾರಣಾಂತಿಕ ಹಲ್ಲೆ ಮಾಡಿ ಹತ್ಯೆಗೈದಿದ್ದರಂತೆ. ಕೊಲೆಯಾಗುತ್ತಿದ್ದಂತೆ ರಾಘವೇಂದ್ರ, ನಿಖಿಲ್ ಸೇರಿ ನಾಲ್ವರಿಗೆ ಹತ್ಯೆ ಆರೋಪವನ್ನ ಒಪ್ಪಿಕೊಳ್ಳುವಂತೆ ಹೇಳಿ 30 ಲಕ್ಷ ಡೀಲ್ ಮಾಡಿಕೊಂಡಿತ್ತಂತೆ. ಇದರಂತೆ ಇಬ್ಬರಿಗೆ 5 ಲಕ್ಷ ನೀಡಿ ಬಂಧನ ಬಳಿಕ ಮನೆಯವರಿಗೆ ನೀಡುವುದಾಗಿ ಒಪ್ಪಂದವಾಗಿತ್ತಂತೆ. ಶರಣಾಗತಿಯಾದ ನಾಲ್ವರಿಗೆ ನೀಡಬೇಕಾಗಿದ್ದ 30 ಲಕ್ಷ ಹಣವನ್ನ ಪವನ್ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದನಂತೆ. ಅಲ್ಲದೆ, ನಿಖಿಲ್ ತನಗೆ ನೀಡಿದ್ದ 5 ಲಕ್ಷ ಹಣವನ್ನ ಪವನ್ ಬಳಿ ನೀಡಿದ್ದ ಎಂದು ಪೊಲೀಸ್ ವಿಚಾರಣೆಯಲ್ಲಿ ತಿಳಿದುಬಂದಿತ್ತು. ಇದರಂತೆ ಇಬ್ಬರನ್ನ ಮಹಜರಿಗೆ ಕರೆದೊಯ್ದು 30 ಲಕ್ಷ ಹಣ ಸೀಜ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪೊಲೀಸರು ವಶಕ್ಕೆ ಪಡೆದ ಸ್ಕಾರ್ಪಿಯೋ
ಪೊಲೀಸರು ವಶಕ್ಕೆ ಪಡೆದ ಸ್ಕಾರ್ಪಿಯೋ (ETV Bharat)

ಇದನ್ನೂ ಓದಿ: ನಟ ದರ್ಶನ್ ವಿರುದ್ಧ ರೌಡಿಶೀಟ್?: ಈ ಕ್ರಮಕ್ಕೆ ಪರಿಗಣಿಸಲಾಗುವ ಮಾನದಂಡಗಳಿವು! - Criteria to open a rowdy sheet

ಸಾಕ್ಷಿ ನಾಶಕ್ಕೆ ಸಿದ್ಧತೆ: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳು ಆತ ಮೃತಪಟ್ಟಿರುವುದು ಖಚಿತವಾದ ನಂತರ ಸಾಕ್ಷಿ ನಾಶಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನ ಮಾಡಿಕೊಂಡಿದ್ದರು ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಪಟ್ಟಣಗೆರೆಯ ಶೆಡ್​​ನಿಂದ ರೇಣುಕಾಸ್ವಾಮಿಯ ಮೃತದೇಹವನ್ನ ಸುಮ್ಮನಹಳ್ಳಿಯ ರಾಜಕಾಲುವೆವರೆಗೂ ಸಾಗಿಸಿದ್ದ ಸ್ಕಾರ್ಪಿಯೋ ಕಾರನ್ನ ಸಂಪೂರ್ಣವಾಗಿ ಶುಚಿಗೊಳಿಸಿದ್ದರು. ಕಾರಿನ ಹಿಂಬದಿಯಲ್ಲಿದ್ದ ದರ್ಶನ್ ಸಿನಿಮಾದ ಸ್ಟಿಕ್ಕರ್, 'ಡಿ ಬಾಸ್' ಹೆಸರಿನ ಬರಹವನ್ನ ತೆಗೆದು ಹಾಕಿರುವುದು ತಿಳಿದು ಬಂದಿದೆ.

ಆರೋಪಿಗಳು ಮೃತದೇಹ ಸಾಗಿಸಿದ ಬಳಿಕ ಪುನೀತ್ ಹಾಗೂ ಹೇಮಂತ್ ಸೇರಿ ಕಾರಿನಲ್ಲಿದ್ದ ರಕ್ತದ ಕಲೆಗಳನ್ನ ಶುಚಿಗೊಳಿಸಿದ್ದರು. ಆದರೆ ಕಾರಿನ ಕಾರ್ಪೆಟ್ ಕೆಳಗೆ ರಕ್ತದ ಕಲೆಗಳು ಪತ್ತೆಯಾಗಿದ್ದು, ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸರು ರವಾನಿಸಿದ್ದಾರೆ. ಪೊಲೀಸರು ಜಪ್ತಿ ಮಾಡಿರುವ ಅದೇ ಕಾರಿನಲ್ಲಿ ಸ್ಟಿಕ್ಕರ್​​ಗಳನ್ನ ತೆಗೆದು ಹಾಕಿರುವುದು ಪತ್ತೆಯಾಗಿದೆ. ಸದ್ಯ ಆರೋಪಿಗಳು ಕಾರನ್ನ ಶುಚಿಗೊಳಿಸಿದ್ದ ವಾಶಿಂಗ್ ಸೆಂಟರಿನಿಂದಲೂ ಕೆಲ ಸಾಕ್ಷಿಗಳನ್ನ ಕಲೆ ಹಾಕಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಸಂಕಷ್ಟದಿಂದ ಪಾರಾಗಲು ದರ್ಶನ್ ಭಾವನಿಂದ ಕೈಗಾದಲ್ಲಿ ವಿಶೇಷ ಪೂಜೆ - Special Puja by Darshan relative

ETV Bharat Logo

Copyright © 2024 Ushodaya Enterprises Pvt. Ltd., All Rights Reserved.