ETV Bharat / state

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಚಾರ್ಜ್​ಶೀಟ್​ನಲ್ಲಿ ದರ್ಶನ್ A2 ಆರೋಪಿಯಾಗಿ ಮುಂದುವರಿಕೆ - Darshan continue as A2 accused - DARSHAN CONTINUE AS A2 ACCUSED

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಪ್ರಾಥಮಿಕ ಚಾರ್ಜ್​ ಶೀಟ್​ ಸಲ್ಲಿಕೆ ಮಾಡಿದ್ದು, ದರ್ಶನ್​ ಅವರನ್ನು ಎ2 ಆರೋಪಿಯಾಗಿಯೇ ಮುಂದುವರಿಸಲಾಗಿದೆ.

Actor Darshan
ನಟ ದರ್ಶನ್​ (ETV Bharat)
author img

By ETV Bharat Karnataka Team

Published : Sep 4, 2024, 3:32 PM IST

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ನ್ಯಾಯಾಲಯಕ್ಕೆ 3,991 ಪುಟಗಳ ಸುದೀರ್ಘ ಚಾರ್ಜ್​ಶೀಟ್​ ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳುವಾಗ A2 ಆರೋಪಿಯಾಗಿದ್ದ ದರ್ಶನ್ ಅವರನ್ನು ಚಾರ್ಜ್​ಶೀಟ್​ನಲ್ಲಿ A1 ಆರೋಪಿಯಾಗಿ ಬದಲಿಸಬಹುದು ಎನ್ನಲಾಗಿತ್ತು. ಆದರೆ, ಚಾರ್ಜ್​ಶೀಟ್​ನಲ್ಲಿ ಆರೋಪಿಗಳನ್ನು ಯಥಾವತ್ ಮುಂದುವರೆಸಲಾಗಿದೆ.

17 ಆರೋಪಿಗಳ ವಿರುದ್ಧ ಸಲ್ಲಿಕೆಯಾಗಿರುವ ಚಾರ್ಜ್​ಶೀಟ್​ನಲ್ಲಿ 3 ಪ್ರತ್ಯಕ್ಷ ಸಾಕ್ಷ್ಯಗಳು, ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್ಎಸ್ಎಲ್) ಹಾಗೂ ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯ (ಸಿಎಫ್ಎಸ್ಎಲ್) ದಿಂದ ಪಡೆದಿರುವ 8 ವರದಿಗಳನ್ನೂ ಉಲ್ಲೇಖಿಸಲಾಗಿದೆ. ತನಿಖೆ ಇನ್ನೂ ಸಹ ಪೂರ್ಣಗೊಂಡಿಲ್ಲದಿರುವುದರಿಂದ ಸಿಆರ್​ಪಿಸಿ 173(8) ಅಡಿ ನ್ಯಾಯಾಲಯಕ್ಕೆ ಪ್ರಾಥಮಿಕ ಚಾರ್ಜ್​ಶೀಟ್ ಸಲ್ಲಿಕೆ ಮಾಡಲಾಗಿದೆ.

ದರ್ಶನ್ ಪಾತ್ರವೇನು?: ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಅಪಹರಣ ಮಾಡಿಸಿರುವುದು, ಹಲ್ಲೆ ಮಾಡಿರುವುದು, ಹತ್ಯೆಯ ನಂತರ ಪ್ರಕರಣವನ್ನು ಮುಚ್ಚಿಹಾಕಲು ಹಣ ನೀಡಿರುವುದು ದರ್ಶನ್ ಎಂಬುದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಪವಿತ್ರಾ ಗೌಡ ಪಾತ್ರ: ರೇಣುಕಾಸ್ವಾಮಿಯ ಹತ್ಯೆ ಪ್ರಕರಣದ A1 ಆರೋಪಿಯಾಗಿರುವ ಪವಿತ್ರಾ ಗೌಡ, ಹತ್ಯೆಯ ನಡೆಯುವ ಸ್ಥಳದಲ್ಲಿ ಹಾಜರಿದ್ದರು. ಮತ್ತು ರೇಣುಕಾಸ್ವಾಮಿಗೆ ಚಪ್ಪಲಿಯಲ್ಲಿ ಹೊಡೆದಿದ್ದಾರೆ. ಕೃತ್ಯದ ಸಂದರ್ಭದಲ್ಲಿ ಆ ಸ್ಥಳದಲ್ಲಿ ಆ್ಯಕ್ಟಿವ್ ಆಗಿದ್ದ ಪವಿತ್ರ ಗೌಡ ಅವರ ಮೊಬೈಲ್ ನಂಬರ್ ಅವರ ಭಾಗಿಯ ಕುರಿತು ಸಾಕ್ಷ್ಯವಾಗಿದೆ ಎಂದು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

ಪವಿತ್ರಾ ಗೌಡ, ದರ್ಶನ್ ಸೇರಿದಂತೆ 14 ಆರೋಪಿಗಳ ವಿರುದ್ಧ ಅಪಹರಣ, ಹತ್ಯೆ, ಸಾಕ್ಷ್ಯನಾಶ, ಒಳಸಂಚಿನ ಆರೋಪವಿದೆ. ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ನಾಯಕ್ ವಿರುದ್ಧ ಸಾಕ್ಷ್ಯ ನಾಶದ ಆರೋಪದಡಿ ಚಾರ್ಜ್​ಶೀಟ್​ ಸಲ್ಲಿಸಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ‌.

ಇದನ್ನೂ ಓದಿ: ದರ್ಶನ್​ ಇರುವ ಸೆಲ್​ಗೆ ಹಳೇ ಟಿವಿಯನ್ನೇ ರಿಪೇರಿ ಮಾಡಿ ನೀಡಲು ತಯಾರಿ - Darshan

ETV Bharat Logo

Copyright © 2025 Ushodaya Enterprises Pvt. Ltd., All Rights Reserved.