ETV Bharat / state

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್, ಪವಿತ್ರಾ ಗೌಡಗೆ ಇಂದೂ ಸಿಗಲಿಲ್ಲ ಜಾಮೀನು - RENUKASWAMY MURDER CASE

ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್‌ ಅವರ ಜಾಮೀನು ಅರ್ಜಿ ವಿಚಾರಣೆ 57ನೇ ಸಿಸಿಎಚ್‌ ನ್ಯಾಯಾಲಯದಲ್ಲಿ ಇಂದು ನಡೆಯಿತು.

ದರ್ಶನ್
ದರ್ಶನ್ (ETV Bharat)
author img

By ETV Bharat Karnataka Team

Published : Oct 9, 2024, 7:29 PM IST

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬಂಧನಕ್ಕೊಳಗಾಗಿರುವ ಎ2 ಆರೋಪಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಇಂದು ನಗರದ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನಡೆಯಿತು. ಪೊಲೀಸ್​ ಪರ ಸರ್ಕಾರಿ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್ ವಾದ ಮಂಡಿಸಿ, ತನಿಖೆಯಲ್ಲಿ ಲೋಪವಾಗಿದೆ ಎಂದಿದ್ದ ದರ್ಶನ್ ಪರ ವಕೀಲ ಸಿ.ವಿ.ನಾಗೇಶ್ ವಾದಕ್ಕೆ ಸ್ಪಷ್ಟನೆ ನೀಡಿದರು.

ಎಸ್​ಪಿಪಿ ವಾದ: ಹತ್ಯೆ ಪ್ರಕರಣದಲ್ಲಿ ಶರಣಾಗಲು ಬಂದ ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಕೃತ್ಯದ ಹಿಂದೆ ಕಾಣದ ಕೈಗಳು ಅಡಗಿವೆ ಎಂಬ ವಿಚಾರ ಜೂ.10ರ ರಾತ್ರಿ ತಿಳಿಯಿತು. ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಜೂ.11ರಂದು ದರ್ಶನ್ ಸೇರಿ ಇತರ ಆರೋಪಿಗಳನ್ನು ಬಂಧಿಸಲಾಯಿತು.

12ರಂದು ಪಟ್ಟಣಗೆರೆ ಶೆಡ್​ಗೆ ಕರೆದೊಯ್ದು ಮಹಜರು ಮಾಡಲಾಯಿತು. ಜೂ.13ರಂದು ಶೆಡ್​ನಲ್ಲಿ ಕೆಲಸ ಮಾಡುತ್ತಿದ್ದ ಕಾವಲುಗಾರನ ಹೇಳಿಕೆಯನ್ನು ದಾಖಲು ಮಾಡಿಕೊಳ್ಳಲಾಯಿತು. ಅಲ್ಲಿ ಕೆಲಸ ಮಾಡುತ್ತಿದ್ದ ಇತರ ಸಾಕ್ಷಿಗಳನ್ನು ಸಂಪರ್ಕಿಸಿ ಹೇಳಿಕೆ ಪಡೆಯಲಾಗಿದೆ. ಸಾಕ್ಷಿಗಳ ಹೇಳಿಕೆ ದಾಖಲು ವಿಚಾರದಲ್ಲಿ ವಿಳಂಬ ತೋರಿಸಿಲ್ಲ.

ಪಂಚನಾಮೆ ವೇಳೆ ಬಟ್ಟೆ ಹಾಗೂ ಚಪ್ಪಲಿ‌ ಮನೆಯಲ್ಲಿರುವುದಾಗಿ ಆರೋಪಿ ದರ್ಶನ್ ಹೇಳಿಕೆ ನೀಡಿದ್ದು, ಅದರಂತೆ ನಮೂದಿಸಲಾಗಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಪಂಚನಾಮೆ ವೇಳೆ ಹೇಳಿಕೆ ಯಥಾವತ್ ದಾಖಲಿಸಿಕೊಳ್ಳಲಾಗಿದೆ. ಅದರಂತೆ ದರ್ಶನ್ ಮನೆಯಲ್ಲಿ ಹತ್ಯೆ ಸಂದರ್ಭದಲ್ಲಿ ಧರಿಸಿದ್ದ ಬಟ್ಟೆ ವಶಕ್ಕೆ ಪಡೆಯಲಾಗಿದೆ. ಬಳಿಕ ಆತನ ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ನೀಲಿ ಬಣ್ಣದ ಲೋಫರ್ಸ್ ಕಂಪನಿ ಶೂ ಜಪ್ತಿ ಮಾಡಲಾಯಿತು. ಚಪ್ಪಲಿ ಎಂದು ಹೇಳಿಕೆ ಪಡೆದು ಶೂ ರಿಕವರಿ ಮಾಡಿದ್ದಾರೆ ಎಂಬ ದರ್ಶನ್ ಪರ ವಕೀಲರ ವಾದಕ್ಕೆ ಸರ್ಕಾರಿ ವಿಶೇಷ ಅಭಿಯೋಜಕ ಪ್ರಸನ್ನ ಕುಮಾರ್ ತಿರುಗೇಟು ನೀಡಿದರು.

ದರ್ಶನ್ ಧರಿಸಿದ್ದ ಬಟ್ಟೆಯನ್ನು ಕುಕ್ಕಿ ಕುಕ್ಕಿ ಒಗೆದಿದ್ದರಿಂದ ರಕ್ತದ ಕಲೆಯಿರಲು ಸಾಧ್ಯವೇ? ಎಂಬ ಆರೋಪಿ ಪರ ವಕೀಲರ ಪ್ರಶ್ನೆಗೆ ಸ್ಪಷ್ಟನೆ ನೀಡಿ, ದರ್ಶನ್ ಬಟ್ಟೆ ಒಗೆಯಲು ಮನೆ ಕೆಲಸದವರಿಗೆ ಪವನ್ ಸೂಚಿಸಿದ್ದ. ಬಟ್ಟೆಯನ್ನು ಕುಕ್ಕಿ ಒಗೆದಿರುವ ಬಗ್ಗೆ ಕೆಲಸಗಾರನ ಹೇಳಿಕೆ ದಾಖಲಿಸಲಾಗಿದೆ. ಬಟ್ಟೆ ಒಗೆದ ಮೇಲೂ ಬರಿಗಣ್ಣಿಗೆ ಕಾಣದ ಅಂಶವು ಡಿಎನ್ಎ ಪರೀಕ್ಷೆಯಲ್ಲಿ ಪತ್ತೆ ಹಚ್ಚಲು ಸಾಧ್ಯವಿದೆ. 40ರಿಂದ 80 ಡಿಗ್ರಿ ಉಷ್ಣಾಂಶದಲ್ಲಿ ಒಣಗಿಸಿದ್ದರೂ ಡಿಎನ್​ಎನಲ್ಲಿ ಪರೀಕ್ಷೆಯಲ್ಲಿ ರಕ್ತದ ಕಲೆ ಪತ್ತೆ ಹಚ್ಚಬಹುದಾಗಿದೆ.

ಲಾಂಡ್ರಿ, ವಾಷಿಂಗ್ ಪೌಡರ್​ನಿಂದ ಒಗೆದರೂ ಪತ್ತೆ ಹಚ್ಚಬಹುದಾಗಿದೆ. ಡಿಎನ್​ಎ ವರದಿ ಶೇ.100ರಷ್ಟು ನಿಖರತೆ ಹೊಂದಿದೆ ಎಂದು ವೈಜ್ಞಾನಿಕ ವರದಿಗಳು ತಿಳಿಸಿವೆ. ದರ್ಶನ್, ಪವಿತ್ರಾಗೌಡ, ರವಿ ಸೇರಿದಂತೆ ಇನ್ನಿತರು ಕೃತ್ಯದ ವೇಳೆ ಧರಿಸಿದ್ದ ಬಟ್ಟೆಗಳನ್ನು ಎಫ್​ಎಸ್​ಎಲ್​ಗೆ ಕಳುಹಿಸಲಾಗಿದ್ದು‌, ವರದಿಯಲ್ಲಿ ರೇಣುಕಾಸ್ವಾಮಿ ಡಿಎನ್​ಎಗೆ ಹೋಲಿಕೆಯಾಗಿದೆ ಎಂದು ಪ್ರತಿಪಾದಿಸಿದರು.

ದರ್ಶನ್ ಚಲನವಲನ, ಸಿಸಿಟಿವಿ ಟವರ್ ಲೊಕೇಷನ್ ಪತ್ತೆಯಾಗಿದೆ‌. ಹತ್ಯೆಯ ಷಡ್ಯಂತ್ರದ ಬಗ್ಗೆ ದರ್ಶನ್​ಗೆ ಅರಿವಿತ್ತು. ಆತನ ಶೂನಲ್ಲಿದ್ದ ಮಣ್ಣಿನ ಮಾದರಿ ಸಂಗ್ರಹಿಸಲಾಗಿದೆ. ಇದು ಕೃತ್ಯದ ಸ್ಥಳದ ಮಣ್ಣಿಗೂ ಮ್ಯಾಚ್ ಆಗಿದೆ ಎಂದು ತಿಳಿಸಿದರು.

ರಿಮ್ಯಾಂಡ್ ಅರ್ಜಿಯಲ್ಲಿ ಸಾಕ್ಷಿಗಳ ಹೆಸರು ಉಲ್ಲೇಖವಾಗದಿರುವ ಬಗ್ಗೆ ದರ್ಶನ್​ ಪರ ವಕೀಲರ ವಾದಕ್ಕೆ ಪ್ರತಿವಾದಿಸಿದ ಪ್ರಸನ್ನ ಕುಮಾರ್, ಕೇಸ್ ಡೈರಿಯಲ್ಲಿ ಸಾಕ್ಷಿಗಳ ಹೆಸರು ಇರಬೇಕೇ ಹೊರತು ರಿಮ್ಯಾಂಡ್ ಅರ್ಜಿಯಲ್ಲಿ ಅಲ್ಲ. ಹೆಸರುಗಳನ್ನ‌ು ಉಲ್ಲೇಖಿಸಬೇಕೆಂಬ ನಿಯಮವಿಲ್ಲ. ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಸಹ ಕೇಸ್ ಡೈರಿ ಪರಿಶೀಲಿಸಿದೆ ಎಂದು ಬರೆದಿದೆ. ಅಲ್ಲದೆ ರಿಮ್ಯಾಂಡ್ ಅರ್ಜಿ ಜೊತೆ ಕೇಸ್ ಡೈರಿ ಹಾಜರುಪಡಿಸಲಾಗಿದೆ ಎಂದರು.

ಎ8 ಆರೋಪಿ ರವಿ ಚಾಲಕನಾದರೂ ರೇಣುಕಾಸ್ವಾಮಿ ಅಪಹರಣದಲ್ಲಿ ಪಾತ್ರವಿದೆ. ಹೀಗಾಗಿ ಪವಿತ್ರಾ, ದರ್ಶನ್, ರವಿ, ನಾಗರಾಜ್ ಹಾಗೂ ಲಕ್ಷ್ಮಣ್​ಗೆ ಜಾಮೀನು ನೀಡಬಾರದು. ಎ13 ದೀಪಕ್ ವಿರುದ್ಧ ಕೊಲೆ ಹಾಗೂ ಅಪಹರಣದ ಆರೋಪವಿಲ್ಲ, ಸಾಕ್ಷಿ‌ ನಾಶಪಡಿಸಿದ ಆರೋಪವಿದೆ. ಇದು ಜಾಮೀನು‌ ನೀಡಬಹುದಾದ ಅಪರಾಧವಾಗಿದ್ದು, ಹೀಗಾಗಿ ಜಾಮೀನು ನೀಡಬಹುದಾಗಿದೆ ಎಂದು ಹೇಳಿ ವಾದ ಅಂತ್ಯಗೊಳಿಸಿದರು.

ವಾದ ಆಲಿಸಿದ ನ್ಯಾಯಾಲಯ ನಾಳೆಗೆ ವಿಚಾರಣೆ ಮುಂದೂಡಿದ್ದು, ದರ್ಶನ್ ಪರ ವಕೀಲರು ಪ್ರತಿವಾದ ಮಂಡಿಸಲಿದ್ದಾರೆ.

ಅ.14ಕ್ಕೆ ಐವರ ಜಾಮೀನು ಆದೇಶ: ಇನ್ನು ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಆರೋಪಿಗಳಾದ ಎ1 ಪವಿತ್ರಾಗೌಡ, ಎ8 ರವಿ, ಎ11 ನಾಗರಾಜ್, ಎ12 ಲಕ್ಷ್ಮಣ್ ಹಾಗೂ ಎ13 ದೀಪಕ್​ಗೆ ಅ.14ಕ್ಕೆ ಜಾಮೀನು ಆದೇಶವನ್ನು ಕೋರ್ಟ್ ಕಾಯ್ದಿರಿಸಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ಚಾರ್ಜ್​ಶೀಟ್​ನಲ್ಲಿನ ಹಲವು ಅಂಶಗಳ ಬಗ್ಗೆ ಪ್ರಶ್ನೆ ಎತ್ತಿದ ದರ್ಶನ್ ಪರ ವಕೀಲರು - Actor Darashna Bail Plea

ETV Bharat Logo

Copyright © 2024 Ushodaya Enterprises Pvt. Ltd., All Rights Reserved.