ETV Bharat / state

ಕೊಲೆಗೀಡಾದ ರೇಣುಕಾಸ್ವಾಮಿ ಅಂತ್ಯಕ್ರಿಯೆ: ಪತ್ನಿ, ಪೋಷಕರ ಆಕ್ರೋಶ; ಚಿತ್ರದುರ್ಗದಲ್ಲಿ ಇಂದು ಪ್ರತಿಭಟನೆ - Renukaswamy Funeral - RENUKASWAMY FUNERAL

ರೇಣುಕಾಸ್ವಾಮಿ ಕೊಲೆ ಖಂಡಿಸಿ ಇಂದು ವಿವಿಧ ಸಂಘಟನೆಗಳಿಂದ ನೀಲಕಂಠೇಶ್ವರ ದೇಗುಲದಿಂದ ಡಿಸಿ ಕಚೇರಿವರೆಗೆ ಪ್ರತಿಭಟನಾ ರ್‍ಯಾಲಿ ನಡೆಯಲಿದೆ.

Renukaswamy and Parents
ರೇಣುಕಾಸ್ವಾಮಿ ಹಾಗೂ ಪೋಷಕರು (ETV Bharat)
author img

By ETV Bharat Karnataka Team

Published : Jun 12, 2024, 7:36 AM IST

Updated : Jun 12, 2024, 1:27 PM IST

ರೇಣುಕಾಸ್ವಾಮಿ ಅಂತ್ಯಕ್ರಿಯೆ (ETV Bharat)

ಚಿತ್ರದುರ್ಗ: ಬೆಂಗಳೂರಲ್ಲಿ ಹತ್ಯೆಯಾದ ಚಿತ್ರದುರ್ಗ ನಿವಾಸಿ ರೇಣುಕಾಸ್ವಾಮಿ ಅಂತ್ಯಕ್ರಿಯೆ ಮಂಗಳವಾರ ಜೋಗಿಮಟ್ಟಿ ರಸ್ತೆಯ ದ್ವಾರಕಾ ಬಡಾವಣೆ ಬಳಿ ಇರುವ ಹಿಂದೂ ರುದ್ರಭೂಮಿಯಲ್ಲಿ ನಡೆಯಿತು. ವಿರಶೈವ ಲಿಂಗಾಯತ ವಿಧಿ ವಿಧಾನಗಳ ಮೂಲಕ ಅಂತ್ಯ ಸಂಸ್ಕಾರ ನೆರವೇರಿತು.

ಅಂತ್ಯಕ್ರಿಯೆ ವೇಳೆ ರೇಣುಕಾಸ್ವಾಮಿ ತಾಯಿ, ತಂದೆ, ಸಹೋದರಿಯ ಆಕ್ರಂದನ ಮುಗಿಲುಮುಟ್ಟಿತ್ತು. ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರು ಕೊಲೆ ಆರೋಪದ ಮೇಲೆ ಬಂಧಿತರಾಗಿರುವ ನಟ ದರ್ಶನ್ ವಿರುದ್ಧ ಆಕ್ರೋಶ ಹೊರಹಾಕಿದರು.

ಮಾಧ್ಯಮಗಳ ಜೊತೆ ಮಾತನಾಡಿದ ರೇಣುಕಾಸ್ವಾಮಿ ಪತ್ನಿ ಸಹನಾ, "ನನ್ನ ಮನೆಯವರಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸಿ. ನಾನು ಗೃಹಿಣಿ, ಹೀಗೆ ಆಗಬಾರದಿತ್ತು. ಮದುವೆ ಆಗಿ ಒಂದು ವರ್ಷ ಅಷ್ಟೇ ಆಗಿದೆ. ನಾನು ತಾಯಿಯಾಗುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ಹೀಗಾದರೆ ಏನು ಮಾಡೋದು. ಮೊನ್ನೆ ಕರೆ ಮಾಡಿ ನಮ್ಮ ಜೊತೆ ಮಾತನಾಡಿದ್ದರು. ಅದೇ ಕೊನೆ. ಅವರೇನು ದರ್ಶನ್ ಅಭಿಮಾನಿ ಆಗಿರಲಿಲ್ಲ. ದರ್ಶನ ಮೇಲೆ ಆರೋಪ ಬಂದಿರೋದಕ್ಕೆ ನ್ಯಾಯ ಕೊಡಿಸಲು ಜನ ಇದ್ದಾರೆ. ಆದರೆ ಮುಂದೆ ನಾನು ಜೀವನ ಮಾಡೋದು ಹೇಗೆ? ಮುಂದೆ ಈ ಮಗುವಿಗೆ ಯಾರು ಬರುತ್ತಾರೆ. ನಮಗೆ ನ್ಯಾಯ ಬೇಕು" ಎಂದು ಕಣ್ಣೀರಿಡುತ್ತಾ ಮನವಿ ಮಾಡಿದರು.

ರೇಣುಕಾಸ್ವಾಮಿ ತಂದೆ ಶಿವನಗೌಡ ಹಾಗೂ ತಾಯಿ ರತ್ನಪ್ರಭಾ ಆರೋಪಿಗಳ ವಿರುದ್ಧ ಕಿಡಿಕಾರಿದರು. "ನನ್ನ ಮಗನನ್ನು ಸಾಯಿಸಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಅವರಿಗೂ ನನ್ನ ಮಗನ ಸ್ಥಿತಿ ಬರಬೇಕು. ಪತಿ ಬರುತ್ತಾನೆಂದು ರೇಣುಕಾಸ್ವಾಮಿ ಪತ್ನಿ ಕಾದಿದ್ದಳು ಪಾಪ. ನನ್ನ ಸೊಸೆಯ ಜೀವನವನ್ನೂ ಹಾಳು ಮಾಡಿದರು. ಆ ಪಾಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು. ಸೂಕ್ತ ತನಿಖೆ ಆಗಬೇಕು. ಕೊಲೆಗಡುಕರಿಗೆ ಈ ದೇಶದಲ್ಲಿ ಎಂಥ ಮರ್ಯಾದೆ ಇದೆ? ಮನುಷತ್ವ ಇಲ್ಲದವರು ದೊಡ್ಡ ಮನುಷ್ಯರು, ಸ್ಟಾರ್​​ಗಳು" ಎಂದು ಆಕ್ರೋಶ ಹೊರಹಾಕಿದರು.

ವಿವಿಧ ಸಂಘಟನೆಗಳಿಂದ ಇಂದು ಪ್ರತಿಭಟನೆ: "ರೇಣುಕಾಸ್ವಾಮಿ ಕೊಲೆ ಖಂಡಿಸಿ ಚಿತ್ರದುರ್ಗ ನಗರದಲ್ಲಿ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಯಿತು. ನೀಲಕಂಠೇಶ್ವರ ದೇಗುಲದಿಂದ ಡಿಸಿ ಕಚೇರಿವರೆಗೆ ನಡೆದ ಪ್ರತಿಭಟನಾ ರ್‍ಯಾಲಿಯಲ್ಲಿ ವೀರಶೈವ ಸಮಾಜ, ವೀರಶೈವ ಲಿಂಗಾಯತ ಮಹಾಸಭಾ, ಜಂಗಮ ಸಮಾಜ ಸೇರಿ ವಿವಿಧ ಸಂಘಟನೆಗಳು ಭಾಗಿಯಾಗಿದ್ದವು. ಪ್ರಕರಣದ ಪಾರದರ್ಶಕ ತನಿಖೆಯಾಗಬೇಕು. ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಸಿನಿಮಾಗಿಂತ ಹೆಚ್ಚಾಗಿ ವಿವಾದಗಳಿಂದ ಸುದ್ದಿಯಾದರೇ ದರ್ಶನ್? ಈವರೆಗಿನ ಘಟನೆಗಳು ಇವು! - Darshan Controversies

Last Updated : Jun 12, 2024, 1:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.