ಬೆಂಗಳೂರು: ರೀಲ್ಸ್ ಗೀಳಿಗಾಗಿ ಗನ್ ಮ್ಯಾನ್ಗಳಿಗೆ ನಕಲಿ ಎಕೆ47 ಗನ್ ಕೊಡಿಸಿ, ಸಾರ್ವಜನಿಕರಲ್ಲಿ ಭಯ ಮೂಡಿಸುತ್ತಿದ್ದ ಅರುಣ್ ಕಟಾರೆ(26) ಎಂಬಾತನನ್ನು ನಗರದ ಕೊತ್ತನೂರು ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಜೂನ್ 9ರಂದು ಆರೋಪಿ, ನಕಲಿ ಗನ್ ಹಿಡಿದು ಬಾಡಿಗಾರ್ಡ್‌ಗಳೊಂದಿಗೆ ಕೊತ್ತನೂರು ಠಾಣಾ ವ್ಯಾಪ್ತಿಯ ಚೊಕ್ಕನಹಳ್ಳಿಯ ಲೀಲಾ ಹೋಟೆಲ್ ಬಳಿ ಬಂದಿದ್ದಾನೆ. ಆತನನ್ನು ಕಂಡು ಆತಂಕಗೊಂಡ ಸಾರ್ವಜನಿಕರು ಹೊಯ್ಸಳ ಗಸ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಚಿತ್ರದುರ್ಗ ಮೂಲದ ಆರೋಪಿ, ಮೈ ತುಂಬಾ ನಕಲಿ ಚಿನ್ನಾಭರಣ ಧರಿಸುತ್ತಾನೆ. ನಕಲಿ ಗನ್ ಹಿಡಿದ ಬಾಡಿಗಾರ್ಡ್‌ಗಳೊಂದಿಗೆ ಸುತ್ತಾಡುತ್ತಾನೆ. ಯುವತಿಯರು, ಐಷಾರಾಮಿ ಕಾರುಗಳು, ಬೈಕ್‌ಗಳೊಂದಿಗೆ ರೀಲ್ಸ್ ಮಾಡುವುದನ್ನೇ ಹವ್ಯಾಸ ಮಾಡಿಕೊಂಡಿದ್ದಾನೆ. ಈ ಮೂಲಕ ಬಿಲ್ಡಪ್ ಕೊಟ್ಟು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಹಿಂಬಾಲಕರನ್ನೂ ಸಂಪಾದಿಸಿದ್ದಾನೆ.
ಆದರೆ, ಇದೀಗ ಆರೋಪಿಯನ್ನು ಬಂಧಿಸಿರುವ ಕೊತ್ತನೂರು ಠಾಣಾ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆ ಮತ್ತು ಸಾರ್ವಜನಿಕ ಸ್ಥಳದಲ್ಲಿ ತೊಂದರೆ ಉಂಟುಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: 3 ಹೊಸ ಕ್ರಿಮಿನಲ್ ಕಾನೂನುಗಳ ಕುರಿತು ಕಾನೂನು ತಜ್ಞರು ಹೇಳಿದ್ದೇನು? - New Criminal Laws