ETV Bharat / state

ಪಂಚಮಸಾಲಿ ಮೀಸಲಾತಿಗಾಗಿ ರಾಜೀನಾಮೆಗೆ ತಯಾರಿದ್ದೇನೆ: ಶಾಸಕ ರಾಜು ಕಾಗೆ - READY TO RESIGN MLA RAJU KAGE - READY TO RESIGN MLA RAJU KAGE

ಪಂಚಮಸಾಲಿ ಸಮಾಜದ ಶಾಸಕರು ಒಟ್ಟಾಗಿ ರಾಜೀನಾಮೆ ಕೊಟ್ಟರೆ ತಕ್ಷಣವೇ ಪಂಚಮಸಾಲಿ ಮೀಸಲಾತಿ ಸಿಗಲಿದೆ. ಎಲ್ಲ ಶಾಸಕರು ಒಟ್ಟಾದರೆ, ನಾನೇ ಮೊದಲು ರಾಜೀನಾಮೆ ಕೊಡುತ್ತೇನೆ ಎಂದು ಕಾಗವಾಡ ಶಾಸಕ ರಾಜು ಕಾಗೆ ತಿಳಿಸಿದ್ದಾರೆ.

ಶಾಸಕ ರಾಜು ಕಾಗೆ
ಶಾಸಕ ರಾಜು ಕಾಗೆ (ETV Bharat)
author img

By ETV Bharat Karnataka Team

Published : Jul 9, 2024, 6:28 PM IST

ಶಾಸಕ ರಾಜು ಕಾಗೆ (ETV Bharat)

ಚಿಕ್ಕೋಡಿ: ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ದಶಕಗಳಿಂದ ಹೋರಾಟ ನಡೆಸಿದರು ಯಾವುದೇ ಪ್ರಯೋಜನವಾಗಿಲ್ಲ. ಸರ್ಕಾರದ ಮೇಲೆ ಒತ್ತಡ ಹಾಕಲು ಪಂಚಮಸಾಲಿ ಸಮಾಜದ ಶಾಸಕರು ಒಟ್ಟಾಗಿ ರಾಜೀನಾಮೆ ನೀಡಬೇಕು ಇದರಲ್ಲಿ ಮೊದಲಿಗ ನಾನಾಗಿ ರಾಜೀನಾಮೆ ಕೊಡುವುದಕ್ಕೆ ಮುಂದೆ ಇದ್ದೇನೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ ಗ್ರಾಮದಲ್ಲಿ ಸೋಮವಾರ ರಾತ್ರಿ ಪಂಚಮಸಾಲಿ ಸಮಾಜದ ಮೀಸಲಾತಿ ಕುರಿತು ಸಭೆಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನಿಡಬೇಕು ಎಂಬ ನಿಟ್ಟಿನಲ್ಲಿ ದಶಕಗಳಿಂದ ಹೋರಾಟ ನಡೆದಿದೆ. ಕಳೆದ ಐದು ವರ್ಷಗಳಿಂದ ಹೋರಾಟ ತೀವ್ರ ಗತಿಯಲ್ಲಿ ಸಾಗಿದೆ. ಆದರೆ, ಸಮಾಜದ ಶಾಸಕರು ಒಗ್ಗಟ್ಟಿನ ಬಲ ಇಲ್ಲದೇ ಇರೋದರಿಂದ ಮೀಸಲಾತಿಗೆ ವಿಳಂಬವಾಗುತ್ತಿದೆ ಎಂದರು.

ಮೀಸಲಾತಿ ವಿಚಾರದಲ್ಲಿ ಎಲ್ಲರೂ ಶಾಸಕರು ಒಗ್ಗಟ್ಟಾಗಬೇಕು: ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮಿಜಿ ಅವರು ಹಿಂದೆಯೂ ಕೂಡ ಬಿಜೆಪಿ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಕೆಲವು ನಮ್ಮ ಸಮಾಜದ ಶಾಸಕರು ಸಚಿವ ಸ್ಥಾನಕ್ಕಾಗಿ ಸರ್ಕಾರದ ಮೇಲೆ ಅಷ್ಟೊಂದು ಒತ್ತಡ ಹೇರಿಕೆ ಮಾಡ್ಲಿಲ್ಲ. ನಾನು ಯಾವುದೇ ಸಚಿವ ಸ್ಥಾನಕ್ಕೆ ಆಸೆ ಇಲ್ಲ. ಮೀಸಲಾತಿ ವಿಚಾರದಲ್ಲಿ ಎಲ್ಲರೂ ಶಾಸಕರು ಒಗ್ಗಟ್ಟಾಗಬೇಕು. ಒಟ್ಟಾಗಿ ರಾಜೀನಾಮೆ ಕೊಟ್ರೆ ಯಾವುದೇ ಸರ್ಕಾರವಿರಲಿ ಮೀಸಲಾತಿ ನೀಡುತ್ತದೆ ಎಂದು ಹೇಳಿದರು.

ಹಿಂದೆ ನಮ್ಮ ಹಿರಿಯರು ಸಮಾಜಕ್ಕೋಸ್ಕರ ದೇಶಕ್ಕೋಸ್ಕರ ತ್ಯಾಗ ಮಾಡಿದ್ದರಿಂದ ಅವರು ಇತಿಹಾಸ ಪುಟ ಸೇರಿಕೊಂಡಿದ್ದಾರೆ. ನಾವು ಕೂಡ ಇಲ್ಲಿ ಪಂಚಮಸಾಲಿ ಸಮಾಜಕ್ಕೋಸ್ಕರ ಏನಾದರು ಒಂದು ನಿರ್ಣಯ ಮಾಡಬೇಕು. ನಾನು ರಾಜೀನಾಮೆಗೆ ಸಿದ್ಧನಿದ್ದೇನೆ. ಪಂಚಮಸಾಲಿ ಸಮಾಜದ ಸಲುವಾಗಿ ರಾಜು ಕಾಗೆ ರಾಜೀನಾಮೆ ನೀಡಿದ್ದ ಎಂದು ಇತಿಹಾಸ ಪುಟದಲ್ಲಿ ಸೇರಿ ಹೋಗಲಿ ಎಂದು ತಿಳಿಸಿದರು.

ಶಾಸಕ ಸ್ಥಾನ, ಅಧಿಕಾರ, ಇದ್ದರೆ ಅಷ್ಟೇ ಊಟ ಆಗಲ್ಲ, ನಮ್ಮ ಹಿರಿಯರಿಗೂ ಕೂಡ ಯಾವುದೇ ಅಧಿಕಾರ ಇಲ್ಲದಿದ್ದರೂ ಬದುಕಿದ್ದಾರೆ. ನಾವು ಕೂಡ ಸಮಾಜದ ಮೀಸಲಾತಿಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಲು ಪಂಚಮಸಾಲಿ ಸಮಾಜದ ಎಲ್ಲರೂ ಶಾಸಕರು ಸಾಮೂಹಿಕವಾಗಿ ರಾಜೀನಾಮೆ ನೀಡೋಣ. ಇದರಿಂದ ನಮಗೆ ಮೀಸಲಾತಿ ಸಿಗುತ್ತೆ, ಇಲ್ಲವಾದರೆ ಇತಿಹಾಸ ಪುಟ ಸೇರುತ್ತಿವೆ ಎಂದು ಹೇಳಿದರು.

ಇದನ್ನೂ ಓದಿ: ಮುಡಾ ಹಗರಣ ಪ್ರಕರಣ: ಸಿಎಂ ರಾಜೀನಾಮೆ ನೀಡಬೇಕು, ನ್ಯಾಯಾಂಗ ತನಿಖೆಯಾಗಬೇಕು: ಸಿಟಿ ರವಿ ಆಗ್ರಹ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.