ETV Bharat / state

ಒಪಿಎಸ್ ಮರು ಜಾರಿಯಿಂದ ರಾಜ್ಯದ ಹಣಕಾಸಿಗೆ ಭಾರೀ ಪೆಟ್ಟು; ಮಧ್ಯಮಾವಧಿ ವಿತ್ತೀಯ ವರದಿ ಎಚ್ಚರಿಕೆ

author img

By ETV Bharat Karnataka Team

Published : Feb 17, 2024, 4:44 PM IST

ಆರ್​ಬಿಐ ತನ್ನ ಇತ್ತೀಚಿನ ವರದಿಯಲ್ಲಿ ಒಪಿಎಸ್​ ಗೆ ಮರಳುವುದರಿಂದ ಉಂಟಾಗುವ ಆರ್ಥಿಕ ಪರಿಣಾಮದ ಕುರಿತು ಸಂಪೂರ್ಣ ಮಾಹಿತಿ ನೀಡಿದೆ.

ವಿಧಾನಸೌಧ
ವಿಧಾನಸೌಧ

ಬೆಂಗಳೂರು : ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ಸರ್ಕಾರಿ ನೌರಕರರಿಂದ ಒತ್ತಡ ಹೆಚ್ಚುತ್ತಿದ್ದರೆ, ಇತ್ತ ಕಾಂಗ್ರೆಸ್ ತನ್ನ ಚುನಾವಣಾ ಪ್ರಾಣಾಳಿಕೆಯಲ್ಲೂ ಒಪಿಎಸ್ ಜಾರಿಯ ಭರವಸೆ ನೀಡಿದೆ. ಆದರೆ ಒಪಿಎಸ್ ಜಾರಿಯಿಂದ ರಾಜ್ಯದ ಹಣಕಾಸಿನ ಮೇಲೆ ಭಾರೀ ಪೆಟ್ಟು ಬೀಳಲಿದೆ ಎಂದು ಮಧ್ಯಮಾವಧಿ ವಿತ್ತೀಯ ಯೋಜನೆ ವರದಿ ಎಚ್ಚರಿಕೆ ನೀಡಿದೆ.

ಮಧಮಾವಧಿ ವಿತ್ತೀಯ ವರದಿಯಲ್ಲಿ ಒಪಿಎಸ್​ ದೀರ್ಘಾವಧಿಯಲ್ಲಿ ಆರ್ಥಿಕವಾಗಿ ಕಷ್ಟಕರವಾಗಿರುವುದರಿಂದ ಕರ್ನಾಟಕ ಸೇರಿದಂತೆ ಹೆಚ್ಚಿನ ರಾಜ್ಯಗಳು ಹಳೆಯ ಪಿಂಚಣಿ ಯೋಜನೆ ಯಿಂದ ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್​ಪಿಎಸ್​) ಗೆ ಬದಲಾಗಿವೆ. ಆದರೆ ಹಳೆ ಪಿಂಚಣಿ ಯೋಜನೆಗೆ ಮರಳುವಂತೆ ಹೆಚ್ಚುತ್ತಿರುವ ಬೇಡಿಕೆಯ ಬೆನ್ನಲ್ಲೇ ಆರ್​ಬಿಐ ತನ್ನ ಇತ್ತೀಚಿನ ವರದಿಯಲ್ಲಿ ಒಪಿಎಸ್​ ಗೆ ಮರಳುವುದರಿಂದ ಉಂಟಾಗುವ ಆರ್ಥಿಕ ಪರಿಣಾಮದ ಕುರಿತು ಎಚ್ಚರಿಕೆ ನೀಡಿದೆ.

ಹಳೆಯ ಪಿಂಚಣಿ ಯೋಜನೆಗೆ ಮರಳುವುದರಿಂದ ಸರ್ಕಾರಕ್ಕೆ ಎನ್​ಪಿಎಸ್​ನಲ್ಲಿ ಭರಿಸುತ್ತಿರುವ ವೆಚ್ಚದ 4.5 ಪಟ್ಟು ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ ಎಂದು ಆರ್​ಬಿಐ ತನ್ನ ವರದಿಯಲ್ಲಿ ಹೇಳಿದೆ. ಆದ್ದರಿಂದ ಹಳೆ ಪಿಂಚಣಿ ಯೋಜನೆಗೆ ಮರಳುವುದು ದೀರ್ಘಾವಧಿಯಲ್ಲಿ ರಾಜ್ಯದ ಹಣಕಾಸಿನ ಮೇಲೆ ಭಾರಿ ಪೆಟ್ಟು ಬೀಳಲಿದೆ ಹಾಗೂ ಇದರಿಂದ ಕಲ್ಯಾಣ ಕಾರ್ಯಕ್ರಮಗಳ ಮತ್ತು ಅಭಿವೃದ್ಧಿ ವೆಚ್ಚದ ಹಂಚಿಕೆಯು ಕಡಿಮೆಯಾಗಲಿದೆ ಎಂದು ತಿಳಿಸಿದೆ.

ರಾಜ್ಯದ ಹಣದುಬ್ಬರವೂ ಹೆಚ್ಚಳ : 2023-24ರಲ್ಲಿ ರಾಜ್ಯದ ಹಣದುಬ್ಬರವೂ ಹೆಚ್ಚಳವಾಗಿರುವುದು ಆತಂಕ ಮೂಡಿಸಿದೆ. ದೇಶದ ಹಣದುಬ್ಬರಕ್ಕೆ ಹೋಲಿಸಿದರೆ, ರಾಜ್ಯದ ಹಣದುಬ್ಬರ ಹೆಚ್ಚಳವಾಗಿದೆ. 2022-23ರ ಆರ್ಥಿಕ ವರ್ಷದಲ್ಲಿ ರಾಜ್ಯದ ಹಣದುಬ್ಬರ ಶೇ.5.48ರಷ್ಟಿತ್ತು. ಇದು ಡಿಸೆಂಬರ್ 2023ರಲ್ಲಿ ಶೇ.6.65ಕ್ಕೆ ಏರಿಕೆಯಾಗಿದೆ ಎಂದು ಮಧ್ಯಮಾವಧಿ ವಿತ್ತೀಯ ಯೋಜನೆ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ.

ರಾಜ್ಯದಲ್ಲಿ ಹಣದುಬ್ಬರ ಮುಖ್ಯವಾಗಿ ಆಹಾರ ಮತ್ತು ಇಂಧನ ಬೆಲೆಗಳಲ್ಲಿನ ಏರಿಳಿತದಿಂದಾಗಿದೆ. 2023ರ ಸಾಲಿನಲ್ಲಿ, ಮುಂಗಾರಿನ ವೈಫಲ್ಯದಿಂದಾಗಿ ಕೃಷಿ ಉತ್ಪನ್ನದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ. ಇದು ಆಹಾರ ಪದಾರ್ಥಗಳ ಬೆಲೆ ಏರಿಕೆಗೆ ಕಾರಣವಾಗಿದ್ದು, ರಾಜ್ಯದ ಹಣದುಬ್ಬರವು ಹೆಚ್ಚಳವಾಯಿತು ಎಂದು ಮಧ್ಯಮಾವಧಿ ವಿತ್ತೀಯ ವರದಿಯಲ್ಲಿ ವಿವರಿಸಿದೆ.

ಇತ್ತ ಒಂದೆಡೆ ಜಾಗತಿಕ ವ್ಯಾಪಾರದ ಕುಸಿತದಿಂದಾಗಿ ಕರ್ನಾಟಕದ ರಫ್ತು ಪ್ರಮಾಣದಲ್ಲೂ ಇಳಿಕೆಯಾಗಿದೆ. ಏಪ್ರಿಲ್-ನವೆಂಬರ್ 2023ರ ಅವಧಿಯಲ್ಲಿ ಕರ್ನಾಟಕದ ಒಟ್ಟು ರಫ್ತು 1.36 ಲಕ್ಷ ಕೋಟಿ ರೂ. ಗಳಾಗಿದೆ. ದೇಶದ ಒಟ್ಟು ರಫ್ತಿನಲ್ಲಿ, ರಾಜ್ಯದ ಪಾಲು ಶೇ.5.94 ರಷ್ಟಿದೆ ಮತ್ತು ಇತರೆ ರಾಜ್ಯಗಳಿಗೆ ಹೋಲಿಸಿದರೆ 4ನೇ ಸ್ಥಾನದಲ್ಲಿದೆ ಎಂದು ಮಾಧ್ಯಮಾವಧಿ ವಿತ್ತೀಯ ವರದಿಯಲ್ಲಿ ತಿಳಿಸಲಾಗಿದೆ.

ಬದ್ಧ ವೆಚ್ಚ ವೃದ್ಧಿಯಿಂದ ವಿತ್ತೀಯ ಪರಿಸ್ಥಿತಿ ಮೇಲೆ ಪರಿಣಾಮ : ಬದ್ಧ ವೆಚ್ಚಗಳ ಹೆಚ್ಚಳದಿಂದಾಗಿ, ರಾಜ್ಯ ಸರ್ಕಾರಕ್ಕೆ ಲಭ್ಯವಿರುವ ಹಣಕಾಸಿನ ಅವಕಾಶವು ಸೀಮಿತವಾಗಿದೆ. ಇದರಿಂದಾಗಿ ರಾಜ್ಯದ ಅಭಿವೃದ್ಧಿಯ ಆದ್ಯತೆಗಳಿಗೆ ಅನುಗುಣವಾಗಿ ಸಂಪನ್ಮೂಲಗಳನ್ನು ಒದಗಿಸಲು ಹಾಗೂ ಸುಸ್ಥಿರ ಅಭಿವೃದ್ಧಿ ಮತ್ತು ಸಾರ್ವಜನಿಕ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆ ಮಾಡಲು ಕಷ್ಟಕರವಾಗಿದೆ.

ಇತ್ತ ಸರ್ಕಾರಕ್ಕೆ ತನ್ನ ವೆಚ್ಚ ನಿರ್ವಹಣೆಗಿರುವ ವಿತ್ತೀಯ ಅವಕಾಶ ಕ್ಷೀಣಿಸಲಿದೆ. ಪ್ರಮುಖವಾಗಿ ವೇತನ, ಪಿಂಚಣಿ ಹಾಗೂ ಬಡ್ಡಿ ಪಾವತಿಯೂ ಸರ್ಕಾರದ ಒಟ್ಟು ವೆಚ್ಚದ ಮೇಲೆ ಹೆಚ್ಚಿನ ಪರಿಣಾಮ ಉಂಟು ಮಾಡಿದ್ದು, ಯೋಜನೇತರ ಬದ್ಧ ವೆಚ್ಚವು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ‌. ಇದು ಸರ್ಕಾರದ ಸಂಪನ್ಮೂಲ ಹಂಚಿಕೆ ಮತ್ತು ರಾಜ್ಯದ ಒಟ್ಟಾರೆ ವಿತ್ತೀಯ ಪರಿಸ್ಥಿತಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದೆ. ಪಂಚಗ್ಯಾರಂಟಿ ವೆಚ್ಚ ಸೇರಿ 2024-25ರಲ್ಲಿ ಒಟ್ಟು ಬದ್ಧ ವೆಚ್ಚ ಸುಮಾರು 2,70,483 ಕೋಟಿ ರೂ.ಗೆ ಏರಿಕೆಯಾಗಿದೆ.

7ನೇ ವೇತನ ಆಯೋಗದಿಂದ 20,000 ಕೋಟಿ ಹೊರೆ : ಇನ್ನು ಈ ಬಾರಿಯ ಬಜೆಟ್ ನಲ್ಲಿ ಸರ್ಕಾರಿ ನೌಕರರ ಬಹುಬೇಡಿಕೆಯ ವೇತನ ಪರಿಷ್ಕರಣೆಯನ್ನು ಏಳನೇ ವೇತನ ಆಯೋಗದ ವರದಿ ಸ್ವೀಕರಿಸಿದ ಬಳಿಕ ಪರಿಶೀಲಿಸಿ ಕ್ರಮ ವಹಿಸುವುದಾಗಿ ಸರ್ಕಾರ ತಿಳಿಸಿದೆ.

ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಜಾರಿಯಿಂದ ಮುಂಬರುವ ವರ್ಷಗಳಲ್ಲಿ ರಾಜ್ಯದ ಬದ್ಧ ವೆಚ್ಚವು ಗಣನೀಯವಾಗಿ ಹೆಚ್ಚಳವಾಗಲಿದೆ ಹಾಗೂ ಮುಂದಿನ ವರ್ಷಗಳಲ್ಲಿ ವಿತ್ತೀಯ ಕೊರತೆಯ ಗುರಿಯನ್ನು ಸಾಧಿಸುವುದು ಸವಾಲಾಗಿ ಪರಿಣಮಿಸಲಿದೆ ಎಂದು ಮಧ್ಯಮಾವಧಿ ವಿತ್ತೀಯ ಯೋಜನಾ ವರದಿಯಲ್ಲಿ ತಿಳಿಸಲಾಗಿದೆ. 7ನೇ ವೇತನ ಆಯೋಗದ ಜಾರಿಯಿಂದ ವೇತನ ಶ್ರೇಣಿಯಲ್ಲಿನ ಹೆಚ್ಚಳವನ್ನು ಆಧರಿಸಿ ಮೊದಲ ವರ್ಷದಲ್ಲಿಯೇ ಅಂದಾಜು 15,000 ಕೋಟಿ ರೂ. ಗಳಿಂದ 20,000 ಕೋಟಿ ರೂ. ಗಳಷ್ಟು ಹೆಚ್ಚಿನ ಆರ್ಥಿಕ ಹೊರೆಯಾಗಲಿದೆ.

ಎಸ್ಕಾಂಗಳ ಆರ್ಥಿಕ ಸ್ಥಿತಿಯಿಂದ ಭಾರೀ ಅಪಾಯ : ಕರ್ನಾಟಕದ ವಿದ್ಯುತ್ ಸರಬರಾಜು ಕಂಪನಿಗಳು (ESCOM) ಮತ್ತು ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್ (KPCL)ಗಳ ಆರ್ಥಿಕ ಸ್ಥಿತಿ ರಾಜ್ಯದ ವಿತ್ತೀಯ ಸುಸ್ಥಿರತೆಯ ಬಗ್ಗೆ ಮಧ್ಯಮಾವಧಿ ವಿತ್ತೀಯ ವರದಿ ಕಳವಳ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರ ಡಿಸೆಂಬರ್ 2023ರ ಅಂತ್ಯಕ್ಕೆ 36,657 ಕೋಟಿ ರೂ.ಗಳ ಖಾತರಿಗಳನ್ನು ESCOM ಗಳಿಗೆ ಮತ್ತು KPCL ಗೆ ನೀಡಿದೆ.

ಇದಲ್ಲದೆ, ESCOM ಗಳು ಉಳಿಸಿಕೊಂಡಿರುವ ವಿದ್ಯುತ್ ಖರೀದಿ ಬಾಕಿ, ಸಾಲ ಮತ್ತು ಸಂಚಿತ ನಷ್ಟ 65,282 ಕೋಟಿ ರೂ.ಗಳಾಗಿದೆ. ಅದೇ ರೀತಿ KPCL ನ ಸಾಲದ ಬಾಕಿಯು 31,145 ಕೋಟಿ ರೂ.ಗಳಾಗಿದೆ. ವಿದ್ಯುತ್ ಕಂಪನಿಗಳ ಈ ಹಣಕಾಸಿನ ಸ್ಥಿತಿ ಭಾರೀ ಅಪಾಯವನ್ನು ಉಂಟುಮಾಡುವ ಸಾಧ್ಯತೆ ಇದೆ. ಏಕೆಂದರೆ ಖಾತರಿಪಡಿಸಿದ ಸಾಲಗಳು ಸಂಭಾವ್ಯ ದಿವಾಳಿಯಾದಾಗ, ರಾಜ್ಯ ಸರ್ಕಾರದ ಮೇಲೆ ಹೆಚ್ಚಿನ ಹೊಣೆಗಾರಿಕೆಗಳನ್ನು ಉಂಟುಮಾಡಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಎರಡು ವರ್ಷ ಉಳಿತಾಯ ಬಜೆಟ್ ಅನುಮಾನ : ಮುಂದಿನ ಎರಡು ವರ್ಷಗಳಲ್ಲಿ ರಾಜ್ಯ ರಾಜಸ್ವ ಕೊರತೆಯನ್ನು ಹಂತಹಂತವಾಗಿ ಕಡಿಮೆ ಮಾಡಲಿದೆ. 2027-28ರ ಆರ್ಥಿಕ ವರ್ಷದಲ್ಲಿ ರಾಜಸ್ವ ಹೆಚ್ಚುವರಿಯನ್ನು ಸಾಧಿಸುವ ನಿರೀಕ್ಷೆಯಿದೆ. ಅಂದರೆ ಮುಂದಿನ ಎರಡು ವರ್ಷ ಉಳಿತಾಯ ಬಜೆಟ್ ಅನುಮಾನ ಎಂದು ಮಧ್ಯಮಾವಧಿ ವಿತ್ತೀಯ ಯೋಜನಾ ವರದಿಯಲ್ಲಿ ತಿಳಿಸಲಾಗಿದೆ. ಪಂಚ ಗ್ಯಾರಂಟಿಗಳ ಹೊರೆ ರಾಜಸ್ವದ ಮೇಲೆ ಭಾರೀ ಪೆಟ್ಟು ನೀಡುತ್ತಿದೆ.

ರಾಜಸ್ವವನ್ನು ಹೆಚ್ಚಿಸಲು ಮತ್ತು ವೆಚ್ಚವನ್ನು ತರ್ಕಬದ್ಧಗೊಳಿಸಲು ಕೆಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಮೂಲಕ 16ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಹೆಚ್ಚಿನ ತೆರಿಗೆ ಪಾಲಿನ ನಿರೀಕ್ಷೆಯೊಂದಿಗೆ ರಾಜ್ಯದ ಮೇಲೆ ಅಂದಾಜಿಸಿರುವ ಅವಧಿಗೂ ಮುನ್ನವೇ ರಾಜಸ್ವ ಹೆಚ್ಚುವರಿ ಸಾಧಿಸಲು ಸಾಧ್ಯವಾಗಲಿದೆ. ಆದ್ದರಿಂದ, ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸುವ ಮತ್ತು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಬಂಡವಾಳ ಯೋಜನೆಗಳಿಗೆ ಹೆಚ್ಚಿನ ಅನುದಾನವನ್ನು ನೀಡಲು ಮತ್ತು ಹೊಸ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲು ರಾಜಸ್ವ ಸೃಜನೆಯ ಮೂಲಕ ಅಗತ್ಯ ವಿತ್ತೀಯ ಅವಕಾಶದ ಸೃಷ್ಟಿಗೆ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವುದು ಅವಶ್ಯಕವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ : ಮೂಲ ಸೌಲಭ್ಯಕ್ಕೆ, ಕೈಗಾರಿಕೆಗೆ ಅನುದಾನ ಸಾಲದು, ಸಿದ್ದರಾಮಯ್ಯ ಬಜೆಟ್ ಅವೈಜ್ಞಾನಿಕ: ಉದ್ಯಮಿ ಶಿವಕುಮಾರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.