ETV Bharat / state

ವಾಣಿಜ್ಯ ನಗರಿ ಹುಬ್ಬಳ್ಳಿಗೂ ರತನ್​ ಟಾಟಾಗೂ ಇದೆ ಅವಿನಾಭಾವ ನಂಟು

ಟಾಟಾ ಸಮೂಹ ಸಂಸ್ಥೆಯ ಅಧ್ಯಕ್ಷ ರತನ್ ಟಾಟಾ ನಮ್ಮನ್ನೆಲ್ಲರನ್ನು ಅಗಲಿದ್ದಾರೆ. ಅವರ ಸಾಧನೆ, ಸರಳ ಜೀವನವನ್ನು ಕೊಂಡಾಡದವರೇ ಇಲ್ಲ. ಅಂತಹ ಮಹಾನ್​ ವ್ಯಕ್ತಿ ನಮ್ಮ ಹುಬ್ಬಳ್ಳಿಗೂ ಭೇಟಿ ಕೊಟ್ಟಿದ್ದರು. ಕಾರಣ ಇಲ್ಲಿದೆ.

author img

By ETV Bharat Karnataka Team

Published : 3 hours ago

ವಾಣಿಜ್ಯ ನಗರಿ ಹುಬ್ಬಳ್ಳಿಗೂ ರತನ್​ ಟಾಟಾಗೂ ಇದೆ ಅವಿನಾಭಾವ ನಂಟು!
ವಾಣಿಜ್ಯ ನಗರಿ ಹುಬ್ಬಳ್ಳಿಗೂ ರತನ್​ ಟಾಟಾಗೂ ಇದೆ ಅವಿನಾಭಾವ ನಂಟು! (ETV Bharat)

ಹುಬ್ಬಳ್ಳಿ: ಟಾಟಾ ಉದ್ದಿಮೆ ಸಾಮ್ರಾಜ್ಯವನ್ನು ವಿಶ್ವ ಮಟ್ಟಕ್ಕೆ ಒಯ್ದಿದ್ದ ಟಾಟಾ ಸಾಮ್ರಾಜ್ಯದ ಸಾಮ್ರಾಟ ರತನ್ ಟಾಟಾ ಅಸ್ತಂಗತರಾಗಿದ್ದಾರೆ. ಆದರೆ ಅವರು ನಡೆದು ಬಂದ ದಾರಿ ಇತರರಿಗೂ ಮಾದರಿಯಾಗಿದೆ. ವಿಶೇಷವೆಂದರೆ ರತನ್ ಟಾಟಾ ಅವರಿಗೂ ವಾಣಿಜ್ಯ ನಗರಿ ಹುಬ್ಬಳ್ಳಿಗೂ ಅವಿನಾಭಾವ ಸಂಬಂಧವಿದೆ.

ಹುಬ್ಬಳ್ಳಿ-ಧಾರವಾಡ ಮಧ್ಯದಲ್ಲಿರುವ ರಾಯಪುರದಲ್ಲಿರುವ ಇಸ್ಕಾನ್​ ಕಿಚನ್​ಗೆ ಭೇಟಿ ನೀಡಿದ್ದ ರತನ್​ ಟಾಟಾ.
ಹುಬ್ಬಳ್ಳಿ-ಧಾರವಾಡ ಮಧ್ಯದಲ್ಲಿರುವ ರಾಯಪುರದಲ್ಲಿರುವ ಇಸ್ಕಾನ್​ ಕಿಚನ್​ಗೆ ಭೇಟಿ ನೀಡಿದ್ದ ರತನ್​ ಟಾಟಾ. (ETV Bharat)

ಹೌದು, ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಜನವರಿ 30, 2013 ರಂದು ದೇಶಪಾಂಡೆ ಫೌಂಡೇಶನ್ 'ಟಿಪ್ಪಿಂಗ್​ ಪಾಯಿಂಟ್' ಎಂಬ ವಿಷಯದೊಂದಿಗೆ ಆಯೋಜಿಸಿದ್ದ ಮೂರು ದಿನಗಳ 'ಅಭಿವೃದ್ಧಿ ಸಂವಾದ-2013' ಅಧಿವೇಶನದಲ್ಲಿ ಅವರು ಪಾಲ್ಗೊಂಡಿದ್ದರು. ಇನ್ಫೋಸಿಸ್​ನ ನಿವೃತ್ತ ಅಧ್ಯಕ್ಷ ಎನ್‌.ಆರ್.​ ನಾರಾಯಣ ಮೂರ್ತಿ ಅವರೊಂದಿಗೆ ಒಂದು ತಾಸಿಗೂ ಹೆಚ್ಚು ಕಾಲ ಸಂವಾದ ನಡೆಸಿದ್ದರು. ಈ ಸಂದರ್ಭದಲ್ಲಿ ನವೋದ್ಯಮ ಸೇರಿದಂತೆ ಹಲವು ವಿಚಾರಗಳ ಕುರಿತು ಮುಕ್ತ ಮನಸ್ಸಿನಿಂದ ಮಾತನಾಡಿದ್ದರು.

ಹುಬ್ಬಳ್ಳಿಯಲ್ಲಿ ನಡೆದಿದ್ದ 'ಅಭಿವೃದ್ಧಿ ಸಂವಾದ-2013' ಅಧಿವೇಶನದಲ್ಲಿ ರತನ್​ ಟಾಟಾ.
ಹುಬ್ಬಳ್ಳಿಯಲ್ಲಿ ನಡೆದಿದ್ದ 'ಅಭಿವೃದ್ಧಿ ಸಂವಾದ-2013' ಅಧಿವೇಶನದಲ್ಲಿ ರತನ್​ ಟಾಟಾ. (ETV Bharat)

ಇದೇ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಮಧ್ಯದಲ್ಲಿರುವ ರಾಯಪುರದಲ್ಲಿರುವ ಇಸ್ಕಾನ್​ ಕಿಚನ್​ಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅಲ್ಲಿನ ಆಹಾರ ತಯಾರಿಕೆ, ಸರಬರಾಜು ರಾಜ್ಯದ ಮೂಲೆ ಮೂಲೆಗೂ ತಲುಪಿಸುವ ಪರಿಯ ಬಗ್ಗೆ ಮಾಹಿತಿ ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಸಂಸದೆ ಸುಧಾ ಮೂರ್ತಿ ಅವರೊಂಂದಿಗೆ ರತನ್​ ಟಾಟಾ.
ಸಂಸದೆ ಸುಧಾ ಮೂರ್ತಿ ಅವರೊಂಂದಿಗೆ ರತನ್​ ಟಾಟಾ. (ETV Bharat)

ಬುಧವಾರ ಕೊನೆಯುಸಿರೆಳೆದ ದಿಗ್ಗಜ: 86 ವರ್ಷದ ರತನ್​ ಟಾಟಾ ಅವರ ಆರೋಗ್ಯದಲ್ಲಿ ವ್ಯತ್ಯಯ ಉಂಟಾಗಿ ಬುಧವಾರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಅವರು ಬುಧವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಇಡೀ ದೇಶವೇ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತಿದೆ. ಇಂದು ಬೆಳಗ್ಗೆ 10 ಗಂಟೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇರಿಸಲಾಗಿದ್ದು, ಸಂಜೆ 4 ರಿಂದ 5 ಗಂಟೆ ಒಳಗೆ ಅಂತ್ಯಕ್ರಿಯೆ ನಡೆಯಲಿದೆ. ಮಹಾರಾಷ್ಟ್ರ ಸಿಎಂ ಏಕನಾಥ್​ ಶಿಂಧೆ ಅವರು ರತನ್​ ಟಾಟಾ ಅವರ ಅಂತ್ಯಕ್ರಿಯೆಯನ್ನು ಸರ್ಕಾರದ ಸಕಲ ಗೌರವಗಳೊಂದಿಗೆ ನೆರವೇರಿಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ರತನ್​ ಟಾಟಾ ನಿಧನಕ್ಕೆ ಸಿದ್ದರಾಮಯ್ಯ, ಹೆಚ್​.ಡಿ.ದೇವೇಗೌಡ ಸೇರಿ ಗಣ್ಯರಿಂದ ಸಂತಾಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.