ETV Bharat / state

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಆರೋಪ: ಚರ್ಚ್ ಪಾದ್ರಿ ವಿರುದ್ಧ ಪ್ರಕರಣ ದಾಖಲು - rape case against church father

ಮದುವೆಯಾಗುವುದಾಗಿ ನಂಬಿಸಿ ಚರ್ಚ್​ನ ಪಾದ್ರಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಆರೋಪ: ಚರ್ಚ್ ಪಾದ್ರಿ ವಿರುದ್ಧ ಪ್ರಕರಣ ದಾಖಲು

author img

By ETV Bharat Karnataka Team

Published : Mar 10, 2024, 11:03 PM IST

ದಾವಣಗೆರೆ: ಮದುವೆಯಾಗುವುದಾಗಿ ನಂಬಿಸಿ ದಲಿತ ಮಹಿಳೆಯೊಬ್ಬರ ಮೇಲೆ ಡಿಹೆಚ್​ಎಮ್ ಚರ್ಚ್​ನ ಪಾದ್ರಿಯಾದ ಬಿ.ರಾಜಶೇಖರ್ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆಯೊಬ್ಬರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

ಸಂತ್ರಸ್ತೆಯು ವೃತ್ತಿಯಲ್ಲಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ತನ್ನ ಗಂಡ ಬಿಟ್ಟು ಹೋದ ನೋವನ್ನು ಪಾದ್ರಿ ಬಳಿ ಹೇಳಿಕೊಂಡಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಪಾದ್ರಿ 2000ನೇ ಇಸವಿಯಿಂದ ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾರೆ. ಚರ್ಚ್​ಗೆ ಪ್ರಾರ್ಥನೆಗೆಂದು ಬಂದಾಗ ಪುಸಲಾಯಿಸಿ ಈ ಕೃತ್ಯ ಎಸಗಿದ್ದಾರೆ. ಅಲ್ಲದೇ ಇತರ ನಾಲ್ವರು ಮಹಿಳೆಯರಿಗೂ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಹಣ ಪಡೆದು ವಂಚನೆ ಆರೋಪ‌: ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ 25 ರಿಂದ 35 ಲಕ್ಷ ಹಣ ಪಡೆದು ವಂಚನೆ ಮಾಡಿರುವ ಬಗ್ಗೆಯೂ ಎಫ್​ಐಆರ್​ನಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಾದ್ರಿ ಬಿ.ರಾಜಶೇಖರ್ ವಿರುದ್ಧ ಐಪಿಸಿ ಸೆಕ್ಷನ್​ 376, 354ಎ, 323, 504, 417, 420 ಅಡಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ದೂರಿನ ವಿವರ: ಮಹಿಳಾ ಠಾಣೆಯ ಪೋಲಿಸರ ಮುಂದೆ ಅಳಲು ತೋಡಿಕೊಂಡಿರುವ ಸಂತ್ರಸ್ತೆ 22 ವರ್ಷಗಳಿಂದ ದಾವಣಗೆರೆಯ ಜಯ ನಗರದಲ್ಲಿರುವ ಡಿ.ಹೆಚ್.ಎಂ ಚರ್ಚ್​ಗೆ ಪ್ರಾರ್ಥನೆಗೆ ತೆರಳುತ್ತಿದ್ದೇನೆ. ಅಂದಿನಿಂದಲೂ ಪಾದ್ರಿಯವರಾದ ಬಿ.ರಾಜಶೇಖರ್ ಎಂಬವರ ಪರಿಚಯ ಇದೆ. ನನ್ನ ಗಂಡ ನನ್ನನ್ನು ಮತ್ತು ಮಕ್ಕಳನ್ನು ಬಿಟ್ಟು ಹೋದ ನಂತರ ನನ್ನ ಕುಟುಂಬದ ಪರಿಸ್ಥಿತಿಯನ್ನು ತಿಳಿದ ರಾಜಶೇಖರ್ ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ನಂಬಿಸಿ ನನ್ನೊಂದಿಗೆ ಬಲವಂತವಾಗಿ ನಮ್ಮ ಮನೆಯಲ್ಲಿ ಅತ್ಯಾಚಾರ ಮಾಡಿದ್ದು, ಆ ನಂತರ ನಾನು ನಿನ್ನನ್ನು ಮದುವೆ ಮಾಡಿಕೊಂಡು ನಿನ್ನೊಂದಿಗೆ ಮತ್ತು ನಿನ್ನ ಮಕ್ಕಳೊಂದಿಗೆ ಇರುತ್ತೇನೆ ಎಂದು ಹೇಳಿದ್ದರು.

ಅಲ್ಲಿಂದ ಇಲ್ಲಿಯವರೆಗೂ ನನ್ನೊಂದಿಗೆ ದೈಹಿಕವಾಗಿ ಸಂಬಂಧ ಇಟ್ಟುಕೊಂಡಿದ್ದರು. ಆ ನಂತರ ರಾಜಶೇಖರ್ ನನ್ನಿಂದ ಸುಮಾರು 25 ರಿಂದ 35 ಲಕ್ಷ ಹಣ ಪಡೆದುಕೊಂಡಿದ್ದು ಅದನ್ನು ವಾಪಸ್ ಕೇಳಿದರೆ ನೀನು ಕೀಳು ಜಾತಿಯವಳೆಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾ‌ರೆ. ಚರ್ಚ್​ನಲ್ಲಿ ಮತ್ತು ನಮ್ಮ ಮನೆಯ ಮುಂಭಾಗದಲ್ಲಿ ನನಗೆ ಜಾತಿ ನಿಂದನೆ ಮಾಡಿ, ನೀನು ನನಗೆ ಹಣವನ್ನು ಕೇಳಿದರೆ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಸಾಯಿಸುತ್ತೇನೆ ಎಂದು ಹೆದರಿಸಿ ಹಣ ವಾಪಸ್ ಕೊಡದೇ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ತುಮಕೂರು: ಜಾತ್ರೆಗೆ ಬಂದಿದ್ದ ಬಾಲಕಿಗೆ ಬ್ಲ್ಯಾಕ್‌ಮೇಲ್ ಮಾಡಿ ಅತ್ಯಾಚಾರ - ಮೂವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.