ETV Bharat / state

ರಾಮನಗರಕ್ಕೆ ರಾಮನ ಬ್ರ್ಯಾಂಡ್ ಇದೆ, ಬೆಂಗಳೂರು ಬ್ರ್ಯಾಂಡ್ ಅಗತ್ಯವಿಲ್ಲ: ಅಶ್ವತ್ಥ್​ ನಾರಾಯಣ್ - ASWATHNARAYAN ATTACK ON GOVT - ASWATHNARAYAN ATTACK ON GOVT

ಮಾಜಿ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ್ ಅವರು ರಾಮನಗರ ಜಿಲ್ಲೆ ಹೆಸರು ಬದಲಾವಣೆ ಕುರಿತು ಮಾತನಾಡಿದರು. ರಾಮನಗರ ಜಿಲ್ಲೆಯ ಹೆಸರು ಬದಲಾವಣೆಯನ್ನು ಯಾರೂ ಒಪ್ಪಲ್ಲ ಎಂದಿದ್ದಾರೆ.

aswathnarayan
ಅಶ್ವತ್ಥ್​ನಾರಾಯಣ್ (ETV Bharat)
author img

By ETV Bharat Karnataka Team

Published : Jul 9, 2024, 5:30 PM IST

Updated : Jul 9, 2024, 5:36 PM IST

ಬೆಂಗಳೂರು : ರಾಮನಗರಕ್ಕೆ ರಾಮನ ಬ್ರ್ಯಾಂಡ್ ಇದೆ, ಬೆಂಗಳೂರು ಬ್ರ್ಯಾಂಡ್ ಅಗತ್ಯ ಇಲ್ಲ. ರಾಮನಗರ ಜಿಲ್ಲೆ ಹೆಸರು ಬದಲಾವಣೆಯನ್ನು ಯಾರೂ ಒಪ್ಪಲ್ಲ. ಬಿಜೆಪಿ ಯಾವ ಕಾರಣಕ್ಕೂ ಇದಕ್ಕೆ ಅವಕಾಶ ಮಾಡಿಕೊಡಲ್ಲ. ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಜಿಲ್ಲೆಯ ಹೆಸರು ಬದಲಾವಣೆ ವಿರುದ್ಧ ಹೋರಾಟ ಮಾಡಲಿವೆ ಎಂದು ಮಾಜಿ ಡಿಸಿಎಂ ಡಾ. ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಿಸಿಎಂ ಡಿ. ಕೆ ಶಿವಕುಮಾರ್ ಹಾಗೂ ಅವರ ರಾಮನಗರ ಮುಖಂಡರ ತಂಡ ಸಿಎಂ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿರುವ ಕೋರಿಕೆಯನ್ನು ಯಾರೂ ಒಪ್ಪುವಂಥದ್ದಲ್ಲ. ರಾಮನಗರ ಬೆಂಗಳೂರಿಗೆ ಸೇರಿಸಿಕೊಳ್ಳಿ ಅನ್ನುವ ಮನವಿ ಕೊಟ್ಟಿದ್ದಾರೆ. ಅವರ ಭಾವನೆಗಳನ್ನು ಯಾರೂ ಒಪ್ಪುವುದಕ್ಕೆ ಆಗಲ್ಲ. ಹೆಸರು ಬದಲಾವಣೆಗೆ ರಿಯಲ್ ಎಸ್ಟೇಟ್ ಕಾರಣ ಕೊಟ್ಟಿದ್ದಾರೆ. ಒಬ್ಬ ಆಡಳಿತಗಾರ ಕೊಡುವ ಕಾರಣನಾ ಇದು. ರಾಮನಗರದಲ್ಲಿ ಯಾವ ಅಭಿವೃದ್ಧಿ ಮಾಡದೇ ಆ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಅವರು ಆ ಜಿಲ್ಲೆಗೆ ಏನೂ ಮಾಡದೇ ಕೇವಲ ರಾಜಕೀಯ ಉದ್ದೇಶಕ್ಕಾಗಿ ಜಿಲ್ಲೆಯ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ರಾಮನಗರದಲ್ಲಿ ಏನೂ ಕೆಲಸ ಮಾಡಿಲ್ಲ. ಹೆಸರು ಬದಲಾವಣೆ ಮಾಡಿಕೊಂಡೇ ಆಟ ಆಡುತ್ತೇನೆ ಅನ್ನುವ ಮನೋಭಾವ ಡಿ. ಕೆ ಶಿವಕುಮಾರ್ ಅವರಲ್ಲಿ ಇದೆ. ರಾಮನಗರಕ್ಕೆ ರಾಮನ ಹೆಸರಿದೆ, ರಾಮನ ಹೆಸರೇ ಬದಲಾಯಿಸಲು ಹೊರಟಿದ್ದಾರೆ. ನಾಮಕರಣ ಮಾಡೋದೇ ಸಾಧನೆ ಅಂದುಕೊಂಡಿದ್ದಾರೆ. ಈ ಮೂಲಕ ತುಷ್ಟೀಕರಣ ನೀತಿ ಅನುಸರಿಸುತ್ತಿದ್ದಾರೆ. ರಾಮನಗರದಲ್ಲಿ ಅವರಿಗೆ ಸಾವಿರಾರು ಎಕರೆ ಜಮೀನಿದೆ. ಹಣಕ್ಕಾಗಿ ಈಗ ಏನು ಬೇಕಾದರೂ ಮಾಡುತ್ತೇನೆ ಅಂತ ಹೊರಟಿದ್ದಾರೆ. ಹಣ ಸಿಗುತ್ತದೆ ಅಂತ ಅಪ್ಪ ಇಟ್ಟ ಹೆಸರನ್ನೂ ಬೇಕಾದರೂ ಬದಲಾಯಿಸಿಕೊಳ್ತಾರೆ. ಡಿ ಕೆ ಶಿವಕುಮಾರ್ ಅವರಿಗೆ ಭ್ರಷ್ಟಾಚಾರ, ಹಣ ಮಾಡೋದು ಬಿಟ್ಟು ಬೇರೇನೂ ಬರಲ್ಲ ಎಂದು ವಾಗ್ದಾಳಿ ನಡೆಸಿದರು.

ಹೆಸರು ಬದಲಾವಣೆಗೆ ಜನ ಒಪ್ಪಲ್ಲ: ರಾಮನಗರ ಜಿಲ್ಲೆಯ ಹೆಸರು ಬದಲಾಯಿಸಲು ರಾಜ್ಯದ ಜನ, ರಾಮನಗರದ ಜನ ಒಪ್ಪಲ್ಲ. ಈ ಕೆಲಸ ಆಗಲು ನಾವು ಬಿಡಲ್ಲ. ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ದಿಕ್ಕು ತಪ್ಪಿಸಲು ರಾಮನಗರ ವಿಚಾರ ತೆಗೆದುಕೊಂಡು ಬಂದಿದ್ದಾರೆ. ರಾಮನಗರದ ಜನರೇ ಡಿ. ಕೆ ಶಿವಕುಮಾರ್ ಅವರ ಈ ನಡೆ ವಿರೋಧಿಸಲು, ಪ್ರತಿಭಟಿಸಲು ರೆಡಿಯಾಗಿದ್ದಾರೆ. ನಾವೂ ಕೂಡಾ ಹೋರಾಟ ನಡೆಸುತ್ತೇವೆ. ಕುಮಾರಸ್ವಾಮಿ ಅವರು ಈ ವಿಚಾರದಲ್ಲೂ ಸ್ಪಷ್ಟ ನಿಲುವು ವ್ಯಕ್ತಪಡಿಸಿದ್ದಾರೆ. ಬಿಜೆಪಿ, ಜೆಡಿಎಸ್ ಎರಡೂ ಪಕ್ಷಗಳೂ ಪ್ರಬಲವಾಗಿ ವಿರೋಧಿಸುವ ಕೆಲಸ ಮಾಡುತ್ತೇವೆ ಎಂದರು.

ಸ್ವಾರ್ಥ, ಹಣ, ತುಷ್ಟೀಕರಣ ಬಿಟ್ಟರೆ ಇವರಿಗೆ ಬೇರೇನೂ ಮುಖ್ಯವಲ್ಲ. ರಾಮನಗರಕ್ಕೆ ರಾಮನ ಬ್ರ್ಯಾಂಡ್ ಇದೆ, ಬೆಂಗಳೂರು ಬ್ರ್ಯಾಂಡ್ ಅಗತ್ಯ ಇಲ್ಲ. ರಾಮನಗರ ಹೇಗೆ ಅಭಿವೃದ್ಧಿ ಮಾಡಬಹುದು ಅಂತ ಕಳೆದ ಮೂರೂವರೆ ವರ್ಷಗಳಲ್ಲಿ ನಾವು ತೋರಿಸಿದ್ದೇವೆ. ಇವರಿಗೆ ಆಗಲ್ಲ ಅಂದರೆ ಸುಮ್ಮನಿರಲಿ ಎಂದು ಹೇಳಿದರು.

ವಿನಾಶದೆಡೆ ಹೆಜ್ಜೆ ಎಂದು ಆಕ್ರೋಶ: ಈ ಸರ್ಕಾರಕ್ಕೆ ಡೆಂಗ್ಯೂ ಸೊಳ್ಳೆ ಸಾಯಿಸಲು ಬರಲ್ಲ, ಇವರು ಅತಿರೇಕಕ್ಕೆ ಹೋಗ್ತಿರೋದು ನೋಡಿದರೆ ಇವರ ಸರ್ವನಾಶ ಹತ್ತಿರ ಆಗುತ್ತಿದೆ. ಅತಿರೇಕಕ್ಕೆ ಹೋಗಿ ವಿನಾಶದೆಡೆಗೆ ಹೋಗುತ್ತಿದ್ದಾರೆ. ಖಂಡಿತಾ ವಿನಾಶ ಆಗ್ತಾರೆ. ವಾಲ್ಮೀಕಿ ನಿಗಮ ಹಗರಣದಲ್ಲಿ ಸಿಎಂ, ಸಚಿವರು, ಶಾಸಕರು, ಅಧಿಕಾರಿಗಳು ಎಲ್ಲರೂ ಶಾಮೀಲು ಆಗಿದ್ದಾರೆ. ದಲಿತರ ಹಣ ಲೂಟಿ ಹೊಡೆಯಲು ಇವರೆಲ್ಲ ಶಾಮೀಲಾಗಿದ್ದಾರೆ. ಮತ್ತೊಂದು ಮುಡಾ ಪ್ರಕರಣ, ಒಬ್ಬ ಮಂತ್ರಿ ಹೆಲಿಕಾಪ್ಟರ್​ನಲ್ಲಿ ಹೋಗಿ ಕಡತಗಳನ್ನು ತಂದಿರೋದು ಎಲ್ಲಾದರೂ ನೋಡಿದ್ದೀರಾ? ಎಂದು ಪ್ರಶ್ನಿಸಿದರು.

ಇದು ಹೆಲಿಕಾಪ್ಟರ್​ನಲ್ಲಿ ಓಡಾಡುವ ಸರ್ಕಾರ. ಬೆಂಗಳೂರಿಂದ ಮೈಸೂರಿಗೆ ಹೋಗಲು ಎಷ್ಟು ಹೊತ್ತಾಗುತ್ತದೆ ಅಂತ ಸಚಿವರಿಗೆ ಗೊತ್ತಿಲ್ವಾ? ಅರ್ಜೆಂಟಲ್ಲಿ ಹೋಗಿ ಕಡತ ತಂದಿದ್ದಾರೆ. ಸಿದ್ದರಾಮಯ್ಯ ಅವರ ನಿಜವಾದ ಮುಖ ಬಯಲಿಗೆ ಬಂತು. ಸಿಎಂಗೆ ಮುಡಾ ಸೊಳ್ಳೆ ಕಡೀತಿದೆ. ಆ ಜಮೀನಿಗೆ ಇವರು ಉಲ್ಲೇಖಿಸಿರುವ ಮಾರುಕಟ್ಟೆ ಬೆಲೆ ಎಷ್ಟು? ಈಗ ಏಕಾಏಕಿ 62 ಕೋಟಿ ಆಗಿಬಿಡ್ತಾ? ಬಡ್ಡಿ ಸೇರಿಸಿ 62 ಕೋಟಿ ಆಗಿದೆ ಅಂತ ಬೈರತಿ ಸುರೇಶ್ ಹೇಳಿದ್ದಾರೆ. ಯಾವ ಬಡ್ಡಿಯಂತೆ, ಮೀಟರ್ ಬಡ್ಡಿನಾ? ಎಂದು ಅಶ್ವತ್ಥ್​ ನಾರಾಯಣ್ ಲೇವಡಿ ಮಾಡಿದರು.

ಮುಡಾದಲ್ಲಿ ಅಕ್ರಮ ಸೈಟುಗಳ ಹಂಚಿಕೆ ವಿಚಾರದ ವಿರುದ್ಧ ಹೋರಾಟ ನಡೆಸುವ ಕುರಿತು ಶುಕ್ರವಾರ ಮೈಸೂರಿನಲ್ಲಿ ಬಿಜೆಪಿಯಿಂದ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ. ಮುಡಾ ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಹೋರಾಟಕ್ಕೆ ಬಿಜೆಪಿ ನಿರ್ಧಾರ ಮಾಡಿದೆ. ಸಿಎಂ ರಾಜೀನಾಮೆ ನೀಡಬೇಕು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿ ಪ್ರತಿಭಟನೆಗೆ ನಿರ್ಧರಿಸಿದ್ದು, ಈ ಸಂಬಂಧ ಇಂದು ಸಂಜೆ ಮೈಸೂರಿನಲ್ಲಿ ಬಿಜೆಪಿ ಮುಖಂಡರ ಸಭೆ ನಡೆಸಿ ಹೋರಾಟದ ರೂಪುರೇಷೆ ಕುರಿತು ನಿರ್ಧರಿಸಲಾಗುತ್ತದೆ ಎಂದರು.

ಇದನ್ನೂ ಓದಿ : ರಾಮನಗರವನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರುನಾಮಕರಣ ಮಾಡಲು ಸಿಎಂಗೆ ಮನವಿ - Renaming Ramanagara

Last Updated : Jul 9, 2024, 5:36 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.