ರಾಮನಗರ: ಅರ್ಕಾವತಿ ಜಲಾಶಯದ ಸುತ್ತಮುತ್ತಲ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚಾಗಿದ್ದು, ಗರಿಷ್ಟ ಮಿತಿ ತಲುಪುವ ಸೂಚನೆ ದೊರೆತಿದೆ. ಜಲಾಶಯದ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಕ್ಷಣದಲ್ಲೂ ನೀರು ಹೊರಬಿಡುವ ಸಾಧ್ಯತೆ ಇದೆ.
ಮುಂಗಾರುಪೂರ್ವದಲ್ಲೇ ತುಂಬಿದ ಡ್ಯಾಂ: ಪೂರ್ವ ಮುಂಗಾರಿನ ಸಂದರ್ಭದಲ್ಲೇ ರಾಮನಗರ ಜಿಲ್ಲೆಯ ಜೀವನಾಡಿ ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಮಂಚನಬೆಲೆ ಜಲಾಶಯ ತುಂಬಲು ಇನ್ನೊಂದು ಅಡಿಯಷ್ಟೇ ಬಾಕಿ ಇದೆ. ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನದಿಯ ಒಳ ಹರಿವಿನ ಪ್ರಮಾಣ ಏರಿಕೆಯಾಗಿದೆ.
ನದಿ ಪಾತ್ರದ ಜನರಿಗೆ ಸೂಚನೆ: ನದಿ ಪಾತ್ರಕ್ಕೆ ಹೆಚ್ಚಿನ ನೀರು ಬಿಡುವ ಸಂಭವ ಇರುತ್ತದೆ. ಹಾಗಾಗಿ ಜಲಾಶಯ ಸಮೀಪದ ನದಿ ಪಾತ್ರದ ಜನರು ತಮ್ಮ ಜಾನುವಾರುಗಳನ್ನು ಬಿಡುವುದಾಗಲಿ, ನದಿ ದಾಟುವುದಾಗಲಿ ಮಾಡಬಾರದು ಎಂದು ಮಂಚನಬೆಲೆ ಯೋಜನಾ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ ಯುವಕ-ಯುವತಿಗೆ ಆಟೋ ಚಾಲಕನಿಂದ ಕಿರುಕುಳ; ಪ್ರಕರಣ ದಾಖಲು - Sexual Harassment