ETV Bharat / state

ಅಯ್ಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಂಕಲ್ಪ: 15 ವರ್ಷಗಳ ಮುಡಿ ಅರ್ಪಿಸಿದ ಹಿಂದೂ ಮುಖಂಡ

ಅಯ್ಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಸಂಕಲ್ಪ ಹೊತ್ತ ಹಿಂದೂ ಮುಖಂಡರೊಬ್ಬರು ಬರೋಬ್ಬರಿ 15 ವರ್ಷಗಳ ಬಳಿಕ ತಮ್ಮ ಮುಡಿ ಅರ್ಪಿಸಿ ಗಮನ ಸೆಳೆದರು.

Hindu leader  Ram Mandir Construction  offered hair  ರಾಮಮಂದಿರ ನಿರ್ಮಾಣ ಸಂಕಲ್ಪ  ಮುಡಿ ಅರ್ಪಿಸಿದ ಹಿಂದೂ ಮುಖಂಡ
15 ವರ್ಷಗಳ ಮುಡಿ ಅರ್ಪಿಸಿದ ಹಿಂದೂ ಮುಖಂಡ
author img

By ETV Bharat Karnataka Team

Published : Feb 24, 2024, 1:15 PM IST

15 ವರ್ಷಗಳ ಮುಡಿ ಅರ್ಪಿಸಿದ ಹಿಂದೂ ಮುಖಂಡ

ಹುಬ್ಬಳ್ಳಿ: ಸಾಮಾನ್ಯವಾಗಿ ತಿರುಪತಿ ತಿಮ್ಮಪ್ಪ, ಧರ್ಮಸ್ಥಳದ ಮಂಜುನಾಥ ಸ್ವಾಮಿಗೆ ಭಕ್ತರು ತಮ್ಮ ಇಷ್ಟಾರ್ಥ ಸಿದ್ದಿಗಾಗಿ ತಲೆಗೂದಲು ಮುಡಿ ಕೊಡುವುದನ್ನು ನೋಡಿದ್ದೇವೆ. ಆದ್ರೆ ಹುಬ್ಬಳ್ಳಿಯ ಆರ್​ಎಸ್​ಎಸ್ ಸ್ವಯಂ ಸೇವಕ ಹಾಗೂ ಹಿಂದೂ ಮುಖಂಡರೊಬ್ಬರು ಶ್ರೀರಾಮ ಮಂದಿರ ನಿರ್ಮಾಣವಾದ್ರೆ ಮುಡಿಕೊಡುವುದಾಗಿ ಸಂಕಲ್ಪ ತೊಟ್ಟು ಈಗ ತಮ್ಮ ಮುಡಿ ಅರ್ಪಿಸಿದ್ದಾರೆ.

ನಗರದ ಗಣು ಜರತಾರಘರ, ಮುಡಿ ಹರಕೆ ಸಮರ್ಪಣೆ ಮಾಡಿದ ಹಿಂದೂ ಮುಖಂಡರಾಗಿದ್ದಾರೆ. ಇವರು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಗೊಳ್ಳಲಿ ಎಂದು ಕಳೆದ 15 ವರ್ಷಗಳ ಹಿಂದೆ ಮಾಡಿದ್ದ ಸಂಕಲ್ಪದಂತೆ ಇಲ್ಲಿಯ ಕಮರಿಪೇಟ ಶ್ರೀರಾಮ ಮಂದಿರದಲ್ಲಿ ಗುರುವಾರ ಸರಳ ಕಾರ್ಯಕ್ರಮದಲ್ಲಿ ಮುಡಿ ಹರಕೆ ಪೂರ್ಣಗೊಳಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡ ವಿಠಲ ಲದವಾ, ಪಾಲಿಕೆ ಸದಸ್ಯ ಶಿವು ಮೆಣಸಿನಕಾಯಿ, ಮಾಜಿ ಉಪ ಮೇಯ‌ರ್ ನಾರಾಯಣ ಜರತಾರಘರ ಸಾಕ್ಷಿಯಾದರು.

ಗಣು ಜರತಾರಘರ್ ಅವರು ಮುಡಿ ಬಿಡಲಿಕ್ಕೆ ಏನು‌ ಕಾರಣ ಎಂಬುದನ್ನು ಬಿಚ್ಚಿಟ್ಟಿದ್ದಾರೆ. 2003ರಲ್ಲಿ ಹುಬ್ಬಳ್ಳಿಯಿಂದ 50 ಜನ ರೈಲಿನಲ್ಲಿ ಅಯೋಧ್ಯೆಗೆ ತೆರಳುತ್ತಿದ್ದಾಗ ಸುಲ್ತಾನಪುರದಲ್ಲಿ ಇವರನ್ನು ತಡೆ ಹಿಡಿಯಲಾಗಿತ್ತು. ಬಳಿಕ ಕಾಲ್ನಡಿಗೆಯಲ್ಲಿ ಅಯೋಧ್ಯೆಗೆ ತೆರಳಿದರೂ ಶ್ರೀರಾಮನ ದರ್ಶನ ಸಾಧ್ಯವಾಗಲಿಲ್ಲ. ಬಳಿಕ ಹುಬ್ಬಳ್ಳಿಗೆ ಬಂದು ಹಿಂದೂ ಸಂಘಟನೆಯನ್ನು ಬಲಪಡಿಸುವ ಕೆಲಸದಲ್ಲಿ ನಿರತಗಿದ್ದರು. ಆಗ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗುವವರೆಗೂ ತಲೆ ಕೂದಲು ತೆಗೆಯುವುದಿಲ್ಲ ಎಂದು 2009 ರಲ್ಲಿ ಸಂಕಲ್ಪ ಮಾಡಿದ್ದರು. ಆ ಸಂಕಲ್ಪದಂತೆ ಈಗ ಮುಡಿ ನೀಡುವ ಮೂಲಕ ತಮ್ಮ ಹರಕೆಯನ್ನು ಪೂರ್ಣಗೊಳಿಸಿದ್ದಾರೆ.

ಆದರೆ ಕಳೆದ ತಿಂಗಳು 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೊಂಡಿತು. ಆಗ ಮುಡಿ ಅರ್ಪಿಸುವ ಆಲೋಚನೆ ಇವರದಾಗಿತ್ತು. ಆದರೆ ಶುಭ ಕಾರ್ಯಗಳಲ್ಲಿ ಮುಡಿ ಕೊಡುವುದು ಸರಿಯಲ್ಲ ಎಂಬ ಅರ್ಚಕರ ಸಲಹೆಯಂತೆ ಸರಿಯಾಗಿ 1 ತಿಂಗಳ ಬಳಿಕ ಮುಡಿ ಹರಕೆ ತೀರಿಸಿದ್ದೇನೆ ಎನ್ನುತ್ತಾರೆ ಗಣು ಜರತಾರಘರ.

ಇವರ ಸಂಕಲ್ಪ ಎಷ್ಟೋ ಜನರಿಗೆ ಆಗಲಿ, ಆಪ್ತರಿಗೆ ಆಗಲಿ ತಿಳಿಸಿರಲಿಲ್ಲ. ಇವರ ಮುಡಿಕೊಟ್ಟ ಮೇಲೆ ಇವರ ಆಪ್ತರಿಗೆ ಗೊತ್ತಾಗಿ ಸಂತಸ ವ್ಯಕ್ತಪಡಿಸಿದ್ದಾರೆ. ಅಯೋಧ್ಯೆಯ ಶ್ರೀರಾಮಲಲ್ಲಾ ಮೂರ್ತಿ ಪ್ರತಿಷ್ಟಾಪನೆ ಆಗಿದ್ದಕ್ಕೆ ಹಾಗೂ ನಮ್ಮ ಆಪ್ತರು ಮುಡಿಕೊಟ್ಟಿದ್ದಕ್ಕೆ ನಮಗೆ ಹೆಮ್ಮೆ ಇದೆ ಎಂದು ಆಪ್ತರಾದ ಸಿದ್ದು ಶೆಟ್ಟರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಓದಿ: ರೈತರ ಪ್ರತಿಭಟನೆ: ಇಂದು ದೇಶಾದ್ಯಂತ ಕ್ಯಾಂಡಲ್ ಮೆರವಣಿಗೆ, ದೆಹಲಿ ಚಲೋ ನಿರ್ಧಾರ ಫೆಬ್ರವರಿ 29ಕ್ಕೆ ಮುಂದೂಡಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.