ಮಂಡ್ಯ : ಕಾಂಗ್ರೆಸ್ ಬೆಂಬಲಿಸಲು ಕರ್ನಾಟಕ ರಾಜ್ಯ ರೈತ ಸಂಘ ಮುಂದಾಗಿದೆ. ಎನ್ಡಿಎ ಒಕ್ಕೂಟವನ್ನು ಸೋಲಿಸಲು ರೈತ ಸಂಘ ನಿರ್ಧಾರ ಕೈಗೊಂಡಿದೆ. ಲೋಕಸಭಾ ಚುನಾವಣೆಯಲ್ಲಿ NDA ಒಕ್ಕೂಟದ ಬಿಜೆಪಿ-ಜೆಡಿಎಸ್ ಸೋಲಿಸಲು ನಿರ್ಧರಿಸಿದೆ.
''ಬಿಜೆಪಿ ಮತ್ತು ಮಿತ್ರ ಪಕ್ಷಗಳನ್ನು ಸೋಲಿಸಿ, ರೈತ ಸಮುದಾಯ ಉಳಿಸಿ ಎಂಬ ಘೋಷವಾಕ್ಯದೊಂದಿಗೆ ಆಂದೋಲನ ನಡೆಸಲು ರೈತರು ನಿರ್ಧಾರ ಕೈಗೊಂಡಿದ್ದಾರೆ. ರಾಜ್ಯಾದ್ಯಂತ ಶೀಘ್ರದಲ್ಲೇ ಕರ್ನಾಟಕ ರಾಜ್ಯ ರೈತ ಸಂಘದಿಂದ ಪ್ರಚಾರ ಆಂದೋಲನ ಆರಂಭ ಮಾಡಲಿದೆ'' ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ''ಕಳೆದ 10 ವರ್ಷದಿಂದ ನರೇಂದ್ರ ಮೋದಿ ರೈತರಿಗೆ ಅನ್ಯಾಯ ಮಾಡಿದ್ದಾರೆ. NDA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತ ಕುಲ ಸಂಪೂರ್ಣ ನಾಶವಾಗುತ್ತದೆ. ಕೃಷಿ ತಿದ್ದುಪಡಿ ಕಾಯ್ದೆಗಳನ್ನ ಜಾರಿ ಮಾಡಿ ರೈತರಿಗೆ ಅನ್ಯಾಯ ಮಾಡಿದ್ದಾರೆ'' ಎಂದು ಆರೋಪಿಸಿದರು.
''ದೆಹಲಿಯಲ್ಲಿ ನಡೆದ ರೈತರ ಸಭೆಯಲ್ಲಿ ಸರ್ವಾನುಮತದಿಂದ NDA ಕಿತ್ತೊಗೆಯಲು ತೀರ್ಮಾನ ಮಾಡಲಾಗಿದೆ. ಬಿಜೆಪಿ ಸರ್ಕಾರ ಯಾವುದೇ ಕಾರಣಕ್ಕೂ ಅಧಿಕಾರಕ್ಕೆ ಬರಬಾರದು. ಶೀಘ್ರವಾಗಿ ರೈತರ ಉಳಿವಿಗಾಗಿ ಆಂದೋಲನ ನಡೆಸಲಾಗುತ್ತೆ'' ಎಂದು ತಿಳಿಸಿದರು.
ಇದನ್ನೂ ಓದಿ : ದೆಹಲಿಯಲ್ಲಿ ರೈತರ ಬಂಧನ ಖಂಡಿಸಿ ರಾಜ್ಯದ ಗ್ರಾಮೀಣ ಭಾಗ ಬಂದ್ಗೆ ಚಿಂತನೆ: ಬಡಗಲಪುರ ನಾಗೇಂದ್ರ