ETV Bharat / state

ಸೋಲಿಗೆ ಸಚಿವರನ್ನು ಹೊಣೆ ಮಾಡುವುದಾಗಿ ರಾಹುಲ್ ಗಾಂಧಿ ಹೇಳಿದ್ದಾರೆ: ಡಿ.ಕೆ.ಶಿವಕುಮಾರ್ - D K Shivakumar

ರಾಹುಲ್​ ಗಾಂಧಿ ಅವರು ಸಚಿವರ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರವಾರು ಸೋಲಿಗೆ ಕಾರಣವೇನು ಎಂಬ ಬಗ್ಗೆ ಚರ್ಚೆ ಮಾಡಿತದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್​ ತಿಳಿಸಿದರು.

ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್ (ETV Bharat)
author img

By ETV Bharat Karnataka Team

Published : Jun 7, 2024, 6:29 PM IST

ಬೆಂಗಳೂರು: ಲೋಕಸಭಾ ಚುನಾವಣೆಯ ಸೋಲಿಗೆ ಸಚಿವರನ್ನು ಹೊಣೆ ಮಾಡಲಾಗುವುದು ಎಂದು ರಾಹುಲ್ ಗಾಂಧಿ ಎಚ್ಚರಿಕೆ ನೀಡಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ನಗರದ ಖಾಸಗಿ ಹೋಟೆಲ್​ನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 28 ಜನ ಅಭ್ಯರ್ಥಿಗಳನ್ನು ರಾಹುಲ್ ಗಾಂಧಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು. ಯಾವ ರೀತಿ ಕೆಲಸ ಮಾಡಬೇಕು ಎಂದೂ ಕಿವಿಮಾತು ಹೇಳಿದ್ದಾರೆ. ಬೆಂಗಳೂರು, ದೆಹಲಿ ಅವಾಯ್ಡ್ ಮಾಡಿ ಕ್ಷೇತ್ರದಲ್ಲಿ ಹೆಚ್ಚಾಗಿ ಇರಬೇಕು. ಜನರ ಜೊತೆಗೇ ಇರಿ. ಪರಾಜಿತರಿಗೂ ಜನರ ಮಧ್ಯೆ ಇರುವಂತೆ ಸೂಚನೆ ನೀಡಿದ್ದಾರೆ ಎಂದರು.

ಗೆದ್ದವರು ರಾಜ್ಯದ ಪರ ಧ್ವನಿ ಎತ್ತಬೇಕು. ತೆರಿಗೆ ಅನ್ಯಾಯದ ಬಗ್ಗೆ, ನೀರಾವರಿ ಯೋಜನೆಗಳ ಬಗ್ಗೆ ಗಟ್ಟಿ ದನಿಯಲ್ಲಿ ಮಾತನಾಡಬೇಕು. ರಾಜ್ಯಕ್ಕಾಗಿರುವ ಮಲತಾಯಿ ಧೋರಣೆ ಕುರಿತು ಒಗ್ಗಟ್ಟಾಗಿ ಮಾತನಾಡಿ. ನಾವು 100 ಜನ ಸಂಸತ್​ನಲ್ಲಿದ್ದೇವೆ. ನಮಗೆ ಹೆಚ್ಚಿನ ಸಮಯಾವಕಾಶ ಸಿಗುತ್ತೆ‌. ಎಲ್ಲರೂ ಅಧಿವೇಶನದಲ್ಲಿ ಮಾತನಾಡಿ. ಕ್ಷೇತ್ರದ ಪರವಾಗಿ ಮಾತನಾಡಿ ಎಂದು ಸೂಚಿಸಿದ್ದಾರೆ ಎಂದು ತಿಳಿಸಿದರು.

ಸಚಿವರ ಜೊತೆ ಪ್ರತ್ಯೇಕವಾಗಿ ಸಭೆ ನಡೆಸಿ ಕ್ಷೇತ್ರವಾರು ಸೋಲಿಗೆ ಕಾರಣ ಏನು ಎಂಬ ಬಗ್ಗೆ ಚರ್ಚೆ ಮಾಡಿದರು. ಹೊಣೆಗಾರಿಕೆ ಬಹಳ ಮುಖ್ಯ ಎಂದಿದ್ದಾರೆ. ಆಗಿರುವ ನ್ಯೂನತೆ ಸರಿಪಡಿಸಿ ಪಕ್ಷ ಸಂಘಟನೆ ಮಾಡಲು ಸೂಚನೆ ಕೊಟ್ಟಿದ್ದಾರೆ. ಒಂದು ಕಾರ್ಯಯೋಜನೆ ಮಾಡಿ, ಎಲ್ಲಿ ಸೋಲಾಗಿದ, ಆ ಬಗ್ಗೆ ವರದಿ ನೀಡಲು ಸೂಚಿಸಿದ್ದಾರೆ. ಮುಂದೆ ಎಲ್ಲರ ಜೊತೆ ಸಭೆ ನಡೆಸಿ ಯಾವ ರೀತಿ ಸಮಸ್ಯೆ ಬಗೆಹರಿಸಬೇಕು ಎಂಬ ಬಗ್ಗೆ ಚರ್ಚೆ ನಡೆಸುತ್ತೇವೆ. ಸಚಿವರಿಗೂ ಮಾಹಿತಿ ಕೇಳಿದ್ದಾರೆ. ವಿಧಾನಸಭೆ ಕ್ಷೇತ್ರವಾರು ವರದಿ ಕೇಳಿದ್ದಾರೆ. ಎಐಸಿಸಿ ಅಧ್ಯಕ್ಷರು, ಸಿಎಂ, ಡಿಸಿಎಂ ಬಳಿಯೂ ವರದಿ ಕೇಳಿದ್ದಾರೆ.‌ ಚುನಾವಣೆ ನಡೆದ ರೀತಿ, ಗೆದ್ದಿರುವ ಬಗ್ಗೆ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ಆಗಿದೆ ಎಂದರು.

ಅತಿಯಾದ ವಿಶ್ವಾಸ ಸೋಲಿಗೆ ಕಾರಣವಾಯಿತು: ನಾವು ಸೋಲಿನ ದುಃಖದಿಂದ ಹೊರಬಂದಿಲ್ಲ. ಮತ ನೀಡಿದ ಕ್ಷೇತ್ರದ ಜನರಿಗೆ ಕೃತಜ್ಞತೆ ಹೇಳಬೇಕು. ಯಾರು ಮತ ಕೊಟ್ಟಿಲ್ಲ ಅವರ ಹೃದಯವನ್ನೂ ಗೆಲ್ಲುವಂತೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ನನ್ನ ಅತಿಯಾದ ವಿಶ್ವಾಸ ಸೋಲಿಗೆ ಕಾರಣವಾಯಿತು. ಜೊತೆಗೆ ರಾಜ್ಯಾದ್ಯಂತ ಓಡಾಡಬೇಕಾಗಿತ್ತು. ಈ ಸೋಲು ವೈಯಕ್ತಿಕ ಸೋಲು. ಬಿಜೆಪಿಯವರು ಉತ್ತಮ ಸ್ಟ್ರಾಟೆಜಿ ಮಾಡಿದ್ದಾರೆ. ವಿವಾದರಹಿತ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರು ಎಂದು ಹೇಳಿದರು.

ಕನಕಪುರದಲ್ಲಿ 60,000 ಮುನ್ನಡೆ ನಿರೀಕ್ಷಿಸಿದ್ದೆ. ಆದರೆ ಬರೀ 25,000 ಮಾತ್ರ ಬಂದಿದೆ. ಕನಕಪುರದಲ್ಲಿ ಹೆಚ್.ಡಿ.ದೇವೇಗೌಡರೂ ಸೋತಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿಯೂ ಸೋತಿದ್ದಾರೆ. ನಿಖಿಲ್ ಕುಮಾರಸ್ವಾಮಿಯೂ ಸೋತಿದ್ದಾರೆ. ಅನಿತಾ ಕುಮಾರಸ್ವಾಮಿಯೂ ಸೋತಿದ್ದಾರೆ. ಈಗ ಡಿ.ಕೆ.ಸುರೇಶ್ ಸೋತಿದ್ದಾರೆ ಎಂದರು.

ರಾಹುಲ್ ಗಾಂಧಿ ಕಾನೂನಿಗೆ ಗೌರವ ಕೊಟ್ಟು ಕೋರ್ಟ್ ಮುಂದೆ ಹಾಜರಾಗಿದ್ದಾರೆ. ಯತ್ನಾಳ್ ಹೇಳಿಕೆ ಹಾಗೂ ದಿನಪತ್ರಿಕೆಯಲ್ಲಿ ವರದಿಯಾದ ರೇಟ್ ಕಾರ್ಡ್ ಮೇಲೆ ನಾವು ಜಾಹೀರಾತು ಕೊಟ್ಟಿದ್ದೆವು. ಅದರಲ್ಲಿ ಸುಮ್ಮನೆ ರಾಹುಲ್ ಗಾಂಧಿಯನ್ನು ಪಾರ್ಟಿ ಮಾಡಿದ್ದಾರೆ. ಅದಕ್ಕೂ ಅವರಿಗೂ ಸಂಬಂಧ ಇಲ್ಲ. ಅದರಲ್ಲಿ ಅವರ ಸಹಿನೂ ಇಲ್ಲ. ರಾಜಕೀಯಕ್ಕಾಗಿ ಮಾಡಿದ್ದಾರೆ. ಬರೀ ದ್ವೇಷ ಬಿಜೆಪಿಯವರಲ್ಲಿ ತುಂಬಿ ತುಳುಕುತ್ತಿದೆ ಎಂದು ಟೀಕಿಸಿದರು.

ಇದನ್ನೂ ಓದಿ: ಹೆಚ್‌ಡಿಕೆಯಿಂದ ತೆರವಾಗಲಿರುವ ಚನ್ನಪಟ್ಟಣ ಕ್ಷೇತ್ರ: ರಾಜಕೀಯ ಭವಿಷ್ಯಕ್ಕಾಗಿ ಹಲವರ ಪೈಪೋಟಿ - Channapatna By Election

ETV Bharat Logo

Copyright © 2024 Ushodaya Enterprises Pvt. Ltd., All Rights Reserved.