ಬೆಂಗಳೂರು: ಹೃದಯದಲ್ಲಿ ಟಿಪ್ಪು ಇಟ್ಟುಕೊಂಡು ಬಾಯಲ್ಲಿ ಜೈ ಶ್ರೀರಾಮ್ ಎಂದರೆ ಯಾವುದೇ ಉಪಯೋಗವಿಲ್ಲ. ರಾಮ ಮಂದಿರದ ಸಂಪೂರ್ಣ ಶ್ರೇಯ ಪ್ರಧಾನಿ ಮೋದಿ ಅವರಿಗೆ ಸಲ್ಲಿಕೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರತಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
-
ಬೆಂಗಳೂರಿನಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಾಯಿತು.
— R. Ashoka (ಆರ್. ಅಶೋಕ) (@RAshokaBJP) January 27, 2024 " class="align-text-top noRightClick twitterSection" data="
ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಬಿ ವೈ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ, ಶ್ರೀ ಬಸವರಾಜ ಎಸ್. ಬೊಮ್ಮಾಯಿ, ಶ್ರೀ ಡಿ. ವಿ. ಸದಾನಂದ ಗೌಡ, ಶ್ರೀ ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ಶ್ರೀ ಭೂಪೇಂದ್ರ ಯಾದವ್, ಶ್ರೀ… pic.twitter.com/dovGD5DEXv
">ಬೆಂಗಳೂರಿನಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಾಯಿತು.
— R. Ashoka (ಆರ್. ಅಶೋಕ) (@RAshokaBJP) January 27, 2024
ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಬಿ ವೈ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ, ಶ್ರೀ ಬಸವರಾಜ ಎಸ್. ಬೊಮ್ಮಾಯಿ, ಶ್ರೀ ಡಿ. ವಿ. ಸದಾನಂದ ಗೌಡ, ಶ್ರೀ ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ಶ್ರೀ ಭೂಪೇಂದ್ರ ಯಾದವ್, ಶ್ರೀ… pic.twitter.com/dovGD5DEXvಬೆಂಗಳೂರಿನಲ್ಲಿ ಇಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಾಯಿತು.
— R. Ashoka (ಆರ್. ಅಶೋಕ) (@RAshokaBJP) January 27, 2024
ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಶ್ರೀ ಬಿ ವೈ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ, ಶ್ರೀ ಬಸವರಾಜ ಎಸ್. ಬೊಮ್ಮಾಯಿ, ಶ್ರೀ ಡಿ. ವಿ. ಸದಾನಂದ ಗೌಡ, ಶ್ರೀ ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ಶ್ರೀ ಭೂಪೇಂದ್ರ ಯಾದವ್, ಶ್ರೀ… pic.twitter.com/dovGD5DEXv
ಅರಮನೆ ಮೈದಾನದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದಲ್ಲಿ ಹೊಸ ನಾಯಕತ್ವ ಬಂದ ನಂತರ ಮೊದಲ ಕಾರ್ಯಕಾರಣಿ ಸಭೆ ನಡೆಸಲಾಯಿತು. ರಾಮ ಮಂದಿರ ನಿರ್ಮಾಣ ಮಾಡುವ ನೇತೃತ್ವ ಪ್ರಧಾನಿ ಮೋದಿ ತೆಗೆದುಕೊಂಡು 500 ವರ್ಷದ ಗುಲಾಮಗಿರಿಯ ಸಂಕೇತ ತೊಲಗಿ ದೇಶಕ್ಕೆ ಕೀರ್ತಿ ಗೌರವ ತಂದಿದ್ದಕ್ಕಾಗಿ, ನಿರ್ಣಯ ಮಂಡಿಸಿ ಒಮ್ಮತದಿಂದ ಅಂಗೀಕರಿಸಲಾಯಿತು. ಬಾಬರ್ ಸೂಚನೆಯಂತೆ ರಾಮ ಮಂದಿರ ಕೆಡವಲಾಗಿತ್ತು. ಈಗ ಪುನರ್ ನಿರ್ಮಾಣ ಮಾಡಲಾಗಿದೆ. ಇದರ ಸಂಪೂರ್ಣ ಕ್ರೆಡಿಟ್ ಮೋದಿಗೆ ಸಲ್ಲಬೇಕು. ಇವರ ಜೊತೆ ಕರ ಸೇವಕರು ಹಾಗೂ ಪಾದರಕ್ಷೆ ಹಾಕದೇ ವಾದ ಮಂಡಿಸಿದ ವಕೀಲ ಪರಾಶರನ್ ಅವರಿಗೂ ಸಲ್ಲಬೇಕು ಎಂದರು.
ಸೋಮನಾಥ ಮಂದಿರ ಉದ್ಘಾಟನೆಗೆ ಹೋಗದಂತೆ ರಾಷ್ಟ್ರಪತಿಗೆ ಅಂದಿನ ಪ್ರಧಾನಿ ನೆಹರೂ ಹೇಳಿದ್ದರು. ಆದರೆ, ಈಗ ರಾಮ ಮಂದಿರ ಉದ್ಘಾಟನೆ ರಾಷ್ಟ್ರಪತಿ ಮಾಡಬೇಕು ಎನ್ನುವ ದ್ವಂದ್ವ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ನೀಡಿದ್ದಾರೆ. ವಿವಾದಾತ್ಮಕ ಭೂಮಿ, ರಾಮ ಕಾಲ್ಪನಿಕ ಎಂದ ಸಿದ್ದರಾಮಯ್ಯ ಈಗ ಜೈಶ್ರೀರಾಮ್ ಎನ್ನುತ್ತಾರೆ. ಹೃದಯದಲ್ಲಿ ಟಿಪ್ಪು ಇರಿಸಿಕೊಂಡು ಶ್ರೀರಾಮ್ ಎಂದು ಬಾಯಲ್ಲಿ ಹೇಳಿದರೆ ಏನು ಉಪಯೋಗ ಎಂದರು.
ಕಾಂಗ್ರೆಸ್ ಜನವಿರೋಧಿ ನೀತಿ ವಿರುದ್ಧ ಬಸವರಾಜ ಬೊಮ್ಮಾಯಿ ನಿಲುವಳಿ ಮಂಡಿಸಿದರು. ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ, ಇದರ ಬಗ್ಗೆ ವಿವರವಾದ ನಿಲುವಳಿಗೆ ಸಭೆ ಅಂಗೀಕರಿಸಿತು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೇಂದ್ರದಿಂದ ಅನ್ಯಾಯ ಎನ್ನುವ ಕಾಂಗ್ರೆಸ್ ಆರೋಪದ ಕುರಿತು ನಿಲುವಳಿ ಮಂಡಿಸಿದರು. ರೈಲ್ವೆ, ಲೋಕೋಪಯೋಗಿ, ಬರ ಪರಿಹಾರ ವಿಚಾರದಲ್ಲಿ ಸೇರಿ ಯಾವುದರಲ್ಲಿಯೂ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ ಎನ್ನುವ ಅಂಶವನ್ನು ವರದಿ ಮಾಡಿದ್ದಾರೆ ಎಂದರು.
ಚುನಾವಣಾ ಕಾರ್ಯ ಯೋಜನೆ ಯಾವ ರೀತಿ ಮಾಡಬೇಕು, ಅಧಿವೇಶನಕ್ಕೆ ಮೊದಲು ರೈತರಿಗೆ ಸರ್ಕಾರ ಮಾಡಿರುವ ದ್ರೋಹದ ಕುರಿತು ಜಾಗೃತಿ ಮೂಡಿಸಬೇಕು ಎನ್ನುವ ನಿರ್ಧಾರ ಮಾಡಿದ್ದು, ಮುಲ್ಲಾಗಳಿಗೆ 10 ಸಾವಿರ ಕೋಟಿ, ರೈತರಿಗೆ 105 ಕೋಟಿ ಇದು ಈ ಸರ್ಕಾರದ ನೀತಿಯಾಗಿದೆ. ಇದರ ವಿರುದ್ಧ ನಮ್ಮ ಹೋರಾಟ ನಡೆಸಲು ನಿರ್ಧಾರ ಮಾಡಲಾಯಿತು ಎಂದರು.
ಯತ್ನಾಳ್ ಗೈರಿನ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ಆಹ್ವಾನಿತರಿಗೆಲ್ಲ ಆಹ್ವಾನ ಹೋಗಿದೆ, ಬಾರದವರ ಜೊತೆ ಮಾತನಾಡಲಿದ್ದೇವೆ, ಎಲ್ಲ ಬಗೆಹರಿದಿದೆ, 28 ಸ್ಥಾನ ಗೆಲ್ಲುವ ಕಡೆ ಗಮನ ಹರಿಸಲಿದ್ದೇವೆ. ಸೋಮಶೇಖರ್ ವಿಷಯ ಐದಾರು ತಿಂಗಳಿನಿಂದಲೂ ನಡೆಯುತ್ತಿದೆ. ಬಿಜೆಪಿ ಬಿಡಲ್ಲ ಎಂದು ನನ್ನ ಬಳಿ ಹೇಳಿದ್ದಾರೆ. ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರದ ಜೊತೆ ಹೋಗಬೇಕಿದೆ ಎನ್ನುವುದನ್ನು ಗಮನಕ್ಕೆ ತಂದಿದ್ದಾರೆ. ಅವರು ಪಕ್ಷದ ವಿರುದ್ಧ ನಡೆದುಕೊಳ್ಳುತ್ತಿಲ್ಲ, ಪಕ್ಷದ ವಿರುದ್ಧ ಹೇಳಿಕೆಗಳನ್ನೂ ಕೂಡಾ ನೀಡಿಲ್ಲ ಹಾಗಾಗಿ, ಕ್ರಮದಂತಹ ಪ್ರಶ್ನೆ ಬರಲ್ಲ, ಇನ್ನು ಕೆಲ ಶಾಸಕರು, ಸಂಸದರು ಬಂದಿಲ್ಲ ಎಂದು ಸೋಮಶೇಖರ್ ಗೈರಿನ ಕುರಿತು ಸ್ಪಷ್ಟೀಕರಣ ನೀಡಿದರು.
ಕೇಂದ್ರ ಸಚಿವ ಜೈಶಂಕರ್ ಬೆಂಗಳೂರಿನಿಂದ ಸ್ಪರ್ಧಿಸುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶೋಕ್, ಬೆಂಗಳೂರಿನ ಮೂರು ಕ್ಷೇತ್ರಗಳು ಭದ್ರಕೋಟೆ ಮಾತ್ರವಲ್ಲ ಉಕ್ಕಿನಕೋಟೆ, ಯಾರೂ ಭೇದಿಸಲಾಗಲ್ಲ, ಯಾರೇ ಇಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದರೂ ಗೆಲುವು ಖಚಿತ, ಕೇಂದ್ರದ ನಾಯಕರ ನಿರ್ಧಾರಕ್ಕೆ ಬೆಂಬಲ ನೀಡುತ್ತೇವೆ ಎಂದರು.
ಈಗಾಗಲೇ ಜೆಡಿಎಸ್ ನಾಯಕರೊಂದಿಗೆ ಮಾತುಕತೆ ನಡೆಸಲಾಗಿದೆ; ಈಗಷ್ಟೇ ಪರಿಷತ್ ಚುನಾವಣೆ ಕುರಿತು ಜೆಪಿ ನಡ್ಡಾ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ, ಈಗಾಗಲೇ ಜೆಡಿಎಸ್ ನಾಯಕರು ನಮ್ಮ ನಾಯಕ ಯಡಿಯೂರಪ್ಪ ನಿವಾಸದಲ್ಲಿ ಮಾತುಕತೆ ನಡೆಸಿದ್ದಾರೆ. ಎಲ್ಲವನ್ನೂ ಪರಾಮರ್ಶಿಸಿ ನಿರ್ಧರಿಸಲಾಗುತ್ತದೆ ಎಂದರು.
ಶೆಟ್ಟರ್ ಆಯ್ತು ಮುಂದೆ ಯಾರು ಎನ್ನುವ ಕುರಿತು ಮಾತನಾಡಿದ ಅಶೋಕ್, ಎಲ್ಲ ರಾಮಮಯ, ಎಲ್ಲ ಮೋದಿಮಯ, ಕಾದು ನೋಡಿ, ಈಗಲೂ ಬರುತ್ತಾರೆ, ಸಂಸತ್ ಚುನಾವಣೆ ನಂತರ ನಾವು ಬಾಗಿಲು ಹಾಕಿದರೂ ಬಾಗಿಲು ಒಡೆದು ಬರಲಿದ್ದಾರೆ, ಹಿಂದೆ ಅವರ ಸರ್ಕಾರ ಇದ್ದಾಗಲೇ 15 ಶಾಸಕರು ಬಂದರು. ಆಗಲೂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಇದ್ದರಲ್ಲ ಏನು ಮಾಡಿದರು? ಈಗಲೂ ಅವರಿಂದ ತಡೆಯಲು ಸಾಧ್ಯವಾಗಲ್ಲ ಎಂದರು.
ಸರ್ಕಾರದ ಖಜಾನೆ ಖಾಲಿಯಾಗಿದೆ, ಪಾಪರ್ ಸರ್ಕಾರ ಇದು, ಲೊಪಕಸಭಾ ಚುನಾವಣೆವರೆಗೂ ಮಾತ್ರ ಗ್ಯಾರಂಟಿ ಸಿಗಲಿವೆ, ನಂತರ ಷರತ್ತುಗಳನ್ನ ಹಾಕಿ ಉಚಿತ ಯೋಜನೆಗಳ ಬಗ್ಗೆ ಜನರಿಗೆ ನಾಮ ಹಾಕಲಿದೆ. ಬಡವರ ಪರ ಎನ್ನುವುದು ತೋರಿಕೆ, ಅವರ ದೃಷ್ಟಿ ಲೋಕಸಭೆ ಚುನಾವಣೆ ಆಗಿದೆ ಇದು ಮೋಸದ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ನ ಹಿರಿಯ ಲಿಂಗಾಯತ ನಾಯಕ ಶಾಮನೂರು ಶಿವಶಂಕರಪ್ಪ ಬಿಜೆಪಿ ಗೆಲ್ಲಿಸಿ, ಮೋದಿ ಗೆಲ್ಲಿಸಿ ಎಂದಿದ್ದಾರೆ. ಇದರ ಅರ್ಥ ಏನು? ಮನೆಯೊಂದು ಮೂರು ಬಾಗಿಲು ಆಗಿದೆ, ಮುಂದೆ 12 ಬಾಗಿಲುಗಳಾಗಲಿದೆ. ಸೋರುತಿಹುದು ಮನೆಯ ಮಾಳಿಗೆ ಎನ್ನುವಂತಾಗಲಿದೆ ಎಂದು ಕಾಂಗ್ರೆಸ್ ನಾಯಕರ ಧೋರಣೆ ಕುರಿತು ವ್ಯಂಗ್ಯವಾಡಿದರು.
ಇದನ್ನೂ ಓದಿ: ಲೋಕಸಭೆಯಲ್ಲಿ ಗೆದ್ದು ರಾಜ್ಯ ವಿಧಾನಸಭೆಯಲ್ಲೂ ಕಮಲ ಅರಳಿಸಬೇಕು: ಭೂಪೇಂದ್ರ ಯಾದವ್