ETV Bharat / state

ಪ್ರತಿಪಕ್ಷದ ನಾಯಕರಿಗಿಲ್ಲ ಸರ್ಕಾರಿ ಬಂಗಲೆ ಭಾಗ್ಯ: ಖಾಸಗಿ ನಿವಾಸದಿಂದಲೇ ಕಾರ್ಯಭಾರ ಮಾಡುವ ಅನಿವಾರ್ಯತೆಯಲ್ಲಿ ಅಶೋಕ್! - R Ashok Letter for Govt Residence

ವಿಪಕ್ಷ ನಾಯಕನಿಗೆ ಕೊಡಬೇಕಾದ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡುವಂತೆ ಕೋರಿ ಆರ್​.ಅಶೋಕ್​ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.

ಆರ್​. ಅಶೋಕ್
ಆರ್​. ಅಶೋಕ್ (ETV Bharat)
author img

By ETV Bharat Karnataka Team

Published : Jun 11, 2024, 12:51 PM IST

ಬೆಂಗಳೂರು: ಅಧಿಕೃತ ವಿರೋಧ ಪಕ್ಷದ ನಾಯಕರಾಗಿರುವ ಆರ್.ಅಶೋಕ್ ಸಾಂವಿಧಾನಿಕ ಹುದ್ದೆ ಹೊಂದಿದ್ದರೂ ಅಧಿಕೃತ ನಿವಾಸಕ್ಕಾಗಿ ಪ್ರಯಾಸ ಪಡಬೇಕಾಗಿದೆ. ಆರು ತಿಂಗಳಿನಿಂದ ನಿವಾಸ ಹಂಚಿಕೆಗೆ ಪತ್ರ ವ್ಯವಹಾರ ನಡೆಸುತ್ತಿರುವ ಅಶೋಕ್​ ಅವರಿಗೆ ಇದುವರೆಗೂ ಸರ್ಕಾರಿ ನಿವಾಸ ಸಿಕ್ಕಿಲ್ಲ ಹಾಗಾಗಿ ಅಧಿಕೃತ ನಿವಾಸವಿಲ್ಲದೇ ಕಾರ್ಯ ನಿರ್ವಹಣೆ ಮಾಡಬೇಕಾಗಿದೆ.

ಮುಖ್ಯಮಂತ್ರಿಗೆ ಸರಿಸಮಾನವಾದ ಸಾಂವಿಧಾನಿಕ ಹುದ್ದೆ ವಿರೋಧ ಪಕ್ಷದ ನಾಯಕನ ಸ್ಥಾನವಾಗಿದೆ. ಯಾವುದೇ ಸರ್ಕಾರ ಬಂದರೂ ವಿರೋಧ ಪಕ್ಷದ ನಾಯಕರಿಗೆ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕುಮಾರಕೃಪಾ ಈಸ್ಟ್ ಬಂಗಲೆಯನ್ನು ಸಾಮಾನ್ಯವಾಗಿ ಪ್ರತಿಪಕ್ಷ ನಾಯಕರಿಗೆ ಹಂಚಿಕೆ ಮಾಡಿಕೊಂಡು ಬರಲಾಗುತ್ತಿದೆ. ಇದನ್ನು ಬಿಟ್ಟರೆ ರೇಸ್ ಕೋರ್ಸ್ ರಸ್ತೆಯ ರೇಸ್ ವ್ಯೂ ಕಾಟೇಜ್ ಹಂಚಿಕೆ ಮಾಡುವುದು ವಾಡಿಕೆ. ಆದರೆ ಈಗ ವಿರೋಧ ಪಕ್ಷದ ನಾಯಕರಾಗಿರುವ ಅಶೋಕ್​ಗೆ ಈವರೆಗೂ ಸರ್ಕಾರಿ ನಿವಾಸವನ್ನು ಹಂಚಿಕೆ ಮಾಡಿಲ್ಲ, ಹಾಗಾಗಿ ಖಾಸಗಿ ನಿವಾಸದಿಂದಲೇ ಅಶೋಕ್ ಸಾಂವಿಧಾನಿಕ ಹುದ್ದೆಯ ಜವಾಬ್ದಾರಿ ನಿರ್ವಹಣೆ ಮಾಡಬೇಕಾಗಿದೆ.

ನಿವಾಸಕ್ಕಾಗಿ ಪತ್ರ: ವಿರೋಧ ಪಕ್ಷದ ನಾಯಕರಾಗುತ್ತಿದ್ದಂತೆ ಸರ್ಕಾರಿ ನಿವಾಸ ಹಂಚಿಕೆ ಮಾಡುವಂತೆ 2023ರ ನವೆಂಬರ್​ನಲ್ಲಿ ಸರ್ಕಾರಕ್ಕೆ ಅಶೋಕ್ ಪತ್ರ ಬರೆದಿದ್ದರು. ಆದರೆ ನಿವಾಸ ಹಂಚಿಕೆ ಮಾಡುವ ಕೆಲಸ ಆಗಲೇ ಇಲ್ಲ, 2024ರ ಫೆಬ್ರವರಿಯಲ್ಲಿ ಮತ್ತೊಮ್ಮೆ ಸರ್ಕಾರಕ್ಕೆ ಪತ್ರ ಬರೆದ ಅಶೋಕ್ ಸರ್ಕಾರಿ ನಿವಾಸ ಹಂಚಿಕೆಗೆ ಮನವಿ ಮಾಡಿದರು. ಆದರೆ, ನಂತರ ಚುನಾವಣೆ ಎದುರಾದ ಹಿನ್ನೆಲೆಯಲ್ಲಿ ಎಲ್ಲರೂ ಆ ಕಡೆ ಮುಖ ಮಾಡಿದರು, ಈಗ ಚುನಾವಣೆ ಮುಗಿದು ತಿಂಗಳಾದರೂ ಸರ್ಕಾರಿ ನಿವಾಸ ಹಂಚಿಕೆಗೆ ಸರ್ಕಾರ ಮುಂದಾಗಿಲ್ಲ. ಹಾಗಾಗಿ ಮೂರನೇ ಬಾರಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪತ್ರ ಬರೆದು ಸರ್ಕಾರಿ ನಿವಾಸ ಹಂಚಿಕೆ ಮಾಡುವಂತೆ ಮನವಿ ಮಾಡಿದ್ದಾರೆ.

ವಿಪಕ್ಷ ನಾಯಕನ ಮನವಿಗೆ ಸರ್ಕಾರ ಡೋಂಟ್ ಕೇರ್ ಎನ್ನುವಂತೆ ವರ್ತಿಸುತ್ತಿದೆ. ಸರ್ಕಾರಿ ನಿವಾಸಕ್ಕೆ ಮನವಿ ಮಾಡಿದರೂ ಸ್ಪಂದನೆ ಮಾಡುತ್ತಿಲ್ಲ ಮೂರು ಬಾರಿ ಪತ್ರ ಬರೆದರೂ ಸರ್ಕಾರಿ ನಿವಾಸ ನೀಡದ ಸರ್ಕಾರ, ವಿರೋಧ ಪಕ್ಷದ ನಾಯಕರ ಪತ್ರಕ್ಕೆ ಮನ್ನಣೆ ನೀಡುತ್ತಿಲ್ಲ, ಯಾವುದಾದರು ಒಂದು ಸರ್ಕಾರಿ ನಿವಾಸ ನೀಡಿ ಎಂದು ಮುಖ್ಯ ಕಾರ್ಯದರ್ಶಿಗೆ ವಿಪಕ್ಷ‌ ನಾಯಕ ಆರ್. ಅಶೋಕ್ ಮನವಿ ಮಾಡಿದ್ದಾರೆ. ರೇಸ್ ಕೋರ್ಸ್ ರಸ್ತೆಯಲ್ಲಿರುವ ನಿವಾಸ ಅಥವಾ ಕುಮಾರಕೃಪಾ ನಿವಾಸಕ್ಕೆ ಅವರು ಮನವಿ ಮಾಡಿದ್ದಾರೆ.

ವಿಪಕ್ಷ ನಾಯಕನ ಮನವಿ: ನಂ.1 ಕುಮಾರಕೃಪಾ ಪೂರ್ವ ನಿವಾಸ, ನಂ.1 ರೇಸ್ ವ್ಯೂವ್ ಕಾಟೇಜ್, ನಂ.‌2 ರೇಸ್ ವ್ಯೂವ್ ಕಾಟೇಜ್ ಈ ಮೂರರಲ್ಲಿ ಒಂದು ನಿವಾಸಕ್ಕೆ ಅಶೋಕ್ ಮನವಿ ಸಲ್ಲಿಸಿದ್ದಾರೆ. ಆದರೆ ಕುಮಾರಕೃಪ ನಂಬರ್ 1 ನಿವಾಸ ಡಿಸಿಎಂ ಡಿಕೆ ಶಿವಕುಮಾರ್​ಗೆ ಕೊಡಲಾಗಿದೆ. ರೇಸ್ ವ್ಯೂವ್ ಕಾಟೇಜ್-1 ಸಚಿವ ಎಂ.ಬಿ. ಪಾಟೀಲ್ ಅವರಿಗೆ ನೀಡಲಾಗಿದೆ, ರೇಸ್ ವ್ಯೂವ್ ಕಾಟೇಜ್-2 ಸಚಿವ ಕೆ.ಜೆ. ಜಾರ್ಜ್ ಅವರಿಗೆ ನೀಡಲಾಗಿದೆ, ಈಗ ವಿಪಕ್ಷ ನಾಯಕ ಅಶೋಕ್ ಅವರು ಕೇಳಿರುವ ಈ ನಿವಾಸ ಖಾಲಿ ಇಲ್ಲ ಹೀಗಾಗಿ ಮುಖ್ಯ ಕಾರ್ಯದರ್ಶಿಗಳಿಗೂ ತಲೆ ನೋವಾಗಿದೆ.

ಸಚಿವರನ್ನ ಖಾಲಿ ಮಾಡಿಸಿ ಅಶೋಕ್​ಗೆ ನಿವಾಸ ಕೊಡಲು ಸಾಧ್ಯವಾಗುತ್ತಿಲ್ಲ, ಅಶೋಕ್ ಅವರಿಗೆ ಬೇರೆ ಯಾವುದೇ ನಿವಾಸದ ಮೇಲೆ ಆಸಕ್ತಿ ಇಲ್ಲ. ಜಯಮಹಲ್ ನಿವಾಸ ದೂರ ಎಂದು ನಿರಾಕರಿಸಿದ್ದಾರೆ. ಆದರೆ, ಸಿಎಂ ಸಮಾನ ಹುದ್ದೆಯಲ್ಲಿರುವ ಅಶೋಕ್​ಗೆ ಸರ್ಕಾರಿ ನಿವಾಸ ಕೊಡಲೇಬೇಕು. ಕೇಳಿದ ನಿವಾಸ ನೀಡುವುದು ಸರ್ಕಾರದ ಕರ್ತವ್ಯವಾಗಿದೆ. ನವೆಂಬರ್ ನಿಂದ ಮನವಿ ಮಾಡುತ್ತಲೇ ಇದ್ದಾರೆ. ಆದರೂ ಅಶೋಕ್ ಮನವಿಯತ್ತ ಸರ್ಕಾರ ಮಾತ್ರ ಗಮನ ಹರಿಸುತ್ತಿಲ್ಲ.

ಸಾಂವಿಧಾನಿಕ ಹದ್ದೆಯಾಗಿರುವ ವಿರೋಧ ಪಕ್ಷದ ನಾಯಕ ಸ್ಥಾನ ನಿರ್ವಹಣೆಗೆ ಪ್ರತ್ಯೇಕ ನಿವಾಸದ ಅಗತ್ಯವಿದೆ. ಶಾಸಕಾಂಗ ಪಕ್ಷದ ನಾಯಕ ಮತ್ತು ವಿರೋಧ ಪಕ್ಷದ ನಾಯಕರಾಗಿರುವವರಿಗೆ ಸಾಕಷ್ಟು ಜವಾಬ್ದಾರಿ ನಿರ್ವಹಣೆ ಮಾಡಬೇಕಿದ್ದು, ಅದಕ್ಕಾಗಿ ಸಿಬ್ಬಂದಿ ಬಳಸಿಕೊಳ್ಳಬೇಕಾಗಲಿದೆ. ಆದರೆ ಖಾಸಗಿ ನಿವಾಸದಲ್ಲಿ ಇದನ್ನೆಲ್ಲ ನಿರ್ವಹಿಸುವುದು ಕಷ್ಟ. ಇದಕ್ಕಾಗಿಯೇ ಸರ್ಕಾರಿ ನಿವಾಸ ಹಂಚಿಕೆ ಮಾಡಲಾಗುತ್ತದೆ. ಆದರೆ, ಸರ್ಕಾರಿ ನಿವಾಸ ಸಿಗದ ಕಾರಣದಿಂದ ಖಾಸಗಿ ನಿವಾಸದಿಂದಲೇ ಅಶೋಕ್ ವಿರೋಧ ಪಕ್ಷದ ನಾಯಕರ ಕೆಲಸ ಕಾರ್ಯಗಳನ್ನು ನಿರ್ವಹಣೆ ಮಾಡಬೇಕಾಗಿದೆ.

ಸಿಎಂಗೂ ವಿಳಂಬ: ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳೇ ಸರ್ಕಾರಿ ನಿವಾಸಕ್ಕೆ ಕಾದಿದ್ದ ಉದಾಹರಣೆ ಇವೆ, 2019ರಲ್ಲಿ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ರಚನೆಯಾಗಿತ್ತು. ಆಗ ಮುಖ್ಯಮಂತ್ರಿ ಆದ ಯಡಿಯೂರಪ್ಪ ಸರ್ಕಾರಿ ನಿವಾಸ ಕಾವೇರಿಗಾಗಿ ತಿಂಗಳುಗಟ್ಟಲೇ ಕಾದಿದ್ದರು. ಆ ನಿವಾಸದಲ್ಲಿ ಸಿದ್ದರಾಮಯ್ಯ ವಾಸ್ತವ್ಯವಿದ್ದ ಕಾರಣದಿಂದ ಅವರು ನಿವಾಸ ತೆರವು ಮಾಡುವವರೆಗೂ ಕಾದಿದ್ದರು. ಆಗ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯಗೆ ಕುಮಾರಕೃಪಾ ಈಸ್ಟ್ ನಿವಾಸ ಹಂಚಿಕೆ ಮಾಡಿದರೂ ಕಾವೇರಿ ಖಾಲಿ ಮಾಡಲು ಸಿದ್ದರಾಮಯ್ಯ ವಿಳಂಬ ಮಾಡಿದ್ದರು. ಹಾಗಾಗಿ ಯಡಿಯೂರಪ್ಪ ಸಾಕಷ್ಟು ಸಮಯ ಖಾಸಗಿ ನಿವಾಸದಿಂದಲೇ ಕೆಲಸ ಮಾಡಿದ್ದರು.

ಯಡಿಯೂರಪ್ಪ ರಾಜೀನಾಮೆ ನಂತರ ಅಧಿಕಾರಕ್ಕೆ ಬಂದ ಬಸವರಾಜ ಬೊಮ್ಮಾಯಿಗೂ ಸರ್ಕಾರಿ ನಿವಾಸ ಸಿಕ್ಕಿರಲಿಲ್ಲ. ಯಡಿಯೂರಪ್ಪ ಕಾವೇರಿ ನಿವಾಸ ಖಾಲಿ ಮಾಡದ ಕಾರಣದಿಂದ ಕೆಲ ಸಮಯ ಖಾಸಗಿ ನಿವಾಸದಿಂದಲೇ ಕೆಲಸ ಮಾಡಿದರು. ನಂತರ ರೇಸ್ ವ್ಯೂ ಕಾಟೇಜ್ ಅನ್ನು ಪಡೆದುಕೊಂಡರು. ಈಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುತ್ತಿದ್ದಂತೆ ಯಡಿಯೂರಪ್ಪ ಕಾವೇರಿ ನಿವಾಸ ಖಾಲಿ ಮಾಡಿದರು. ಹಾಗಾಗಿ ಅಧಿಕಾರಕ್ಕೆ ಬರುತ್ತಿದ್ದಂತೆ ವಿಳಂಬವಿಲ್ಲದೇ ಕಾವೇರಿ ನಿವಾಸ ಸಿದ್ದರಾಮಯ್ಯಗೆ ಸಿಕ್ಕಿತು.

ವಿಪಕ್ಷ ನಾಯಕನ ಆಯ್ಕೆ ವಿಳಂಬ: ವಿರೋಧ ಪಕ್ಷದ ನಾಯಕರ ಆಯ್ಕೆಗೆ ಬಿಜೆಪಿ ವಿಳಂಬ ಮಾಡಿತು. ಅಷ್ಟರಲ್ಲಿ ಸರ್ಕಾರಿ ನಿವಾಸಗಳನ್ನು ಸಚಿವರಿಗೆ ಹಂಚಿಕೆ ಮಾಡಲಾಗಿದೆ. ಈಗ ತಡವಾಗಿ ವಿರೋಧ ಪಕ್ಷದ ನಾಯಕರ ಆಯ್ಕೆಯಾದ ಹಿನ್ನಲೆಯಲ್ಲಿ ಅವರಿಗೆ ಬೇಕಾದ ನಿವಾಸ ಸಿಗುತ್ತಿಲ್ಲ. ಖಾಲಿ ಇರುವ ನಿವಾಸವನ್ನು ಅಶೋಕ್ ಒಪ್ಪುತ್ತಿಲ್ಲ. ಹೀಗಾಗಿ ಸರ್ಕಾರಿ ನಿವಾಸವಿಲ್ಲದೇ ಅಶೋಕ್ ಕಾರ್ಯಭಾರ ನಡೆಸಬೇಕಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಅಶೋಕ್, ಸರ್ಕಾರಕ್ಕೆ ಪತ್ರ ಬರೆದಿರುವುದನ್ನು ಖಚಿತಪಡಿಸಿದ್ದಾರೆ. ಈ ಹಿಂದೆ ಎರಡು ಬಾರಿ ಪತ್ರ ಬರೆದಿರುವುದಕ್ಕೆ ಸರ್ಕಾರ ಸ್ಪಂದಿಸಿಲ್ಲ ಹಾಗಾಗಿ ಮತ್ತೊಮ್ಮೆ ಸರ್ಕಾರಿ ನಿವಾಸ ಹಂಚಿಕೆಗೆ ಪತ್ರ ಬರೆದಿದ್ದಾರೆ. ವಿರೋಧ ಪಕ್ಷದ ಕಾರ್ಯ ನಿರ್ವಹಣೆಗೆ ಅಧಿಕೃತ ನಿವಾಸ ಇಲ್ಲದಿರುವುದು ಸಮಸ್ಯೆಯಾಗಿದೆ. ಹಾಗಾಗಿಯೇ ಸರ್ಕಾರದ ಗಮನಕ್ಕೆ ಮತ್ತೊಮ್ಮೆ ಈ ವಿಷಯ ತಂದಿದ್ದೇನೆ ಎಂದು ತಿಳಿಸಿದ್ದಾರೆ.

ಒಟ್ಟಿನಲ್ಲಿ ಪ್ರತಿಪಕ್ಷ ನಾಯಕರು ಕೇಳಿದ ನಿವಾಸವನ್ನೇ ಮಂಜೂರು ಮಾಡಬೇಕಿದೆ ಅದರಲ್ಲಿಯೂ ಕುಮಾರಕೃಪಾ ಈಸ್ಟ್, ರೇಸ್ ವ್ಯೂ ಕಾಟೇಜ್ ಸಾಮಾನ್ಯವಾಗಿ ವಿರೋಧ ಪಕ್ಷದ ನಾಯಕರಿಗೆ ನೀಡಲಾಗುತ್ತದೆ. ಆದರೆ ಈ ನಿವಾಸಗಳು ಖಾಲಿ ಇಲ್ಲ ಎನ್ನುವ ಕಾರಣಕ್ಕೆ ಅಶೋಕ್​ಗೆ ಅಧಿಕೃತ ನಿವಾಸವಿಲ್ಲದಂತಾಗಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ ಸೋಲಿನ ಪರಾಮರ್ಶೆಗೆ ಮುಂದಾದ ರಾಜ್ಯ ಕಾಂಗ್ರೆಸ್; ಸೋಲಿನ ವರದಿ ನೀಡಲು ಸಜ್ಜಾದ ಕೈ ನಾಯಕರು! - Congress Review of Defeat

ETV Bharat Logo

Copyright © 2024 Ushodaya Enterprises Pvt. Ltd., All Rights Reserved.