ETV Bharat / state

ಸಿದ್ದರಾಮಯ್ಯ ಸರ್ಕಾರ ಅಧಿಕಾರ ಬಿಟ್ಟು ಇಳಿದರೆ, 24 ಗಂಟೆಯಲ್ಲಿ ನಾವು ಪ್ರಜ್ವಲ್ ವಶಕ್ಕೆ ಪಡೆಯುತ್ತೇವೆ: ಆರ್​ ಅಶೋಕ್ ಚಾಲೆಂಜ್​ - HASSAN PEN DRIVE CASE

''ಸಂಸದ ಪ್ರಜ್ವಲ್​ ರೇವಣ್ಣ ವಿದೇಶಕ್ಕೆ ಹೋಗಿರುವುದಲ್ಲಿ ಗುಪ್ತಚರ ಇಲಾಖೆ ವೈಫಲ್ಯ ಕಂಡುಬರುತ್ತಿದೆ'' ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪ ಮಾಡಿದ್ದಾರೆ.

r-ashok-challenges-siddaramaiah-government-in-hassan-pen-drive-case
ಸಿದ್ದರಾಮಯ್ಯ ಸರ್ಕಾರ ಅಧಿಕಾರ ಬಿಟ್ಟು ಇಳಿದರೆ, 24 ಗಂಟೆಯಲ್ಲಿ ನಾವು ಪ್ರಜ್ವಲ್ ವಶಕ್ಕೆ ಪಡೆಯುತ್ತೇವೆ: ಅಶೋಕ್ ಚಾಲೆಂಜ್​
author img

By ETV Bharat Karnataka Team

Published : May 1, 2024, 1:48 PM IST

ಬೆಂಗಳೂರು: ''ಪ್ರಜ್ವಲ್ ರೇವಣ್ಣ ನಮ್ಮ ಸಂಸದ ಅಲ್ಲ, ಕಾಂಗ್ರೆಸ್ ಬೆಂಬಲಿತ ಸಂಸದ, ಈಗ ನಮ್ಮ ಅಭ್ಯರ್ಥಿ ಮಾತ್ರ. ಅವರು ಗೆದ್ದರೆ ಪಕ್ಷದ ನಿಲುವಿನಂತೆ ಕಠಿಣ ಕ್ರಮ ಖಚಿತ. ವಿದೇಶಕ್ಕೆ ಹೋಗಲು ಬಿಟ್ಟಿದ್ದೀರಿ ಎನ್ನುವ ಸಿದ್ದರಾಮಯ್ಯ ಸರ್ಕಾರ ಅಧಿಕಾರ ಬಿಟ್ಟು ಇಳಿದರೆ, ಕೇವಲ 24 ಗಂಟೆಯಲ್ಲಿ ಪ್ರಜ್ವಲ್ ರೇವಣ್ಣರನ್ನು ನಾವು ವಶಕ್ಕೆ ಪಡೆಯುತ್ತೇವೆ'' ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಸವಾಲು ಹಾಕಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ''ಪ್ರಜ್ವಲ್ ವಿಚಾರ ಅಮಿತ್ ಶಾ ಅವರಿಗೆ ಮೊದಲೇ ಗೊತ್ತಿತ್ತು ಎನ್ನುವ ಡಿ.ಕೆ. ಶಿವಕುಮಾರ್ ಮಾತನ್ನು ಗಂಭೀರವಾಗಿ ಪರಿಗಣಿಸಬೇಡಿ. ಅವರು ಹೇಳುವುದೆಲ್ಲಾ ಸುಳ್ಳು. ರಾಮೇಶ್ವರಂ ಕೆಫೆ ಸ್ಫೋಟಕ್ಕೆ ವೈಯಕ್ತಿಕ ಗಲಾಟೆ ಕಾರಣ ಎಂದರು. ಆದರೆ ಏನಾಯಿತು? ಮಂಗಳೂರು ಕುಕ್ಕರ್ ಬಾಂಬ್ ಇನೋಸೆಂಟ್ ಎಂದರು. ಅಲ್ಲಿ ಏನಾಯಿತು? ಡಿ.ಕೆ. ಶಿವಕುಮಾರ್ ಹೇಳಿಕೆಯಲ್ಲಿ ಸತ್ಯಾಂಶ ಇರಲ್ಲ. ಅಮಿತ್ ಶಾ ಬಗ್ಗೆ ಮಾತನಾಡುವ ನೈತಿಕತೆ ಇವರಿಗೆ ಇಲ್ಲ. ಡಿ.ಕೆ. ಶಿವಕುಮಾರ್ ಹೇಳಿಕೆಗೆ ಬೆಲೆ ಕೊಡಬೇಕಿಲ್ಲ'' ಎಂದರು.

ಪ್ರಜ್ವಲ್ ನಿಮ್ಮ ಸಂಸದ: ''ಪ್ರಜ್ವಲ್​ಗೆ ಟಿಕೆಟ್ ಕೊಡಬೇಡಿ ಎಂದು ಅಮಿತ್ ಶಾ ಕುಮಾರಸ್ವಾಮಿಗೆ ಹೇಳಿದ್ದಾರೆ ಎನ್ನುವುದು ಡಿ.ಕೆ. ಶಿವಕುಮಾರ್​ಗೆ ಹೇಗೆ ಗೊತ್ತು? ನಮ್ಮ ಪಕ್ಷದ ನಾಯಕರು ನಡೆಸಿದ ಮಾತುಕತೆ ವಿವರ ಅವರಿಗೆ ಗೊತ್ತಾಗಬೇಕು ಎಂದರೆ, ಇವರು ಅಮಿತ್ ಶಾ ಫೋನ್ ಟ್ಯಾಪ್ ಮಾಡಿದ್ದರಾ? ಹೇಗೆ ಗೊತ್ತಾಯ್ತು, ಜೆಡಿಎಸ್ ಪಾಲಿನ ಟಿಕೆಟ್ ಅವರು, ನಮ್ಮ ಪಾಲಿನ ಟಿಕೆಟ್ ನಾವು ನಿರ್ಧರಿಸಿದ್ದೇವೆ ಅಷ್ಟೇ. ಅಷ್ಟಕ್ಕೂ ಪ್ರಜ್ವಲ್ ನಿಮ್ಮ ಸಂಸದ, ನಮ್ಮ ಸಂಸದ ಅಲ್ಲ. ನಮ್ಮ ಸಂಸದ ಆಗಲು ತಿಂಗಳ ಸಮಯ ಇದೆ, ಕಳೆದ ಚುನಾವಣೆಯಲ್ಲಿ ಜೋಡೆತ್ತು ಅಂತಾ ಹೋಗಿದ್ದಿರಲ್ಲ, ಪ್ರಜ್ವಲ್ ಪರ ಪ್ರಚಾರ ಮಾಡಿದ್ದು ಯಾರು? ಗೆಲ್ಲಿಸಿದ್ದು ಯಾರು? ಅವರು ಈಗ ನಿಮ್ಮ ಸಂಸದ, ಲೀಗಲಿ ಅವರ ಸಂಸದ, ಈಗ ಚುನಾವಣೆಯಲ್ಲಿ ಗೆದ್ದರೆ ನಂತರ ಏನು ಕ್ರಮ ಎಂದು ಕೇಳಿದರೆ ನಾವು ಹೇಳುತ್ತೇವೆ'' ಎಂದು ಹೇಳಿದರು.

ಗುಪ್ತಚರ ಇಲಾಖೆ ವೈಫಲ್ಯ: ''ದೇಶ ಬಿಟ್ಟು ಹೋಗಲು ಬಿಜೆಪಿಯವರು ಹೇಗೆ ಬಿಟ್ಟರು ಎನ್ನುತ್ತೀರಲ್ಲ, ಹಾಸನದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಲು ಹೇಗೆ ಬಿಟ್ಟಿರಿ. ಅಲ್ಲಿ ನಿಮ್ಮದೇ ಪೊಲೀಸ್ ಅಲ್ಲವೇ ಇದ್ದಿದ್ದು, ಸಿದ್ದರಾಮಣ್ಣ ಹೇಳಿ, ರಾಜ್ಯ ಸರ್ಕಾರದ ಪೊಲೀಸರು ಏನು ಮಾಡುತ್ತಿದ್ದರು? ಅವರು ವಿಮಾನ ನಿಲ್ದಾಣಕ್ಕೆ ಬಂದಿದ್ದು ಹೇಗೆ ಎಂದು ಹೇಳಿ. ನಂತರ ನಾವು ಹೇಳುತ್ತೇವೆ. ಅವರು ಹೊರಹೋಗಲು ಬಿಟ್ಟುಕೊಟ್ಟವರು ನೀವು. ಅದು ನಿಮ್ಮದೇ ಹೊಂದಾಣಿಕೆ, ದಾರಿಯುದ್ದಕ್ಕೂ ಅವರನ್ನು ಬಿಟ್ಟಿದ್ದು ನೀವು. ಹಾಸನದಿಂದ ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ನಂತರ ಮತ್ತೆ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ಪ್ರಯಾಣಿಸಿ ವಿಮಾನ ನಿಲ್ದಾಣಕ್ಕೆ ಹೋಗಿದ್ದಾರೆ. ಇದರಲ್ಲಿ ಗುಪ್ತಚರ ಇಲಾಖೆ ವಿಫಲವಾಗಿದೆ'' ಎಂದು ಆರೋಪಿಸಿದರು.

24 ಗಂಟೆಯಲ್ಲಿ ವಶಕ್ಕೆ ಪಡೆಯುತ್ತೇವೆ: ''ಡಿಸಿಎಂ ಡಿ.ಕೆ.ಶಿವಕುಮಾರ್ ಬೆನ್ನುಮೂಳೆ ಇಲ್ಲದ ನಾಯಕ ಅಶೋಕ್ ಎನ್ನುತ್ತಾರೆ. ಬೆನ್ನು ಮೂಳೆ ಇದ್ದವರು ಯಾಕೆ ಹಾಸನದಿಂದ ಹೊರಹೋಗಲು ಬಿಟ್ಟಿದ್ದೀರಿ, ಸಿದ್ದರಾಮಯ್ಯ ಅವರೇ ಅಧಿಕಾರ ಬಿಟ್ಟು ಇಳಿಯಿರಿ. 24 ಗಂಟೆಯಲ್ಲಿ ನಾವು ವಶಕ್ಕೆ ಪಡೆಯುತ್ತೇವೆ, ಹಾಸನದಲ್ಲಿ ಮತ ಹಾಕಿ ಮತಗಟ್ಟೆಯಿಂದ ಹೋಗಲು ನೀವು ಬಿಟ್ಟು ಮೋದಿ ಏನು ಮಾಡುತ್ತಿದ್ದೀರಿ ಎನ್ನುವ ನೀವು ಕಡಲೆಕಾಯಿ ತಿಂತಾ ಇದ್ರಾ? ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವುದು ಯಾರ ಜವಾಬ್ದಾರಿ? ನಮ್ಮದಲ್ಲ ಎಂದು ನೀವು ಹೇಳಿ, ಪೊಲೀಸ್ ಇಲಾಖೆ ನಮ್ಮ ಕೈಯಲ್ಲಿಲ್ಲ ಎನ್ನಿ. ನಾಳೆಯೇ ನಾವು ದೆಹಲಿಗೆ ಹೋಗುತ್ತೇವೆ, ವ್ಯವಸ್ಥೆ ಮಾಡುತ್ತೇವೆ'' ಎಂದು ಸವಾಲೆಸೆದರು.

ಪ್ರಜ್ವಲ್ ಚಲನವಲನಗಳ ಮೇಲೆ ಕಣ್ಗಾವಲಿಡಲಿ, ಕೇಸ್ ಆಗುವ ಮೊದಲು ಕ್ರಮ ಹೇಗೆ ಎನ್ನುವವರು, ಮೋದಿಯನ್ನು ಯಾಕೆ ಪ್ರಶ್ನೆ ಮಾಡುತ್ತಿದ್ದೀರಿ. ನಿಮ್ಮ ವೈಫಲ್ಯ, ಕಾನೂನು ಸುವ್ಯವಸ್ಥೆ ಹಾಳಾಗಿರುವುದು. ಸರ್ಕಾರ ಪಾಪರ್ ಆಗಿರುವದನ್ನು ಮುಚ್ಚಿಡಲು ಈ ರೀತಿ ಹೇಳಿಕೆ ನೀಡಿದ್ದಾರೆ'' ಎಂದು ಅಶೋಕ್​​ ಆರೋಪಿಸಿದರು.

''ಪ್ರಜ್ವಲ್ ಕೇಸ್ ಎಸ್ಐಟಿಗೆ ಕೊಟ್ಟ ನಂತರ ಪೊಲೀಸರಿಗೆ ಪೂರ್ಣ ಸ್ವಾತಂತ್ರ್ಯ ಇದೆ. ಯಾವಾಗ ವಶಕ್ಕೆ ಪಡೆಯಬೇಕು ಎನ್ನುವುದು ಅವರಿಗೆ ಬಿಟ್ಟಿದ್ದು. ಎಷ್ಟು ನೋಟಿಸ್ ಕೊಡಬೇಕೋ ಕೊಟ್ಟು ಕಾನೂನು ರೀತಿ ಕ್ರಮ ವಹಿಸಬೇಕು. ರೇವಣ್ಣ, ಪ್ರಜ್ವಲ್ ಇಬ್ಬರಿಗೆ ನೋಟಿಸ್ ಕೊಟ್ಟರೂ ಬಂದಿಲ್ಲವೆಂದರೆ ಅವರು ಕಾನೂನು ರೀತಿಯಲ್ಲಿ ಕ್ರಮ ಜರುಗಿಸಬೇಕು'' ಎಂದು ಅಶೋಕ್ ಆಗ್ರಹಿಸಿದರು.

ಇದನ್ನೂ ಓದಿ: ವಿದೇಶದಲ್ಲಿರುವ ಪ್ರಜ್ವಲ್ ರೇವಣ್ಣನನ್ನು ಕರೆತರಲು ಎಸ್ಐಟಿ ಪ್ರಯತ್ನ ಮಾಡುತ್ತಿದೆ- ಡಾ.ಜಿ. ಪರಮೇಶ್ವರ್ - HASSAN PEN DRIVE CASE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.