ETV Bharat / state

155 ವರ್ಷಗಳ ಇತಿಹಾಸದ ಪುತ್ತೂರು ನೆಲ್ಲಿಕಟ್ಟೆ ಶಾಲೆಗೆ ಬೇಕಿದೆ ಅಗತ್ಯ ಮೂಲಭೂತ ಸೌಕರ್ಯ - Puttur Nellikatte School - PUTTUR NELLIKATTE SCHOOL

155 ವರ್ಷಗಳಷ್ಟು ಇತಿಹಾಸ ಹೊಂದಿರುವ ಪುತ್ತೂರು ನಗರದ ಅತೀ ಪ್ರಾಚೀನ ನೆಲ್ಲಿಕಟ್ಟೆ ಶಾಲೆ ಅಗತ್ಯ ಮೂಲಭೂತ ಸೌಕರ್ಯಗಳಿಗಾಗಿ ಹಾತೊರೆಯುತ್ತಿದೆ.

ಪುತ್ತೂರು ನೆಲ್ಲಿಕಟ್ಟೆ ಪ್ರಾಚೀನ  ಶಾಲೆ
ಪುತ್ತೂರು ನೆಲ್ಲಿಕಟ್ಟೆಯ ಪ್ರಾಚೀನ ಶಾಲೆ (ETV Bharat)
author img

By ETV Bharat Karnataka Team

Published : May 24, 2024, 11:28 AM IST

ನೆಲ್ಲಿಕಟ್ಟೆ ಶಾಲೆಯ ಹಳೆ ವಿದ್ಯಾರ್ಥಿಯ ಹೇಳಿಕೆ (ETV Bharat)

ಪುತ್ತೂರು: ನಗರದಲ್ಲಿ ಒಂದೂವರೆ ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಶಾಲೆಯೊಂದು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದ್ದು, ಸಮಗ್ರ ಅಭಿವೃದ್ಧಿಗಾಗಿ ಕಾಯುತ್ತಿದೆ. ಬಸ್ ನಿಲ್ದಾಣದ ಸಮೀಪದಲ್ಲಿರುವ ನೆಲ್ಲಿಕಟ್ಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಪುತ್ತೂರಿನ ಪ್ರಾಚೀನ ಶಾಲೆಗಳ ಪೈಕಿ ಮೊದಲ ಶಾಲೆಯಾಗಿದೆ.

ಸುಮಾರು 3.5 ಎಕರೆ ಜಾಗದ ಒಂದು ಬದಿಯಲ್ಲಿ ಈ ಶಾಲೆಯಿದ್ದು, ನೆಲ್ಲಿಕಟ್ಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯೆಂದೇ ಪ್ರಸಿದ್ಧಿ ಪಡೆದಿದೆ. ಒಂದು ಕಾಲದಲ್ಲಿ ವಿದ್ಯಾರ್ಜನೆಗೆ ಹೆಸರುವಾಸಿಯಾಗಿತ್ತು. ಅದೆಷ್ಟೋ ವಿದ್ಯಾರ್ಥಿಗಳು ಇಲ್ಲಿ ವಿದ್ಯಾರ್ಜನೆ ಮಾಡಿದ್ದಾರೆ. ಈಗಲೂ ಈ ಶಾಲೆ ಹಳೆಯ ಕಟ್ಟಡದಲ್ಲೇ ಕಾರ್ಯಾಚರಿಸುತ್ತಿದ್ದು, ಪ್ರಮುಖ ಮೂಲಭೂತ ಸೌಕರ್ಯಗಳು ಇಲ್ಲಿಲ್ಲ. 1869ರಲ್ಲಿ ಸ್ಥಾಪನೆಯಾದ ಈ ಶಾಲೆ ಈಗಲೂ ಹಂಚಿನ ಛಾವಣಿ ಹೊಂದಿದೆ. ಗ್ರಾಮೀಣ ಭಾಗದ ಶಾಲೆಯಂತಿರುವ ಈ ಶಾಲೆ ಆರಂಭದಿಂದ ಹೇಗಿದೆಯೋ ಈಗಲೂ ಅದೇ ರೀತಿಯಲ್ಲಿದೆ. ಅಲ್ಪ ಸ್ವಲ್ಪ ಅಭಿವೃದ್ಧಿ ಕಂಡಿದ್ದು ಬಿಟ್ಟರೆ ಉಳಿದಂತೆ ಏನೂ ಬದಲಾಗಿಲ್ಲ.

1 ಕೊಠಡಿ 2 ಭಾಗ, 85 ವಿಧ್ಯಾರ್ಥಿಗಳಿಗೆ ಪಾಠ: ಮೂಲಭೂತ ಸೌಕರ್ಯಗಳಾದ ನೂತನ ಕಟ್ಟಡಸಹಿತ ಕೊಠಡಿಗಳ ಸಂಖ್ಯೆ ಹೆಚ್ಚಿಸಬೇಕು ಎಂಬುದು ಪ್ರಮುಖ ಬೇಡಿಕೆಗಳಲ್ಲಿ ಒಂದು. ಒಂದು ಕಾಲದಲ್ಲಿ ಇಲ್ಲಿ ಪ್ರತೀ ತರಗತಿಗೆ ಎರಡೆರಡು ಕೊಠಡಿಗಳಿದ್ದವು. ಪ್ರಸ್ತುತ 1ರಿಂದ 7ನೇ ತರಗತಿ ಕಾರ್ಯಾಚರಿಸುತ್ತಿದ್ದು, ಕೇವಲ ಮೂರು ಕೊಠಡಿಗಳಲ್ಲಿ ಮಾತ್ರ ಪಾಠ ನಡೆಯುತ್ತಿದೆ. ಅಂದರೆ ಒಂದು ಕೊಠಡಿಯನ್ನು ಎರಡು ವಿಭಾಗಗಳಾಗಿ ಮಾಡಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಪ್ರಸ್ತುತ 85 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮುಖ್ಯ ಶಿಕ್ಷಕರು ಸೇರಿ ಇಬ್ಬರು ಶಿಕ್ಷಕರಿದ್ದಾರೆ.

ರಾತ್ರಿ ವೇಳೆ ಅಕ್ರಮ ಚಟುವಟಿಕೆ: ಈಗ ಶಾಲೆಯಲ್ಲಿ ನಾಲ್ಕು ಶೌಚಾಲಯಗಳಿದ್ದು, ಕೇವಲ ಒಂದು ಶೌಚಾಲಯ ಮಾತ್ರ ಬಳಕೆಯಾಗುತ್ತಿದೆ. ಉಳಿದ ಮೂರಕ್ಕೆ ಬೀಗ ಜಡಿಯಲಾಗಿದೆ. ಶಾಲಾ ಗೇಟಿನ ಅವಸ್ಥೆ ನೋಡಿದರೆ ಗೇಟು ಹಾಕಿದರೂ ತಳಭಾಗದಿಂದ ಒಳಬರಬಹುದು. ನೀರಿನ ಪೈಪ್‌ಗಳನ್ನು ಕಿಡಿಗೇಡಿಗಳು ಆಗಾಗ ತುಂಡರಿಸುತ್ತಿರುವುದು ಒಂದೆಡೆಯಾದರೆ, ಕಂಪೌಂಡ್ ಇಲ್ಲದೆ ರಾತ್ರಿ ಹೊತ್ತು ಕಿಡಿಗೇಡಿಗಳು ಅನ್ಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಎಷ್ಟೋ ಉದಾಹರಣೆಗಳಿವೆ.

ಶಿಥಿಲಾವಸ್ಥೆಗೆ ತಲುಪಿದ  ಪುತ್ತೂರು ನೆಲ್ಲಿಕಟ್ಟೆ ಶಾಲೆ
ಶಿಥಿಲಾವಸ್ಥೆ ತಲುಪಿದ ಪುತ್ತೂರು ನೆಲ್ಲಿಕಟ್ಟೆ ಹಿರಿಯ ಸರ್ಕಾರಿ ಪ್ರಾಥಮಿಕ ಶಾಲೆ (ETV Bharat)

ಈಗಂತೂ ಸರಕಾರಿ ಶಾಲೆಗಳಲ್ಲಿ ಇರುವಷ್ಟು ಗುಣಮಟ್ಟದ ಶಿಕ್ಷಣ ಖಾಸಗಿ ಶಾಲೆಗಳಲ್ಲಿಲ್ಲ. ಆದರೆ ನಗರದ ಪ್ರಮುಖ ಭಾಗದಲ್ಲಿರುವ ನೆಲ್ಲಿಕಟ್ಟೆ ಶಾಲೆ ಈಗಲೂ ಗ್ರಾಮೀಣ ಪ್ರದೇಶದ ಶಾಲೆಯಂತಿದೆ. ಪರಿಣಾಮ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಶಾಸಕರ ಮುತುವರ್ಜಿಯಲ್ಲಿ ಶಾಲೆಗೆ ನೂತನ ಕಟ್ಟಡ ನಿರ್ಮಾಣವಾಗಬೇಕಾಗಿದೆ. ಈಗಾಗಲೇ ನೂತನ ಕಟ್ಟಡ ಒದಗಿಸುವಂತೆ ಶಾಸಕರಿಗೆ ಮನವಿ ಮಾಡಲಾಗಿದೆ. ನೂತನ ಕಟ್ಟಡದ ಜೊತೆಗೆ ಕೊಠಡಿಗಳ ಸಂಖ್ಯೆ ಹೆಚ್ಚಿಸಿ, ಶಾಲೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿದ್ದಲ್ಲಿ ಮಕ್ಕಳ ಸಂಖ್ಯೆಯೂ ಹೆಚ್ಚಬಹುದು.

ಇದನ್ನೂ ಓದಿ: ದಶಕಗಳಿಂದಲೂ ಮುಗಿಯದ ಹೆದ್ದಾರಿ ಕಾಮಗಾರಿ, ಕೆಲವೆಡೆ ಕೆಲಸ ಸ್ಥಗಿತ: ಉ.ಕ ಜಿಲ್ಲಾಧಿಕಾರಿ ಹೇಳುವುದೇನು? - NH 66 Widening Work

ETV Bharat Logo

Copyright © 2025 Ushodaya Enterprises Pvt. Ltd., All Rights Reserved.