ETV Bharat / state

ಪುನೀತ್ ಪುಣ್ಯಸ್ಮರಣೆ: ಅಭಿಮಾನಿಗಳಿಂದ 10 ಕ್ವಿಂಟಲ್ ಚಿಕನ್ ಬಿರಿಯಾನಿ ವಿತರಣೆ - CHICKEN BIRYANI DISTRIBUTION

ಹುಬ್ಬಳ್ಳಿಯಲ್ಲಿ ಅಭಿಮಾನಿಗಳು ಪುನೀತ್​ ರಾಜ್​​​ಕುಮಾರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

Puneeth Rajkumar Death Anniversary
ಹುಬ್ಬಳ್ಳಿಯಲ್ಲಿ ಪುನೀತ್ ರಾಜ್​ಕುಮಾರ್​​ ಪುಣ್ಯಸ್ಮರಣೆ (ETV Bharat)
author img

By ETV Bharat Entertainment Team

Published : Oct 29, 2024, 4:08 PM IST

ಹುಬ್ಬಳ್ಳಿ(ಧಾರವಾಡ): 1975ರ ಮಾರ್ಚ್​​ 17ರಂದು ಚೆನ್ನೈನಲ್ಲಿ ಜನಿಸಿದ ಪುನೀತ್​ ರಾಜ್​​​ಕುಮಾರ್​​​ 2021ರ ಅಕ್ಟೋಬರ್​​ 29ರಂದು ಹಠಾತ್​​ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು. ಅಭಿಮಾನಿಗಳ ನೆಚ್ಚಿನ ನಟ ಇಹಲೋಕ ತ್ಯಜಿಸಿ ಇಂದಿಗೆ ಮೂರು ವರ್ಷ. ಆದ್ರೆ ಅವರ ಸವಿನೆನಪು ಇಂದಿಗೂ ಜೀವಂತವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ರಾಜ್ಯದ ವಿವಿಧೆಡೆ ವಿವಿಧ ರೀತಿಯಲ್ಲಿ ಅಭಿಮಾನಿಗಳಿಂದ ಅಪ್ಪು ಸ್ಮರಣೆ ನಡೆಯುತ್ತಿದೆ. ಅದರಂತೆ, ಹುಬ್ಬಳ್ಳಿ ನಗರದಲ್ಲಿ ಅಭಿಮಾನಿಗಳು 10 ಕ್ವಿಂಟಲ್ ಚಿಕನ್ ಬಿರಿಯಾನಿ ವಿತರಿಸಿದರು.

ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಖ್ಯಾತಿಯ ಪುನೀತ್ ರಾಜ್‍ಕುಮಾರ್ ಅವರ ಮೂರನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ, ಹುಬ್ಬಳ್ಳಿಯಲ್ಲಿ ಅಭಿಮಾನಿಗಳು ಪುನೀತ್ ರಾಜ್‌ಕುಮಾರ್ ಅವರಿಗೆ ಇಷ್ಟವಾದ ಬಿರಿಯಾನಿ ಹಂಚಿದರು. ಚನ್ನಮ್ಮ ಸರ್ಕಲ್ ಬಳಿ ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ವತಿಯಿಂದ ರಘು ವದ್ದಿ‌ ನೇತೃತ್ವದಲ್ಲಿ ಅಪ್ಪು ಭಾವಚಿತ್ರದೆದುರು ಮಟನ್ ಕೀಮಾ, ಮಟನ್ ಮಸಾಲಾ, ಚಿಕನ್ ಬಿರಿಯಾನಿ ಇಟ್ಟರು.

ಇದನ್ನೂ ಓದಿ: ಪುನೀತ್​​​ ಸಮಾಧಿಗೆ ರಾಜ್​ ಕುಟುಂಬದಿಂದ ಪೂಜೆ ಸಲ್ಲಿಕೆ: 'ಪರಮಾತ್ಮ'ನಿಗೆ ನಮನ

ಬಳಿಕ 10 ಕ್ವಿಂಟಲ್ ಚಿಕನ್ ಬಿರಿಯಾನಿಯನ್ನು ಸಾರ್ವಜನಿಕರಿಗೆ ಹಂಚಿದರು. ರಾಜರತ್ನನ ಅಗಲಿಕೆಯನ್ನು ನೆನೆದು ಅಭಿಮಾನಿಗಳು ಕಣ್ಣೀರಾದರು. ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಹಾಗೂ ಸಂಕಲ್ಪ ಶೆಟ್ಟರ್ ಭಾಗಿಯಾಗಿ ಬಿರಿಯಾನಿ ವಿತರಿಸಿದರು.

ಇದನ್ನೂ ಓದಿ: 'ಅಪ್ಪು ಸವಿನೆನಪಿನಲ್ಲಿ 3 ವರ್ಷಗಳು': ಅಶ್ವಿನಿ ಪುನೀತ್​​ ರಾಜ್​ಕುಮಾರ್​​​

ಮತ್ತೊಂದೆಡೆ, ಚನ್ನಮ್ಮ ಸರ್ಕಲ್​​​ನಲ್ಲಿ ಉತ್ತರ ಕರ್ನಾಟಕ ಆಟೋ ಚಾಲಕರು ಹಾಗೂ ಮಾಲೀಕರ ಸಂಘದಿಂದ ಪುನೀತ್​ ಸ್ಮರಣೆ ನಡೆಯಿತು. ಅಪ್ಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಅಗಲಿದ ನಟನ ಗುಣಗಾನ ಮಾಡಿದ ನೂರಾರು ಆಟೋ ಚಾಲಕರು ನಮನ ಸಲ್ಲಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.