ಬಳ್ಳಾರಿ: ವೈದ್ಯರ ನಿರ್ಲಕ್ಷ್ಯದಿಂದ ಹುಟ್ಟಿದ ಕೆಲವೇ ಹೊತ್ತಲ್ಲಿ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿದ ಪೋಷಕರು, ವಿಮ್ಸ್ ಆಸ್ಪತ್ರೆಯೆದುರು ಇಂದು ಪ್ರತಿಭಟನೆ ನಡೆಸಿದರು.
ಸಿರಗುಪ್ಪ ತಾಲೂಕಿನ ಸಿರಿಗೇರಿ ಗ್ರಾಮದ ಬಾಣಂತಿ ಗಂಗೋತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆಯ ಬಳಿಕ ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದರು. ನಂತರ ಮಗು ಸಾವನ್ನಪ್ಪಿದೆ ಎಂದು ಹೇಳಿದರು ಎಂದು ಪೋಷಕರು ಆರೋಪಿಸಿದ್ದಾರೆ.
ಪೋಷಕರು ಹೇಳುವುದೇನು?: ಮೊದಲು ನಾರ್ಮಲ್ ಹೆರಿಗೆ ಎಂದಿದ್ರು. ಕೊನೆಯ ಕ್ಷಣದಲ್ಲಿ ಸಿಜೇರಿಯನ್ ಹೆರಿಗೆ ಮಾಡಲಾಗಿದೆ. ಸಿಜೇರಿಯನ್ ಬಳಿಕ ಮಗು ಸಾವಾಗಿದೆ. ವೈದ್ಯರ ನಿರ್ಲಕ್ಷ್ಯದಿಂದಲೇ ಘಟನೆ ನಡೆದಿದೆ ಎಂಬುದು ಪೋಷಕರ ಆಕ್ರೋಶ.
ವೈದ್ಯರ ಸ್ಪಷ್ಟನೆ: ಗರ್ಭದಲ್ಲಿ ಮಲ ತಿಂದು ಶ್ವಾಸಕೋಶದ ತೊಂದರೆಯಿಂದ ಮಗು ಸಾವನ್ನಪ್ಪಿದೆ. ನಾರ್ಮಲ್ ಹೆರಿಗೆಯಾಗಲಿ, ಸಿಜೇರಿಯನ್ ಮಾಡುವುದು ಬೇಡ ಎಂದು ಕುಟುಂಬಸ್ಥರು ತಡೆದಿದ್ದರು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ: ಲಸಿಕೆ ಓವರ್ ಡೋಸ್ನಿಂದ ಮಗು ಸಾವು ಆರೋಪ: ಕಿಮ್ಸ್ ವೈದ್ಯರ ಸ್ಪಷ್ಟನೆ