ETV Bharat / state

ನಾಳೆಯಿಂದ ಸಂಸದರ ಮನೆಗಳ ಮುಂದೆ ಪ್ರತಿಭಟನೆ: ಕುರುಬೂರು ಶಾಂತಕುಮಾರ್ - KURUBURU SHANTHAKUMAR

ನಾಳೆಯಿಂದ ಸಂಸದರ ಮನೆಗಳ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.

kuruburu-shanthakumar
ಕುರುಬೂರು ಶಾಂತಕುಮಾರ್ (ETV Bharat)
author img

By ETV Bharat Karnataka Team

Published : Dec 9, 2024, 10:55 PM IST

ಬೆಂಗಳೂರು: ದೆಹಲಿ ಚಲೋ ರೈತ ಹೋರಾಟ ತೀವ್ರಗೊಳ್ಳುತ್ತಿದೆ. ರಾಷ್ಟ್ರೀಯ ರೈತ ಮುಖಂಡ ಜಗಜೀತ್ ಸಿಂಗ್ ದಲೈವಲ ಅವರ ಉಪವಾಸ 14ನೇ ದಿನಕ್ಕೆ ಮುಂದುವರೆದಿದ್ದು, ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದೆ. ಇಂತಹ ಗಂಭೀರ ಸ್ಥಿತಿಯಲ್ಲಿಯೂ ಸಂಸತ್​ನಲ್ಲಿ ಚರ್ಚಿಸದೆ ನಿದ್ರೆ ಮಾಡುತ್ತಿರುವಂತೆ ನಾಟಕ ಮಾಡುತ್ತಿರುವ ಸಂಸದರುಗಳನ್ನು ಎಚ್ಚರಿಸಬೇಕಾಗಿರುವುದರಿಂದ ನಾಳೆಯಿಂದ ದಿನಕ್ಕೊಂದು ಜಿಲ್ಲೆಯಲ್ಲಿ ಸಂಸದರ ಕಚೇರಿ ಅಥವಾ ಮನೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ಫ್ರೀಡಂ ಪಾರ್ಕ್​ನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚಳುವಳಿ ತೀವ್ರಗೊಳಿಸಲು ಬೆಂಗಳೂರಿನ ಉಪವಾಸ ಸತ್ಯಾಗ್ರಹವನ್ನು ಕೈಬಿಡಬೇಕು ಎಂದು ತೀರ್ಮಾನಿಸಲಾಗಿದೆ. ನಾಲ್ಕನೇ ದಿನಕ್ಕೆ ಸರದಿ ಉಪವಾಸ ಸತ್ಯಾಗ್ರಹ ಸ್ಥಗಿತಗೊಳಿಸಿ ಹೋರಾಟದ ಸ್ವರೂಪ ಬದಲಾವಣೆ ಮಾಡಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ದೆಹಲಿ ರೈತ ಹೋರಾಟ ಬೆಂಬಲಿಸಲು ಕರ್ನಾಟಕದ ರೈತರ ತಂಡ ಕೂಡ ದೆಹಲಿಗೆ ಹೋಗಲಿದೆ ಎಂದರು.

ದೇಶದ ರೈತರ ಗಂಭೀರ ಸಮಸ್ಯೆಗಳ ಬಗ್ಗೆ ಪ್ರಸ್ತುತ ಸಂಸತ್ ಅಧಿವೇಶದಲ್ಲಿ ಚರ್ಚಿಸಬೇಕು. ರೈತರ ಬಗ್ಗೆ ನಿರ್ಲಕ್ಷ್ಯ ಮಾಡಬಾರದು. ಯಾವ ಸಂಸದರು ರೈತರ ಪರವಾಗಿ ಧ್ವನಿ ಎತ್ತುತ್ತಿಲ್ಲ. ಕೇಂದ್ರ ಸರ್ಕಾರ ಗಂಭೀರವಾಗಿ ಪ್ರತಿಕ್ರಿಯೆ ನೀಡದೆ ಮಾತುಕತೆಗೂ ಆಹ್ವಾನಿಸದೆ ನಿರ್ಲಕ್ಷತನ ತೋರುತ್ತಿದೆ ಎಂದಿದ್ದಾರೆ.

ಪಂಜಾಬ್ ಹರಿಯಾಣ ಭಾಗದಲ್ಲಿ ನಿರಂತರವಾಗಿ ಚಳುವಳಿ ನಡೆಸುತ್ತಿರುವ ರೈತರು ಎರಡು ದಿನಗಳ ಹಿಂದೆ ದೆಹಲಿಗೆ ಕಾಲ್ನಡಿಗೆ ಮೂಲಕ ಹೋಗಲು ಬರುತ್ತಿದ್ದಾಗ ಪೊಲೀಸರು ತಡೆದು ಅಶ್ರುವಾಯು ಸಿಡಿಸಿ, ಜಲ ಪಿರಂಗಿ ಪ್ರಯೋಗ ಮಾಡಿದ್ದಾರೆ. ಘಟನೆಯಲ್ಲಿ ಹಲವು ರೈತರು ಆಸ್ಪತ್ರೆ ಸೇರಿದ್ದಾರೆ. ಇಂತಹ ದಬ್ಬಾಳಿಕೆಯ ಪೊಲೀಸ್ ದೌರ್ಜನ್ಯವನ್ನು ಖಂಡಿಸುತ್ತೇವೆ ಎಂದು ನುಡಿದರು.

ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಪ್ತ ಕಾರ್ಯದರ್ಶಿ ಭಾನುಪ್ರಕಾಶ್ ಹಾಗೂ ಅರವಿಂದ್ ಅವರಿಗೆ ಮನವಿ ಸಲ್ಲಿಸಲಾಯಿತು. ಅವರುಗಳು ಲೋಕಸಭಾ ಸದಸ್ಯರು ವಿಮಾನ ಪ್ರಯಾಣ ಮಾಡುತ್ತಿದ್ದು, ದೆಹಲಿ ತಲುಪಿದ ನಂತರ ಮನವಿಯ ಬಗ್ಗೆ ತಿಳಿಸುತ್ತೇವೆ ಎಂದು ಭರವಸೆ ನೀಡಿದರು. ನಂತರ ಚಳುವಳಿಯನ್ನು ವಾಪಸ್ ಪಡೆಯಲಾಯಿತು.

ಇಂದಿನ ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಪರಶುರಾಮ್ ಎತ್ತಿನಗುಡ್ಡ, ಮಾಳಪ್ಪ ಹೊನ್ನಳ್ಳಿ, ನಾಗಪ್ಪ ಡೂನ್ನಿ, ಬರಡನಪುರ ನಾಗರಾಜ್, ಆತ್ತಹಳ್ಳಿ ದೇವರಾಜ್, ಕಿರಗಸೂರ್ ಶಂಕರ್, ನೀಲಕಂಠಪ್ಪ, ಮಂಜುನಾಥ್, ಸೋಮಶೇಖರ್, ಕೊಟ್ರೇಶ್, ಚೌದ್ರಿ ಇನ್ನಿತರರು ಇದ್ದರು.

ಇದನ್ನೂ ಓದಿ : ಬೆಳಗಾವಿ ಅಧಿವೇಶನದ ಮೊದಲ ದಿನ 11 ಸಂಘಟನೆಗಳಿಂದ ಪ್ರತಿಭಟನೆ: ಮನವಿ ಆಲಿಸಿದ ಸಚಿವ ಗುಂಡೂರಾವ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.