ETV Bharat / state

ಪ್ರತಾಪ್ ಸಿಂಹಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಅಭಿಮಾನಿಗಳಿಂದ ಪ್ರತಿಭಟನೆ - mp pratap simha

ಸಂಸದ ಪ್ರತಾಪ್​​ ಸಿಂಹಗೆ ಈ ಬಾರಿಯ ಲೋಕಸಭೆ ಚುನಾವಣೆಗೆ ಟಿಕೆಟ್​ ನೀಡಬೇಕೆಂದು ಅವರ ಅಭಿಮಾನಿಗಳು ಇಲವಾಲ ಫ್ಲೈ ಓವರ್​ ಬಳಿ ಬೃಹತ್​ ಪ್ರತಿಭಟನೆ ನಡೆಸಿದ್ದಾರೆ.

protest-by-fans-demanding-to-give-ticket-to-pratap-simha
ಪ್ರತಾಪ್ ಸಿಂಹಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಅಭಿಮಾನಿಗಳಿಂದ ಪ್ರತಿಭಟನೆ: ವಿಡಿಯೋ
author img

By ETV Bharat Karnataka Team

Published : Mar 13, 2024, 7:15 PM IST

ಪ್ರತಾಪ್ ಸಿಂಹಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಅಭಿಮಾನಿಗಳಿಂದ ಪ್ರತಿಭಟನೆ: ವಿಡಿಯೋ

ಮೈಸೂರು: ಎರಡು ಬಾರಿ ಸಂಸದರಾಗಿ ಮೈಸೂರು ಮತ್ತು ಕೊಡಗು ಜಿಲ್ಲೆಗೆ ಒಳ್ಳೆ ಕೆಲಸ ಮಾಡಿರುವ ಸಂಸದ ಪ್ರತಾಪ್​​ ಸಿಂಹಗೆ ಈ ಬಾರಿಯೂ ಟಿಕೆಟ್​ ನೀಡಬೇಕೆಂದು ಆಗ್ರಹಿಸಿ ಅವರ ಅಭಿಮಾನಿಗಳು ಮೈಸೂರು ನಗರದ ರಿಂಗ್​ ರಸ್ತೆಯ ಇಲವಾಲ ಫ್ಲೈ ಓವರ್​ ಬಳಿ ಬೃಹತ್​ ಪ್ರತಿಭಟನೆ ನಡೆಸಿದರು.

ಈ ಬಾರಿ ಸಂಸದ ಪ್ರತಾಪ್​​ ಸಿಂಹ ಟಿಕೆಟ್​​​ ಕೈ ತಪ್ಪಲಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಪ್ರತಾಪ್​​ ಸಿಂಹ ಅಭಿಮಾನಿಗಳು ಈ ಬಾರಿಯೂ ಇವರಿಗೆ ಟಿಕೆಟ್​​​ ನೀಡಬೇಕು, ಯಾವುದೇ ಕಾರಣಕ್ಕೂ ಬಿಜೆಪಿ ಹೈಕಮಾಂಡ್​ ಬೇರೆಯವರಿಗೆ ಟಿಕೆಟ್ ನೀಡಬಾರದು. ಕಳೆದ 10 ವರ್ಷಗಳಿಂದ ಮೈಸೂರು ಬೆಂಗಳೂರು ಹೈವೇ, ಮೈಸೂರು ವಿಮಾನ ನಿಲ್ದಾಣ, ಮೈಸೂರು ರೈಲ್ವೇ ನಿಲ್ದಾಣ ಅಭಿವೃದ್ಧಿ, ರಿಂಗ್ ರಸ್ತೆ ಸೇರಿದಂತೆ ಹಲವಾರು ಅಭಿವೃದ್ಧಿ ಕೆಲಸವನ್ನು ಸಂಸದ ಪ್ರತಾಪ್​ ಸಿಂಹ ಮಾಡಿದ್ದಾರೆ. ಇಂತಹ ವ್ಯಕ್ತಿಗೆ ಈ ಬಾರಿ ಟಿಕೆಟ್ ಸಿಗುವುದಿಲ್ಲ ಎಂಬ ವಿಚಾರ ಸರಿಯಿಲ್ಲ. ಕೂಡಲೇ ಬಿಜೆಪಿ ಹೈಕಮಾಂಡ್ ಪ್ರತಾಪ್​ ಸಿಂಹಗೆ ಟಿಕೆಟ್ ನೀಡಬೇಕು, ಇಲ್ಲದೆ ಇದ್ದರೆ ಪ್ರಬಲ ಸಮುದಾಯ ತನ್ನದೇ ನಿರ್ಣಯ ಕೈಗೊಳ್ಳಲಿದೆ ಎಂದು ಅಭಿಮಾನಿಗಳು ಎಚ್ಚರಿಕೆಯ ಸಂದೇಶ ರವಾನಿಸಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಕೆಲ ಕಾಲ ರಿಂಗ್​ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿಯಾದ ಪೊಲೀಸ್​​ ಬಂದೋಬಸ್ತ್​ ಏರ್ಪಡಿಸಲಾಗಿತ್ತು.

ಇದನ್ನೂ ಓದಿ: ನನಗೆ ಟಿಕೆಟ್​ ಸಿಗುವ ವಿಶ್ವಾಸ ಇದೆ, ಯದುವೀರ್​​ರಿಗೆ ಕೊಟ್ಟರೂ ಸ್ವಾಗತ: ಸಂಸದ ಪ್ರತಾಪ್​ ಸಿಂಹ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.