ETV Bharat / state

ವಿಪತ್ತು ನಿರ್ವಹಣೆಗೆ ವಿಶ್ವ ಬ್ಯಾಂಕ್, ರಾಜ್ಯ ಸರ್ಕಾರದ ಸಹಯೋಗದಲ್ಲಿ 3,500 ಕೋಟಿಯ ಹೊಸ ಯೋಜನೆ - Disaster Management Project - DISASTER MANAGEMENT PROJECT

ವಿಪತ್ತು ನಿರ್ವಹಣೆಗೆ ವಿಶ್ವ ಬ್ಯಾಂಕ್ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ನವೀನ ತಂತ್ರಜ್ಞಾನಗಳನ್ನು ಒಳಗೊಂಡ ಕೋಟ್ಯಂತರ ರೂ. ವೆಚ್ಚದ ಯೋಜನೆ ರೂಪಿಸಲಾಗುತ್ತಿದೆ.

rain
ಅತಿವೃಷ್ಟಿ ಹಾಗೂ ಬರ (ETV Bharat)
author img

By ETV Bharat Karnataka Team

Published : Jun 21, 2024, 8:55 AM IST

ಬೆಂಗಳೂರು: ಕರ್ನಾಟಕ ನೈಸರ್ಗಿಕ ವಿಕೋಪ ನಿರ್ವಹಣೆ ಹಾಗೂ ಉನ್ನತೀಕರಣಕ್ಕಾಗಿ ವಿಶ್ವಬ್ಯಾಂಕ್ 2,000 ಕೋಟಿ ರೂ. ಹೂಡಿಕೆ ಮಾಡಲಿದ್ದು, ರಾಜ್ಯ ಸರ್ಕಾರ 1,500 ಕೋಟಿ ರೂ. ಹೂಡಲಿದೆ. ವಿಪತ್ತು ನಿರ್ವಹಣೆಗೆ ವಿಶ್ವಬ್ಯಾಂಕ್ ಹೊಸ ತಂತ್ರಜ್ಞಾನಗಳನ್ನೊಳಗೊಂಡ ಹೊಸ ಯೋಜನೆಯೊಂದನ್ನು ರೂಪಿಸಿದ್ದು, 3,500 ಕೋಟಿ ರೂ.ಗಳ ಈ ಯೋಜನೆಯು 2025ರ ಮಾರ್ಚ್​​​ನಿಂದ ವಿಶ್ವಬ್ಯಾಂಕ್ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಪೂರ್ಣ ಪ್ರಮಾಣದಲ್ಲಿ ಚಾಲ್ತಿಗೆ ಬರಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಶ್ವಬ್ಯಾಂಕ್, ಬಿಬಿಎಂಪಿ ಹಾಗೂ ಬಿಡಬ್ಲ್ಯೂಎಸ್ಎಸ್​ಬಿ ಪ್ರತಿನಿಧಿಗಳ ಜೊತೆ ಗುರುವಾರ ವಿಕಾಸಸೌಧದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ವಿಶ್ವಬ್ಯಾಂಕ್ ಪ್ರತಿನಿಧಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಪತ್ತು ನಿರ್ವಹಣೆಗೆ ಸಂಬಂಧಿಸಿದಂತೆ ತಮ್ಮ ಯೋಜನೆಯ ನೀಲನಕ್ಷೆಯನ್ನು ಪ್ರಸ್ತುತಪಡಿಸಿದರು. ಇದೇ ವೇಳೆ, ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ರಾಜ್ಯ ಪ್ರತಿವರ್ಷ ಬರ ಅಥವಾ ನೆರೆ ಪರಿಸ್ಥಿತಿಯನ್ನು ಎದುರಿಸುವುದು ಸಾಮಾನ್ಯ ಸಂಗತಿ. ಇಂತಹ ರಾಷ್ಟ್ರೀಯ ವಿಪತ್ತುಗಳನ್ನು ನವೀನ ತಂತ್ರಜ್ಞಾನಗಳ ಮೂಲಕ ಎದುರಿಸುವುದು ಇಂದಿನ ತುರ್ತು ಅಗತ್ಯ. ಈ ನಿಟ್ಟಿನಲ್ಲಿ ಕಳೆದ ಮೇ ತಿಂಗಳಲ್ಲಿ ವಿಶ್ವಬ್ಯಾಂಕ್ ಭೂ ಸಮ್ಮೇಳನದಲ್ಲಿ ಸ್ವತಃ ತಾವು ಪಾಲ್ಗೊಂಡಿದ್ದು, ಇಂದು ಫಲ ನೀಡಿದೆ ಎಂದು ಅಭಿಪ್ರಾಯಪಟ್ಟರು.

ಮಾರ್ಚ್ 2025ರಿಂದ ಮುಂದಿನ ಏಳು ವರ್ಷಗಳ ಅವಧಿಗೆ ವಿಶ್ವಬ್ಯಾಂಕ್ ರಾಜ್ಯದಲ್ಲಿ ವಿಪತ್ತು ನಿರ್ವಹಣೆಗೆ 2,000 ಕೋಟಿ ರೂ. ಹೂಡಲಿದ್ದು, ಕರ್ನಾಟಕ ಸರ್ಕಾರವೂ 1,500 ಕೋಟಿ ರೂ. ಹೂಡಿಕೆ ಮಾಡಲಿದೆ. ಆದರೆ, ಬರ-ನೆರೆ ನಿರ್ವಹಣೆ ವಿಚಾರದಲ್ಲಿ ರಾಜ್ಯ ಸರ್ಕಾರ ಈಗಾಗಲೇ ಕೆಲಸ ಆರಂಭಿಸಿದೆ. ತನ್ನ ಪಾಲಿನ ಹಣವನ್ನು ವಿನಿಯೋಗಿಸಿ ನೀರಿನ ಸಂಸ್ಕರಣೆ ಹಾಗೂ ಕೆರೆಗಳ ಜಾಲ ನಿರ್ಮಾಣ ಕಾರ್ಯವನ್ನು ಆರಂಭಿಸಿದೆ ಎಂದರು.

meeting
ವಿಶ್ವಬ್ಯಾಂಕ್, ಬಿಬಿಎಂಪಿ ಹಾಗೂ ಬಿಡಬ್ಲ್ಯೂಎಸ್ಎಸ್​ಬಿ ಪ್ರತಿನಿಧಿಗಳ ಸಭೆ (ETV Bharat)

ವಿಶ್ವಬ್ಯಾಂಕ್ ಪ್ರತಿನಿಧಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ''ಬೆಂಗಳೂರಿನಲ್ಲಿ ಮಳೆಗಾಲದಲ್ಲಿ ಉಂಟಾಗಬಹುದಾದ ಪ್ರವಾಹ ಪರಿಸ್ಥಿತಿಯನ್ನು ನಿಯಂತ್ರಿಸುವ ಸಲುವಾಗಿ ಕಳೆದೊಂದು ವರ್ಷಗಳಿಂದ ಶ್ರಮವಹಿಸಿ ಕೆರೆಗಳ ಜಾಲವನ್ನು (Lake Network) ನಿರ್ಮಿಸಲಾಗಿದೆ. ನಗರದಾದ್ಯಂತ ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸಿದ್ದು, ಇದರ ಮೂಲಕ ಹೆಚ್ಚುವರಿ ನೀರನ್ನು ಕೆರೆಗೆ ಹರಿಸಲಾಗುತ್ತಿದೆ. ಒಂದು ಕೆರೆ ತುಂಬಿದ ಕೂಡಲೇ ಆ ನೀರನ್ನು ಮತ್ತೊಂದು ಕೆರೆಗೆ ಹರಿಸುವ ಆ ಮೂಲಕ ಪ್ರವಾಹ ಸ್ಥಿತಿಯನ್ನು ನಿರ್ವಹಣೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗಿದೆ'' ಎಂದು ಸಚಿವರು ವಿವರಿಸಿದರು.

ನೀರಿನ ಲೆಕ್ಕಪರಿಶೋಧನೆಗೆ ಸೂಚನೆ: ಕರ್ನಾಟಕದಲ್ಲಿ ಅಧ್ಯಯನದ ಭಾಗವಾಗಿ ಮೊದಲ ನೀರಿನ ಲೆಕ್ಕಪರಿಶೋಧನೆ ನಡೆಯಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಸಭೆಯಲ್ಲಿ ವಿಶ್ವಬ್ಯಾಂಕ್ ಪ್ರತಿನಿಧಿಗಳ ಎದುರು ಒತ್ತಾಯಿಸಿದರು. ರಾಜ್ಯದಲ್ಲಿ ಶೇ.20ರಷ್ಟು ನೀರು ಕುಡಿಯಲು ಬಳಕೆಯಾದರೆ, ಶೇ.80ರಷ್ಟು ನೀರು ಕೃಷಿ ಕೆಲಸಕ್ಕೆ ಸೀಮಿತವಾಗಿದೆ. ಈ ಪೈಕಿ ಹೆಚ್ಚು ನೀರನ್ನು ಭತ್ತ ಮತ್ತು ಕಬ್ಬು ಬೆಳೆಗೆ ಬಳಸಲಾಗುತ್ತದೆ. ಆದರೆ, ಯಾವ ರೈತ ಎಷ್ಟು ನೀರು ಬಳಸ್ತಾನೆ? ಯಾರಿಗೆ ನೀರಿಲ್ಲ? ಯಾವ ಭಾಗದಲ್ಲಿ ಹೆಚ್ಚು ನೀರಿನ ಸಮಸ್ಯೆ ಇದೆ? ರೈತರು ಬಳಸುವ ನೀರಿನ ಪೈಕಿ ಅಂತರ್ಜಲದ ಪ್ರಮಾಣ ಎಷ್ಟು? ಎಂಬ ಬಗ್ಗೆ ಈವರೆಗೆ ಯಾವುದೇ ಅಧ್ಯಯನ ನಡೆದಿಲ್ಲ ಎಂದು ವಿಷಾದಿಸಿದರು.

ಇಂತಹದ್ದೊಂದು ಅಧ್ಯಯನ, ಸಂಶೋಧನೆ ಸಾಧ್ಯವಾದರೆ ಮುಂದಿನ ದಿನಗಳಲ್ಲಿ ಅಂತಹ ಅಧ್ಯಯನವನ್ನು ಆಧರಿಸಿ ಕಾನೂನು ರಚಿಸಲು ಅಥವಾ ನೀತಿಗಳನ್ನು ರೂಪಿಸಲು ಸಹಾಯವಾಗುತ್ತದೆ. ಈ ನಿಟ್ಟಿನಲ್ಲಿ ವಿಶ್ವಬ್ಯಾಂಕ್ ನೇತೃತ್ವದ ಈ ಹೊಸ ಯೋಜನೆ ಅಡಿ ನೀರಿನ ಲೆಕ್ಕಪರಿಶೋಧನೆ (Water Audit) ನಡೆಯಬೇಕು ಎಂದು ಒತ್ತಾಯಿಸಿದರು.

ನೆರೆಗಿಂತಲೂ ಬರವೇ ಚಿಂತೆ: ರಾಜ್ಯದಲ್ಲಿ ನೆರೆ ಪರಿಸ್ಥಿತಿಗಿಂತಲೂ ಬರವೇ ದೊಡ್ಡ ಸಮಸ್ಯೆಯಾಗಿದೆ ಎಂದು ಇದೇ ವೇಳೆ ಸಚಿವ ಕೃಷ್ಣ ಬೈರೇಗೌಡ ಆತಂಕ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕಳೆದ ಕೆಲ ವರ್ಷಗಳಲ್ಲಿ ನೆರೆ ಪರಿಸ್ಥಿತಿಗಿಂತ ಬರವೇ ಹೆಚ್ಚಾಗಿದೆ. ಬರ ಪರಿಸ್ಥಿತಿಯನ್ನು ಎದುರಿಸುವುದು ಯಾವುದೇ ಸರ್ಕಾರಕ್ಕೆ ಸವಾಲಿನ ಕೆಲಸವಾಗಿದೆ. ಹೀಗಾಗಿ, ಅಂತಹ ಸ್ಥಿತಿಯನ್ನು ಪರಿಣಾಮಕಾರಿ ಎದುರಿಸುವ ಹಾಗೂ ದೀರ್ಘಕಾಲದ ಬರ ನಿರ್ವಹಣೆಗೆ ಶಾಶ್ವತ, ಸುಸ್ಥಿರ ಪರಿಹಾರ ಹುಡುಕುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಅಧ್ಯಯನವೂ ನಡೆಯಬೇಕು ಎಂದರು.

ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ವಿ.ರಶ್ಮಿ ಮಹೇಶ್, ವಿಶ್ವಬ್ಯಾಂಕ್ ಯೋಜನೆ ಮುಖ್ಯಸ್ಥ ಕ್ರಿಸ್ಟೋಫರ್ ವೆಲ್ಸಿನ್, ವಿಪತ್ತು ಅಪಾಯದ ಹಣಕಾಸು ತಜ್ಞ ವಿಜಯಶೇಖರ ಕಳವಕೊಂಡ, ನಗರಾಭಿವೃದ್ಧಿ ತಜ್ಞರಾದ ಪೂನಮ್ ಅಲುವಾಲಿಯಾ, ವಿಪತ್ತು ನಿರ್ವಹಣೆ ತಜ್ಞರಾದ ಅನೂಪ್ ಕಾರಂತ್ ಹಾಗೂ ಸಂಬಂಧಪಟ್ಟ ಬಿಬಿಎಂಪಿ-ಬಿಡಬ್ಲ್ಯೂಎಸ್ಎಸ್​ಬಿ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಬಸ್ ಪ್ರಯಾಣ ದರ ಏರಿಕೆ ಪ್ರಸ್ತಾವನೆ ಸದ್ಯ ಸರ್ಕಾರದ ಮುಂದಿಲ್ಲ: ಸಿಎಂ ಸಿದ್ದರಾಮಯ್ಯ - Bus Fare Hike Issue

ETV Bharat Logo

Copyright © 2024 Ushodaya Enterprises Pvt. Ltd., All Rights Reserved.