ETV Bharat / state

ಈ ಋತುವಿನ ಆಳಸಮುದ್ರ ಮೀನುಗಾರಿಕೆ ಇಂದಿಗೆ ಅಂತ್ಯ: ನಷ್ಟದಲ್ಲೇ ವೃತ್ತಿ ನಡೆಸಿದ ಕಡಲ ಮಕ್ಕಳು - Deep Sea Fishing

ಮೀನಿನ ಸಂತಾನೋತ್ಪತಿ ಹಾಗೂ ಸಮುದ್ರದ ಪ್ರಕ್ಷುಬ್ಧತೆಯ ಕಾರಣದಿಂದ ಜೂನ್​ 1ರಿಂದ ಜುಲೈ ಕೊನೆಯವರೆಗೆ ಆಳಸಮುದ್ರ ಮೀನುಗಾರಿಕೆ ನಡೆಸಲು ಮೀನುಗಾರಿಕಾ ಇಲಾಖೆ ನಿಷೇಧ ಹೇರಿದೆ.

ಆಳಸಮುದ್ರ ಮೀನುಗಾರಿಕೆ
ಆಳಸಮುದ್ರ ಮೀನುಗಾರಿಕೆ ನಿಷೇಧ (ETV Bharat)
author img

By ETV Bharat Karnataka Team

Published : May 31, 2024, 1:03 PM IST

ಬೋಟ್ ಮಾಲಕ ಮಾಹಿತಿ (ETV Bharat)

ಮಂಗಳೂರು: ಕರಾವಳಿ ಕರ್ನಾಟಕದ ಪ್ರಮುಖ ವಾಣಿಜ್ಯ ವಹಿವಾಟು ಮತ್ಸ್ಯೋದ್ಯಮ. ವರ್ಷಕ್ಕೆ ಸಾವಿರಾರು ಕೋಟಿ ವ್ಯವಹಾರ ನಡೆಯುವ ಮೀನುಗಾರಿಕೆ ದೇಶದ ಅರ್ಥವ್ಯವಸ್ಥೆಗೆ ದೊಡ್ಡ ಕೊಡುಗೆ ನೀಡಿದೆ. ಈ ಬಾರಿ ವ್ಯವಹಾರ ನಡೆಸುವ ಮತ್ಸೋದ್ಯಮಕ್ಕೆ ನಾಳೆಯಿಂದ (ಜೂನ್ 1)ರಿಂದ ಎರಡು ತಿಂಗಳ ರಜೆ. ಈ ಹಿನ್ನೆಲೆಯಲ್ಲಿ ಇಂದಿಗೆ ಆಳಸಮುದ್ರ ಮೀನುಗಾರಿಕೆ ಅಂತ್ಯವಾಗಲಿದೆ.

ಮೀನುಗಾರಿಕೆಯಲ್ಲಿ ಆಳಸಮುದ್ರ ಮೀನುಗಾರಿಕೆ (ಸಮುದ್ರ ತೀರದಿಂದ 24 ನಾಟೆಕಲ್​ ಮೈಲು ದೂರದ ಬಳಿಕ ತೆರಳಿ ನಡೆಸುವ ಮೀನುಗಾರಿಕೆ) ದೊಡ್ಡ ವ್ಯವಹಾರ ನಡೆಸುತ್ತದೆ. ಈ ಮೀನುಗಾರಿಕೆಯ ಋತು ಆಗಸ್ಟ್​ನಿಂದ ಮೇ ಅಂತ್ಯದವರೆಗೆ ಇರುತ್ತದೆ. ಪ್ರತೀ ವರ್ಷ ಜೂನ್ ಮತ್ತು ಜುಲೈ ತಿಂಗಳಲ್ಲಿ ಆಳಸಮುದ್ರ ಮೀನುಗಾರಿಕೆ ನಡೆಸಲು ನಿಷೇಧ ಇರುತ್ತದೆ. ಅದರಂತೆ ಮೇ 31ಕ್ಕೆ ಆಳಸಮುದ್ರ ಮೀನುಗಾರಿಕೆ ಅಂತ್ಯ ಆಗುತ್ತದೆ.

ನಿಷೇಧ ಯಾಕೆ?: ಆಳಸಮುದ್ರ ಮೀನುಗಾರಿಕೆಗೆ ಜೂನ್ 1 ರಿಂದ ಜುಲೈ ಅಂತ್ಯದವರೆಗೆ ನಿಷೇಧ ಇರುತ್ತದೆ. ಹಿಂದೆ ಮೀನುಗಾರರೆ ಸ್ವತಃ ಈ ಸಂದರ್ಭದಲ್ಲಿ ಮೀನುಗಾರಿಕೆಗೆ ತೆರಳುತ್ತಿರಲಿಲ್ಲ. ಆದರೆ ಇದೀಗ ಇದಕ್ಕೆ ಕಾನೂನು ಬಂದಿದೆ. ಈ ಸಂದರ್ಭದಲ್ಲಿ ಮೀನುಗಾರಿಕೆ ನಡೆಸಿದರೆ ಮೀನುಗಾರಿಕಾ ಇಲಾಖೆ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತದೆ.

ಮುಖ್ಯವಾಗಿ ಈ ಸಮಯದಲ್ಲಿ ಮೀನುಗಾರಿಕೆಗೆ ನಿಷೆಧ ಹೇರಲು 2 ಕಾರಣವಿದೆ.

1. ಸಂತಾನೋತ್ಪತಿಯ ಸಮಯ ಮತ್ತು ಸಮುದ್ರದ ಪ್ರಕ್ಷುಬ್ದತೆ ಕಾರಣ. ಮಳೆಗಾಲದ ಈ ಸಂದರ್ಭದಲ್ಲಿ ಮೀನುಗಳು ಮೊಟ್ಟೆಗಳನ್ನು ಇಡುವ ಸಮಯ. ಮೀನುಗಳ ಸಂತಾನೋತ್ಪತ್ತಿಯ ಈ ಸಮಯದಲ್ಲಿ ಮೀನುಗಾರಿಕೆ ನಡೆಸಿದರೆ ಮೀನುಗಳ ಸಂತತಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಮತ್ಸ್ಯ ಕ್ಷಾಮ ಕಾಣಿಸಿಕೊಳ್ಳುತ್ತದೆ.

2. ಇನ್ನೊಂದು ಸಮುದ್ರದ ಪ್ರಕ್ಷುಬ್ಧತೆ. ಮಳೆಗಾಲದ ಸಂದರ್ಭದಲ್ಲಿ ಸಮುದ್ರ ತೀವ್ರ ಪ್ರಕ್ಷುಬ್ಧತೆ ಹೊಂದಿರುತ್ತದೆ. ಈ ಸಮಯದಲ್ಲಿ ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಅಪಾಯವು ಎದುರಾಗುತ್ತದೆ. ಈ ಕಾರಣದಿಂದ ಆಳಸಮುದ್ರದ ಮೀನುಗಾರಿಕೆಗೆ ಈ ಸಂದರ್ಭದಲ್ಲಿ ನಿಷೇಧ ಇರುತ್ತದೆ. ಅದರಂತೆ ಕರಾವಳಿ ಕರ್ನಾಟಕದ ಮಂಗಳೂರು, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಮೀನುಗಾರರು ಇಂದು ಈ ಋತುವಿನ ಆಳಸಮುದ್ರ ಮೀನುಗಾರಿಕೆಗೆ ವಿದಾಯ ಹೇಳುತ್ತಾರೆ.

ಈ ಬಾರಿ ನಷ್ಟದಲ್ಲೇ ನಡೆದ ಮೀನುಗಾರಿಕೆ: ಆಳಸಮುದ್ರ ಮೀನುಗಾರಿಕೆಯಲ್ಲಿ ಈ ಋತುವಿನಲ್ಲಿ ಮೀನುಗಾರರು ಈ ಹಿಂದಿಗಿಂತಲೂ ಹೆಚ್ಚಿನ ನಷ್ಟವನ್ನು ಈ ಬಾರಿ ಅನುಭವಿಸಿದ್ದಾರೆ. ಮತ್ಸ್ಯ ಕ್ಷಾಮ ಮೀನುಗಾರರಿಗೆ ಭಾರಿ ನಷ್ಟವನ್ನು ತಂದೊಡ್ಡಿದೆ. ಮೀನುಗಾರಿಕೆ ನಡೆಸುವ ಋತುವಿನಲ್ಲಿ ನಷ್ಟದ ಭೀತಿಯಿಂದ ನೂರರು ಬೋಟ್​ಗಳು ಮೀನುಗಾರಿಕೆಗೆ ತೆರಳದೆ ಲಂಗರು ಹಾಕಿದ್ದವು.

ಈ ಬಗ್ಗೆ ಮಾತನಾಡಿದ ಬೋಟ್ ಮಾಲಕ, ಮೀನುಗಾರ ಮುಖಂಡ ರಾಜರತ್ನ ಸನಿಲ್, "ಈ ಋತುವಿನಲ್ಲಿ ಬಿಸಿಲಿನ ಹೊಡೆತದಿಂದ ಮೀನಿನ ಕ್ಷಾಮ ಕಾಣಿಸಿಕೊಂಡಿತು. ಹೇರಳವಾಗಿ ಸಿಗುತ್ತಿದ್ದ ಬೂತಾಯಿ, ತೇಡೆ ಮಿನುಗಳು ಅಪರೂಪವಾದವು. ಅಂಜಲ್, ಪಾಂಪ್ಲೆಟ್, ಮಾಂಜಿ ಮೊದಲಾದ ಮೀನುಗಳು ಸರಿಯಾಗಿ ಸಿಗಲಿಲ್ಲ. ಈ ಬಾರಿ ಬೋಟ್ ಮಾಲಕರು ಇದ್ದದ್ದನ್ನೂ ಕಳೆದುಕೊಳ್ಳುವ ಪರಿಸ್ಥಿತಿ ಬಂದಿದೆ. ನವೆಂಬರ್​ನಿಂದ ಈ ಸಮಸ್ಯೆ ಹೆಚ್ಚಾಗಿ ತಲೆದೋರಿದೆ. ಒಮ್ಮೆ ಆಳಸಮುದ್ರದ ಬೋಟ್ ಮೀನುಗಾರಿಕೆಗೆ ತೆರಳಲು 6 ಲಕ್ಷ ಖರ್ಚು ತಗುಲುತ್ತದೆ. ವಾಪಸ್ ಬರುವಾಗ 9 ಲಕ್ಷ ಬಂದರೆ ಬೋಟ್ ಮಾಲಕನಿಗೆ ಲಾಭ ಆಗಬಹುದು. ಆದರೆ ಇದೀಗ ಮೂರು ಲಕ್ಷದಷ್ಟು ಬರುತ್ತಿದೆ. ಇದರಿಂದ ಮೀನುಗಾರರು ನಷ್ಟ ಅನುಭವಿಸಿದ್ದಾರೆ. ಈ ಬಾರಿ ಮೀನುಗಾರಿಕೆಗೆ ದೊಡ್ಡ ಹೊಡೆತ ಬಿದ್ದಿದೆ" ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2023-24 ರಲ್ಲಿ 35,871 ಕೋಟಿ 30 ಲಕ್ಷ ರೂ. ಮೌಲ್ಯದ 1,89,924 ಟನ್ ಮೀನಿನ ವ್ಯವಹಾರ ನಡೆದಿದೆ. ಹಾಗೇ,​ ಉಡುಪಿ ಜಿಲ್ಲೆಯಲ್ಲಿ 2023-24ರಲ್ಲಿ 46,059 ಕೋಟಿ 60 ಲಕ್ಷ ರೂ. ಮೌಲ್ಯದ 3,33,785 ಟನ್ ಮೀನಿನ ವ್ಯವಹಾರ ನಡೆದಿದೆ.

ಇದನ್ನೂ ಓದಿ: ಕೇರಳಕ್ಕೆ ಮುಂಗಾರು ಎಂಟ್ರಿ, ಜೂನ್ 2ರಂದೇ ಕರ್ನಾಟಕ ಪ್ರವೇಶ: ಹವಾಮಾನ ಇಲಾಖೆ - Karnataka Monsoon Entry

ETV Bharat Logo

Copyright © 2024 Ushodaya Enterprises Pvt. Ltd., All Rights Reserved.