ETV Bharat / state

ಮಂಗಳೂರು-ಬೆಂಗಳೂರು ರೈಲು ಮಾರ್ಗದಲ್ಲಿ ಸಮಸ್ಯೆ: ಬೇಕಿದೆ ಶಾಶ್ವತ ಪರಿಹಾರ - Mangaluru Bengaluru Train - MANGALURU BENGALURU TRAIN

ಹಲವು ವರ್ಷಗಳಿಂದ ಮಳೆಗಾಲದಲ್ಲಿ ಈ ರೈಲ್ವೆ ಹಳಿಯಲ್ಲಿ ಸಮಸ್ಯೆ ಉಂಟಾಗುತ್ತಿದೆ. ಆದರೆ ರೈಲ್ವೆ ಇಲಾಖೆ ಇದಕ್ಕೆ ತಾತ್ಕಾಲಿಕವಾಗಿ ಪರಿಹಾರ ಮಾಡುತ್ತಿದೆಯೇ ವಿನಃ ಶಾಶ್ವತ ಪರಿಹಾರ ಮಾಡುವುದಿಲ್ಲ ಎಂದು ರೈಲ್ವೆ ಹೋರಾಟಗಾರು ಸಮಸ್ಯೆ ತೋಡಿಕೊಂಡಿದ್ದಾರೆ.

Train line
ರೈಲ್ವೇ ಹಳಿ (ETV Bharat)
author img

By ETV Bharat Karnataka Team

Published : Aug 5, 2024, 1:07 PM IST

ರೈಲ್ವೆ ಹೋರಾಟಗಾರ ಹನುಮಂತ ಕಾಮತ್ (ETV Bharat)

ಮಂಗಳೂರು: ಬಂದರು ನಗರಿ ಮಂಗಳೂರಿನಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಕಡಿಮೆ ವೆಚ್ಚದಲ್ಲಿ ಹಾಗೂ ಆರಾಮದಾಯಕವಾಗಿ ತಲುಪಲು ಇರುವ ಸಂಚಾರ ವ್ಯವಸ್ಥೆಯೆಂದರೆ ರೈಲು. ಆದರೆ ಪಶ್ಚಿಮಘಟ್ಟದ ಕಾಡಿನೊಳಗೆ ರೈಲ್ವೆ ಹಳಿ ಸಾಗುವುದರಿಂದ, ಪ್ರತೀ ಮಳೆಗಾಲದಲ್ಲೂ ಹಳಿ ಮೇಲೆ ಬಂಡೆ ಬೀಳುವುದು, ಗುಡ್ಡ ಕುಸಿತ ಸಾಮಾನ್ಯವಾಗಿದೆ. ಪರಿಣಾಮ ಕೆಲವು ದಿನಗಳವರೆಗೆ ರೈಲು ಓಡಾಟ ಸ್ಥಗಿತಗೊಂಡು, ಜನರು ಸಮಸ್ಯೆ ಎದುರಿಸುತ್ತಾರೆ. ಹಾಗಾಗಿ ಇದಕ್ಕೆ ಶಾಶ್ವತ ಪರಿಹಾರವನ್ನು ಒದಗಿಸಬೇಕು ಎನ್ನುವ ಕೂಗು ಕೇಳಿ ಬಂದಿದೆ.

ಮಂಗಳೂರಿನಿಂದ ಬೆಂಗಳೂರಿಗಿರುವ ಹಗಲು ರೈಲು, ಕಾರವಾರ ಮತ್ತು ಕಣ್ಣೂರಿನಿಂದ ಮಂಗಳೂರು ಮೂಲಕ ಬೆಂಗಳೂರು ತಲುಪುವ ರೈಲುಗಳು ಜನರಿಗೆ ಸಾಕಷ್ಟು ಅನುಕೂಲವನ್ನೊದಗಿಸಿವೆ. ಬಸ್​ನಲ್ಲಿ ಪ್ರಯಾಣಿಸುವುದಕ್ಕಿಂತ ಹೆಚ್ಚಿನವರು ಆರಾಮದಾಯಕ ಪ್ರಯಾಣಕ್ಕಾಗಿ ರೈಲುಗಳನ್ನೇ ಅವಲಂಬಿಸಿದ್ದಾರೆ. ಇದರಿಂದ ಮಂಗಳೂರು- ಬೆಂಗಳೂರು ನಡುವೆ ಸಂಪರ್ಕ ಕಲ್ಪಿಸಲು ಇರುವ ಕೆಲವೇ ರೈಲುಗಳು, ಮಳೆಗಾಲದಲ್ಲಿ ಮಾತ್ರ ದಿನಗಟ್ಟಲೆ ಸಂಚಾರ ನಿಲ್ಲಿಸುವಂತಾಗುತ್ತದೆ.

ಈ ಬಗ್ಗೆ ಮಾತನಾಡಿದ ಮಂಗಳೂರಿನ ರೈಲ್ವೆ ಹೋರಾಟಗಾರ ಹನುಮಂತ ಕಾಮತ್, "ಮಂಗಳೂರಿನಿಂದ ಬೆಂಗಳೂರಿಗೆ ಹೋಗುವ ಹೆಚ್ಚಿನ ಜನರು ರೈಲು ಪ್ರಯಾಣವನ್ನೇ ಅವಲಂಬಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯ ಮತ್ತು ಹಾಸನ ಜಿಲ್ಲೆಯ ಸಕಲೇಶಪುರದ ಮಧ್ಯೆ ಇರುವ ರೈಲ್ವೆ ಹಳಿಯಲ್ಲಿ ಹಲವು ವರ್ಷಗಳಿಂದ ಮಳೆಗಾಲದಲ್ಲಿ ಸಮಸ್ಯೆ ಉಂಟಾಗುತ್ತಿದೆ. ರೈಲ್ವೆ ಇಲಾಖೆ ಇದಕ್ಕೆ ತಾತ್ಕಲಿಕವಾಗಿ ಪರಿಹಾರ ಮಾಡುತ್ತಾರೆಯೇ ವಿನಃ ಶಾಶ್ವತ ಪರಿಹಾರ ಮಾಡುವುದಿಲ್ಲ." ಎಂದು ಹೇಳಿದರು.

"ಈ ರೈಲ್ವೆ ಮಾರ್ಗದಲ್ಲಿ ನೈಋತ್ಯ ವಲಯಕ್ಕೆ ಲಾಭವಿಲ್ಲ. ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ನಿಲ್ದಾಣಗಳು ಫಾಲ್ಗಾಟ್ ವಿಭಾಗಕ್ಕೆ ಸೇರಿದೆ. ಹಾಗಾಗಿ ನೈಋತ್ಯ ರೈಲ್ವೆ ವಿಭಾಗದವರು ಇದಕ್ಕೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಮಂಗಳೂರು-ಬೆಂಗಳೂರು ನಡುವೆ ಗೂಡ್ಸ್ ರೈಲು ಹೆಚ್ಚಾಗಿ ಪ್ರಯಾಣಿಸುತ್ತವೆ. ರೈಲ್ವೆ ಇಲಾಖೆಗೆ ಪ್ರಯಾಣಿಕರನ್ನು ಕೊಂಡೊಯ್ಯುವುದಕ್ಕಿಂತ ಗೂಡ್ಸ್ ಸಾಗಿಸುವುದರಲ್ಲಿ ಲಾಭ ಇದೆ. ಇದರಿಂದ ನಮಗೆ ರೈಲುಗಳು ಹೆಚ್ಚು ಸಿಗುತ್ತಾ ಇಲ್ಲ."

"ಪಶ್ಚಿಮಘಟ್ಟದಲ್ಲಿ ಗುಡ್ಡ ಕುಸಿದಾಗ ಮಂಗಳೂರು- ಬೆಂಗಳೂರು ರೈಲು ಸಂಪರ್ಕಕ್ಕೆ ಗೋವಾ ಅಥವಾ ಶೋರ್ನೂರು ಮೂಲಕ ಸಂಪರ್ಕಿಸಲು ಸಲಹೆ ನೀಡಲಾಗುತ್ತದೆ. ಇದು ಅರ್ಧ ಚಂದ್ರಾಕಾರ ಸುತ್ತಿ ಬೆಂಗಳೂರಿಗೆ ಹೋಗುವ ದಾರಿ. ಆದರೆ ಶಿವಮೊಗ್ಗ ಮೂಲಕ ಸಂಪರ್ಕಿಸುವ ಸಾಧ್ಯತೆಯ ಬಗ್ಗೆ ರೈಲ್ವೆ ಇಲಾಖೆ ಗಮನಹರಿಸಬೇಕಾಗಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಪಶ್ಚಿಮಘಟ್ಟದಲ್ಲಿ ಸುರಂಗ ಮಾರ್ಗ ಮಾಡುವ ಯೋಜನೆ ಹೊಂದಿದ್ದು, ಇದೇ ಮಾರ್ಗದಲ್ಲಿ ರೈಲು ಮಾರ್ಗವನ್ನೂ ಜೋಡಿಸುವ ಪ್ರಯತ್ನ ಆಗಬೇಕು. ಮಂಗಳೂರಿನವರಿಗೆ ತ್ರಿಶಂಕು ಸ್ವರ್ಗ, ನಮ್ಮದು ಫಾಲ್ಗಾಟ್, ನೈಋತ್ಯ, ಕೊಂಕಣ ರೈಲ್ವೆಯೊಂದಿಗೆ ಹಂಚಿಕೊಂಡಿರುವುದರಿಂದ ಅವರ ನಡುವೆ ಸಹಮತವಿಲ್ಲ. ಇದಕ್ಕೆ ಸಂಸದರು ಮಂಗಳೂರಿನ ಹೋರಾಟಗಾರರೊಂದಿಗೆ ಚರ್ಚಿಸಿ ಸಮಸ್ಯೆ ನಿವಾರಣೆಗೆ ವ್ಯವಸ್ಥೆ ಮಾಡಲು ಪ್ರಯತ್ನಿಸಬೇಕು" ಎನ್ನುತ್ತಾರೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಮಂಗಳೂರು-ಯಶವಂತಪುರ ರೈಲು ಸಂಚಾರದ ವೇಳಾಪಟ್ಟಿ ಬದಲು - Train Schedule Revised

ETV Bharat Logo

Copyright © 2025 Ushodaya Enterprises Pvt. Ltd., All Rights Reserved.