ETV Bharat / state

ಪಾಕ್ ಪರ ಘೋಷಣೆ ಖಂಡನೀಯ, ದೇಶ ಮೊದಲು ಆಮೇಲೆ ರಾಜಕೀಯ: ಸುಮಲತಾ

ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪ ಪ್ರಕರಣ ಕುರಿತು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯಿಸಿದರು.

mp sumalatha ambarish
ಸಂಸದೆ ಸುಮಲತಾ ಅಂಬರೀಶ್
author img

By ETV Bharat Karnataka Team

Published : Feb 29, 2024, 9:20 PM IST

ಮಂಡ್ಯ: ವಿಧಾನಸೌಧವನ್ನು ಪ್ರಜಾಪ್ರಭುತ್ವದ ದೇವಾಲಯ ಎನ್ನುತ್ತೇವೆ. ಅಂತಹ ಜಾಗದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದರೆ ಅದು ತಪ್ಪು ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದರು. ದೇಶ ಮೊದಲು, ರಾಜಕೀಯ ಆಮೇಲೆ. ನಮ್ಮ ದೇಶ ಮೊದಲು ಎನ್ನುವುದನ್ನು ಪ್ರತಿಯೊಬ್ಬರೂ ಅರಿತು ಪಾಲಿಸಬೇಕು. ಪಾಕ್ ಪರ ಘೋಷಣೆ ಕೂಗಿರುವ ಆರೋಪಿಯನ್ನು ಪತ್ತೆ ಹಚ್ಚಿ ತನಿಖೆಗೊಳಪಡಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಜಾತಿ ಗಣತಿ ವರದಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಒಂದಿಷ್ಟು ಗೊಂದಲಗಳಿವೆ. ಕೆಲವರು ನಾವು ಒಪ್ಪಲ್ಲ ಅಂತಿದ್ದಾರೆ, ವರದಿ ಬಂದ ಮೇಲೆ ನೋಡಬೇಕು. ಲೋಪದೋಷಗಳಿವೆಯೇ ಅನ್ನೋದು ಗೊತ್ತಾಗುತ್ತದೆ ಎಂದರು.

ಬೆಂಗಳೂರಿನಲ್ಲಿ ನಡೆಸಿರುವ ಸಭೆಯ ಕುರಿತು ಪ್ರತಿಕ್ರಿಯಿಸಿ, ನನ್ನ ನಿರ್ಧಾರದ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೇನೆ. ಇನ್ನು ಪಕ್ಷ ತೀರ್ಮಾನ ಮಾಡಬೇಕು. ಬೆಂಬಲಿಗರಿಗೆ ಧೈರ್ಯ ತುಂಬುವ ಕೆಲಸವಾಗಿದೆ. ಬಿಜೆಪಿಗೆ ಬನ್ನಿ ಅಂತ ಕರೆದಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿಗೆ ತೆರಳಿ ಸಭೆ ಮಾಡಿ ಮಾತನಾಡುವೆ. ಹಿಂದೆ ಸ್ವತಂತ್ರ ಅಭ್ಯರ್ಥಿಯಾಗಿದ್ದೆ. ಈಗಿನ ಪರಿಸ್ಥಿತಿ ಬೇರೆ. ನಿರ್ಮಲಾನಂದ ಸ್ವಾಮೀಜಿ ಅವರ ಆಶೀರ್ವಾದ ಪಡೆದು ಪ್ರಚಾರ ಕಾರ್ಯ ಆರಂಭಿಸುತ್ತೇನೆ ಎಂದು ಹೇಳಿದರು.

ಐದು ವರ್ಷ ಸ್ವತಂತ್ರ ಅಭ್ಯರ್ಥಿಯಾಗಿ ಸಂಸದರ ಕಾರ್ಯ ನಿರ್ವಹಿಸಿದ್ದೇನೆ. ಇನ್ನು ಮೇಲೆ ಪಕ್ಷದಿಂದ ನಿಲ್ಲಬೇಕಾಗುತ್ತದೆ. ಪಕ್ಷದಿಂದ ಬರುವ ಸೂಚನೆಯಂತೆ ಕೆಲಸ ಮಾಡಬೇಕು. ಹಾಗಾಗಿ ಈ ಬಾರಿ ಮಂಡ್ಯ ಎಲೆಕ್ಷನ್ ವಿಶೇಷವಾಗಿರುತ್ತದೆ ಎಂದು ತಿಳಿಸಿದರು.

ದ್ವೇಷ ರಾಜಕಾರಣ ಮಾಡಿಲ್ಲ: ನಾನು ಯಾವತ್ತು ದ್ವೇಷದಿಂದ ಯಾರನ್ನೂ ಟ್ರೀಟ್ ಮಾಡಿಲ್ಲ. ಯಾರನ್ನೂ ವೈಯಕ್ತಿಕವಾಗಿ ಟೀಕೆ, ಟಾರ್ಗೆಟ್ ಮಾಡಿಲ್ಲ. ನನ್ನ ದಾಖಲೆ ತೆಗೆದು ನೋಡಿ. ಮೊದಲಿಂದಲೂ ನಾನು ಸಾಫ್ಟ್ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂಓದಿ: ಸರ್ಕಾರಕ್ಕೆ ಜಾತಿಗಣತಿ ವರದಿ ಸಲ್ಲಿಕೆ: ಪರಿಶೀಲಿಸಿ ಸೂಕ್ತ ಕ್ರಮ- ಸಿಎಂ ಸಿದ್ದರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.