ETV Bharat / state

ಮೋದಿ ಗ್ಯಾರಂಟಿ ಟಿವಿಯಲ್ಲಿ, ನಮ್ಮ ಗ್ಯಾರಂಟಿ ಜನರ ಕೈಯಲ್ಲಿ: ಪ್ರಿಯಾಂಕ್ ಖರ್ಗೆ - Priyank Kharge - PRIYANK KHARGE

ಕಲಬುರಗಿಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿ ವಿರುದ್ಧ ವಾಕ್ಸಮರ ನಡೆಸಿದರು.

minister Priyank Kharge
ಸಚಿವ ಪ್ರಿಯಾಂಕ್ ಖರ್ಗೆ
author img

By ETV Bharat Karnataka Team

Published : Mar 28, 2024, 8:49 AM IST

ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

ಕಲಬುರಗಿ: ಕೇಂದ್ರದ ಬಿಜೆಪಿ ಸರ್ಕಾರ 10 ವರ್ಷಗಳ ಸಾಧನೆಗಳ ಮೇಲೆ ಲೋಕಸಭಾ ಚುನಾವಣೆ ಎದುರಿಸಲಿ. ಯಾರು ಎಷ್ಟು ಸಾಧನೆ ಮಾಡಿದ್ದಾರೆಂದು ಜನ ತೀರ್ಮಾನಿಸುತ್ತಾರೆ. ಅವರ ಬಳಿ ಯಾವುದೇ ಸಾಧನೆಗಳಿಲ್ಲ. ಹಾಗಾಗಿ ವೈಯಕ್ತಿಕ ಟೀಕೆ ಮಾಡುತ್ತಾರೆ. ಮೋದಿ ಗ್ಯಾರಂಟಿ ಕೇವಲ ಟಿವಿಯಲ್ಲಿದೆ. ಆದರೆ ನಮ್ಮ ಗ್ಯಾರಂಟಿ ಜನರ ಕೈಯಲ್ಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.

ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಸೋಲಿನ ಭೀತಿಯಿಂದ ಸ್ಪರ್ಧಿಸಲಿಲ್ಲ ಎಂಬ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅಶೋಕ್ ಅವರಿಗೆ ಸಾಮಾನ್ಯ ಜ್ಞಾನ ಇಲ್ಲ ಅನಿಸುತ್ತದೆ. ಮಲ್ಲಿಕಾರ್ಜುನ ಖರ್ಗೆ ಅವರು ಕಳೆದ 50 ವರ್ಷ ಎಲೆಕ್ಟೆಡ್ ಪಾಲಿಟಿಕ್ಸ್ ಮಾಡಿದವರು. ಅವರ ಶ್ರಮ, ಕೊಡುಗೆ ಅಪಾರ. ನಮ್ಮ ಪಕ್ಷ, ಮೈತ್ರಿ ಕೂಟವನ್ನು ಮುನ್ನಡೆಸುವ ದೊಡ್ಡ ಜವಾಬ್ದಾರಿ ಅವರ ಮೇಲಿದೆ. ಕಳೆದ ಬಾರಿಯೂ ಅವರಿಗೆ ಚುನಾವಣೆಯಲ್ಲಿ ಆಸಕ್ತಿ ಇರಲಿಲ್ಲ. ಅಂದು ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಒತ್ತಡಕ್ಕೆ ಮಣಿದು ಚುನಾವಣೆಗೆ ನಿಂತಿದ್ದರು ಎಂದು ತಿಳಿಸಿದರು.

ಬಿಜೆಪಿಯನ್ನು ಹೇಳಿ ಕೇಳಿ ಚುನಾವಣೆಗೆ ನಿಲ್ಲುವ ಅಗತ್ಯ ನಮಗಿಲ್ಲ. ಮೊದಲು ನಿಮ್ಮ ಪಕ್ಷದಲ್ಲಿ ಏನಾಗುತ್ತಿದೆ ಎಂಬುದರ ಕಡೆಗೆ ಗಮನ ಕೊಡಿ. ನಿಮ್ಮ ಪಕ್ಷ ಒಂದು ಕುಟುಂಬದ ಹಿಡಿತದಲ್ಲಿದೆ. ಶುದ್ಧೀಕರಣದ ಅಗತ್ಯವಿದೆ ಎಂದು ಈಶ್ವರಪ್ಪ, ಸದಾನಂದ ಗೌಡ ಹೇಳುತ್ತಿದ್ದಾರೆ. ಯತ್ನಾಳ್, ಸಿ.ಟಿ.ರವಿ, ಪ್ರತಾಪ್ ಸಿಂಹ ಅವರು ಹಿಂದುತ್ವದ ಪರ ಹೋರಾಟ ಮಾಡಿದವರಿಗೆ ನಮ್ಮ ಪಕ್ಷದಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ ಅಂತಿದ್ದಾರೆ. ಇವರೊಂದಿಗೆ ಮೈತ್ರಿ ಮಾಡಿಕೊಂಡು ಜೆಡಿಎಸ್​ನವರು ಕೂತಿದಾರೆ. ನಿಮ್ಮ ಸಂಸಾರದಲ್ಲಿ ಬಿರುಕು ಮೂಡಿದೆ. ಮೊದಲು ಆ ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ. ನಿಮ್ಮ ಸಂಸಾರ ಕಟ್ಟುವ ಕೆಲಸ ಮೊದಲು ಮಾಡಿ ಎಂದು ತಿರುಗೇಟು ‌ನೀಡಿದರು.

ಇದನ್ನೂ ಓದಿ: ಪಡಿತರ ವಿತರಣಾ ಕೇಂದ್ರ ತೆರೆಯಲು 52ನೇ ವಯಸ್ಸಲ್ಲಿ SSLC ಪರೀಕ್ಷೆ ಬರೆದ ದಾವಣಗೆರೆ ವ್ಯಕ್ತಿ - SSLC exam

ಬಿಜೆಪಿಯವರಿಗೆ ವೈಯಕ್ತಿಕ ಟೀಕೆ ಬಿಟ್ಟರೆ ಪ್ರಚಾರಕ್ಕೆ ಹೇಳಿಕೊಳ್ಳುವ ಸಾಧನೆಗಳಿಲ್ಲ. ಈಗಲೂ ಅವರು ದೇವರು, ಧರ್ಮದ ಮೇಲೆ ಚುನಾವಣೆ ಮಾಡುತ್ತಾರೆಯೇ ಹೊರತು ಸಾಧನೆಯ ಮೇಲೆ ಚುನಾವಣೆ ನಡೆಸಲ್ಲ ಎಂದು ಕುಟುಕಿದರು.

ಇದನ್ನೂ ಓದಿ: ಗುಡ್ ಫ್ರೈಡೆ ರಜೆ: ವಾಯುವ್ಯ ಕರ್ನಾಟಕ ಸಾರಿಗೆಯಿಂದ 120 ಹೆಚ್ಚುವರಿ ಬಸ್ ವ್ಯವಸ್ಥೆ - Additional Buses For Good Friday

ಬಿಜೆಪಿಯವರ ಮನೆಯಲ್ಲಿ ಬಂಡಾಯದ ಜ್ವಾಲೆ ಹೊತ್ತಿ ಉರಿಯುತ್ತಿದೆ. ಆದರೂ ಕಾಂಗ್ರೆಸ್ ಮನೆಯಲ್ಲಿ ಹುಳಿಹಿಂಡುವ ಕೆಲಸ ಮಾಡುತ್ತಿದ್ದಾರೆ ಎಂದು ಖರ್ಗೆ ಟೀಕಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.