ETV Bharat / state

ರಾತ್ರಿ ವೇಳೆ ಮೋದಿ ಕನಸು ಕಾಣುತ್ತಾರೆ, ಕನಸು ನನಸು ಮಾಡೋಕೆ ಬಿಜೆಪಿ ಸಚಿವರು ಹೊರಡುತ್ತಾರೆ: ಸಚಿವ ಪ್ರಿಯಾಂಕ್​ ಖರ್ಗೆ - ONE NATION ONE ELECTION

ಒನ್ ನೇಷನ್ ಒನ್ ಎಲೆಕ್ಷನ್ ಬಗ್ಗೆ ಸಚಿವ ಪ್ರಿಯಾಂಕ್​ ಖರ್ಗೆ, ಸಚಿವ ಸಂತೋಷ ಲಾಡ್​​ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

MINISTER PRIYANK KHARGE
ಸಚಿವ ಪ್ರಿಯಾಂಕ ಖರ್ಗೆ ಮಾಧ್ಯಮ ಪ್ರತಿಕ್ರಿಯೆ (ETV Bharat)
author img

By ETV Bharat Karnataka Team

Published : 2 hours ago

ಬೆಳಗಾವಿ: "ರಾತ್ರಿ ವೇಳೆ ಮೋದಿ ಕನಸು ಕಾಣುತ್ತಾರೆ. ಆ ಕನಸು ನನಸು ಮಾಡೋಕೆ ಬಿಜೆಪಿ ಸಚಿವರು ಹೊರಡುತ್ತಾರೆ" ಎಂದು ಸಚಿವ ಪ್ರಿಯಾಂಕ್​ ಖರ್ಗೆ ವಾಗ್ದಾಳಿ ನಡೆಸಿದರು.

ಸುವರ್ಣಸೌಧದಲ್ಲಿ ಮಾತನಾಡಿದ ಅವರು, "ಒನ್​​​ ನೇಷನ್​​​ ಒನ್​​​​ ಎಲೆಕ್ಷನ್​​​​ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ರಾಷ್ಟ್ರದ ಆರ್ಥಿಕತೆ ಕುಸಿಯುತ್ತಿದೆ. ಅದಾನಿ ಪ್ರಕರಣದ ಬಗ್ಗೆ ಮಾತಿಗೆ ತಯಾರಿಲ್ಲ. ಜನರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಲಾಗುತ್ತಿದೆ. ಒನ್​ ನೇಷನ್​ ಒನ್​ ಎಲೆಕ್ಷನ್​ಗೆ ತಯಾರಿ ಬೇಕು. ಸಂವಿಧಾನದಲ್ಲಿ ಕೆಲವು ಬದಲಾವಣೆ ತರಬೇಕು. ತಾಂತ್ರಿಕವಾಗಿ ಇದಕ್ಕೆ ಸಿದ್ಧರಿದ್ದಾರಾ?. ಇದೆಲ್ಲವೂ ಕೂಡ ಮಾಡಬೇಕು" ಎಂದರು.

ಸಚಿವ ಪ್ರಿಯಾಂಕ್​ ಖರ್ಗೆ ಮಾಧ್ಯಮ ಹೇಳಿಕೆ. (ETV Bharat)

"ದೇಶದ ಆರ್ಥಿಕ ಪರಿಸ್ಥಿತಿ ಕೊರತೆ ಮುಚ್ಚಿ ಹಾಕಲು ಅದಾನಿ ಹಗರಣ ಮುಚ್ಚಿಹಾಕಲು ಈ ಪ್ರಯತ್ನ ಮಾಡಲಾಗುತ್ತಿದೆ. ಈ ಸಂಬಂಧ ಪ್ರಾದೇಶಿಕ ಪಕ್ಷಗಳ ಜೊತೆ ಸಮಾಲೋಚನೆ ನಡೆಸಿದರಾ?. ಅದಾನಿ ಒಬ್ಬರನ್ನು ಉಳಿಸೋಕೆ ಇದನ್ನು ತಂದಿದ್ದಾರೆ ಎಂದು ಆರೋಪಿಸಿದರು.

ಸದನದಲ್ಲಿ ವಕ್ಫ್​ ವಿಚಾರದ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿ, "ಬಿಜೆಪಿಯವರಿಗೆ ಇನ್ನೇನು ಮಾಡಲಿದೆ. ಸಚಿವ ಜಮೀರ್ ಸ್ಪಷ್ಟವಾಗಿ ಯಾವ ರೈತರಿಗೂ ತೊಂದರೆಯಾಗಲ್ಲ. ಯಾವ ಮಠಾಧೀಶರಿಗೂ ತೊಂದರೆಯಾಗಲ್ಲ. ಇದನ್ನು ಸಚಿವ ಜಮೀರ್​​ ಸ್ಪಷ್ಟವಾಗಿ ಹೇಳಿದ್ದಾರೆ. ಇದಕ್ಕಿಂತ ಇನ್ನೇನು ಸ್ಪಷ್ಟನೆ ಬೇಕು. ಸುಪ್ರೀಂ ಕೋರ್ಟ್​ನಲ್ಲಿ ಯತಾಸ್ಥಿತಿ ಕಾಪಾಡುತ್ತೇವೆ ಅಂದಿದ್ಯಾರು?. ಅಲ್ಲಿ ಹಿಂಬರಹ ಕೊಟ್ಟವರು ಯಾರು?. ಬಿಜೆಪಿಯವರಲ್ಲೇ ಗೊಂದಲಗಳಿವೆ. ಬಸವಣ್ಣ ಹೆಸರೇಳಿ ರಾಜಕೀಯ‌ ಮಾಡುತ್ತಾರೆ. ಬಸವಣ್ಣ ಬಗ್ಗೆ ಯತ್ನಾಳ್‌ ಲೇವಡಿ ಮಾಡಿದರು. ಅದರ ಬಗ್ಗೆ ಬಿಜೆಪಿಯವರು ಏನು ಮಾಡಿದರು?. ಯತ್ನಾಳರ ಭಯವೋ, ಆರ್​ಎಸ್​ಎಸ್​ ಭಯವೋ ಗೊತ್ತಿಲ್ಲ. ಬಿಜೆಪಿಯಲ್ಲೇ ಎರಡಿದೆ. ಬಿಜೆಪಿ ಇದೆ ಎಜೆಪಿ ಇದೆ" ಎಂದು ಟೀಕಿಸಿದರು.

ಇದು ವಿಫಲವಾಗುತ್ತದೆ: ಒನ್​ ನೇಷನ್​ ಒನ್​ ಎಲೆಕ್ಷನ್ ಜಾರಿ ವಿಚಾರವಾಗಿ ಮಾತನಾಡಿದ ಸಚಿವ ಸಂತೋಷ ಲಾಡ್​​, "ಇದು ವಿಫಲ ಆಗುತ್ತೆ ಅನ್ನೋದು‌ ಅಭಿಪ್ರಾಯ. ಜಿಎಸ್​ಟಿ, ಖೇಲೋ ಇಂಡಿಯಾ ಇದೇ ಭಾಷಣ ನೋಡಿದ್ದೇವೆ. ಇದರಿಂದ ರೈತರಿಗೆ ಅನುಕೂಲ‌ ಆಗಲ್ಲ‌. ಇದರಿಂದ ಯಾರಿಗೆ ಅನುಕೂಲ‌ ಗೊತ್ತಿಲ್ಲ‌. ಅವರು ತರೋದಕ್ಕೆ ನನ್ನ ಸ್ವಾಗತ. ಆದರೆ ಇದರಿಂದ ಏನು ಪ್ರಯೋಜನ ಗೊತ್ತಾಗಬೇಕು" ಎಂದರು.

ಇದನ್ನೂ ಓದಿ: ಪಂಚಮಸಾಲಿ ಹೋರಾಟಗಾರರಿಗೆ ಬಿಜೆಪಿ ಟೋಪಿ ಹಾಕಿದೆ: ಸಿಎಂ ಸಿದ್ಧರಾಮಯ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.