ETV Bharat / state

ಕಾಂಗ್ರೆಸ್ ಗ್ಯಾರಂಟಿ, ಪ್ರಧಾನಿ‌ ಮೋದಿ ಅವರ ಸುಳ್ಳು ನಮ್ಮ ಗೆಲುವಿಗೆ ಕಾರಣವಾಗಲಿದೆ: ಸಚಿವ ಸಂತೋಷ್ ಲಾಡ್ - Minister Santosh Lad statement

ಕಾಂಗ್ರೆಸ್ ಗ್ಯಾರಂಟಿ ಹಾಗೂ ಪ್ರಧಾನಿ‌ ನರೇಂದ್ರ ಮೋದಿ ಅವರ ಸುಳ್ಳು ನಮ್ಮ ಗೆಲುವಿಗೆ ಕಾರಣವಾಗಲಿದೆ ಎಂದು ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.

PRIME MINISTER NARENDRA MODI  VICTORY  SHIVAMOGGA
ಸಚಿವ ಸಂತೋಷ್ ಲಾಡ್
author img

By ETV Bharat Karnataka Team

Published : Apr 29, 2024, 1:56 PM IST

ಶಿವಮೊಗ್ಗ: ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳುವ ಸುಳ್ಳುಗಳು ನಮ್ಮ ಗೆಲುವಿಗ ಕಾರಣವಾಗಲಿದೆ ಎಂದು ಕಾರ್ಮಿಕ ಖಾತೆ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.

ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರ ಮನೆಯಲ್ಲಿ ಮಾತನಾಡಿದ ಅವರು, ಮೊನ್ನೆ ನಡೆದ ಚುನಾವಣೆಯಲ್ಲಿ 9-10 ಸೀಟು ಗೆಲ್ಲುವ ಸಾಧ್ಯತೆ ಇದೆ. ನಮ್ಮ ಗ್ಯಾರಂಟಿ ಹಾಗೂ ಮೋದಿರವರ ಸುಳ್ಳು ನಮ್ಮ ಗೆಲುವಿಗೆ ಕಾರಣವಾಗಲಿದೆ. ಮೋದಿ ಅವರು ಹಿಂದೂಗಳು ಬಹಳ ಅಪಾಯದಲ್ಲಿದ್ದಾರೆ ಎಂದು ಹೇಳುತ್ತಿದ್ದಾರೆ. ಮೋದಿಯವರೇ, ಕಳೆದ 10 ವರ್ಷ ಆಡಳಿತ ನಡೆಸಿದ್ದೀರಿ. ನಿಮ್ಮದೇ ಅವಧಿಯಲ್ಲಿ ಹಿಂದೂಗಳ ಅಪಾಯದಲ್ಲಿದ್ದಾರೆಯೇ ಎಂದು ಪ್ರಶ್ನಿಸಿದರು.

ನಮ್ಮ ಅವಧಿಯಲ್ಲಿ ಹಿಂದೂಗಳು ಅರಾಮವಾಗಿದ್ದರು. ಈಗ ಮೋದಿ ಅವರು ತಮ್ಮ ಅಭಿವೃದ್ಧಿ ಬಗ್ಗೆ ಮಾತನಾಡದೇ, ಪಾಕಿಸ್ತಾನ, ಅಫ್ಘಾನಿಸ್ತಾನ, ಮುಸಲ್ಮಾನ ಎಂದು ಭಾಷಣ ಮಾಡುತ್ತಿದ್ದಾರೆ. ಮೋದಿ ಅವರು ನಮ್ಮ ಗ್ಯಾರಂಟಿಯನ್ನು ಕಾಫಿ ಮಾಡಿದ್ದಾರೆ ಎಂದರು. ದೇಶದ ಶೇ 40 ರಷ್ಟು ಸಂಪತ್ತು ಕೇವಲ ಶೇ.1 ರಷ್ಟು ಜನರ ಬಳಿ ಇದೆ. ಇದು ಮೋದಿ ಅವರ ಸಾಧನೆ ಎಂದರು.

ದೇಶದ ಪ್ರಧಾನಿಯಾದವರು ಮಾಂಗಲ್ಯ ಸರದ ಕುರಿತು ಮಾತನಾಡುತ್ತಿದ್ದಾರೆ. ಕಳೆದ 10 ವರ್ಷದ ಸಾಧನೆ ಎಂದರೆ, ಪಾಕಿಸ್ತಾನ ಅಫಾನಿಸ್ತಾನ, ಶ್ರೀರಾಮ ಎಂದು ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಅವರು ಹೇಳಿದ್ದು ದೇಶದ ಜಾತಿ ಸರ್ವೆ ನಡೆಸಬೇಕು ಎಂದು ಹೇಳಿದ್ದಾರೆ. ಬಂಗಾರವನ್ನು ಗಗನಕ್ಕೆ ಏರಿಸಿರುವುದೇ ಇವರ ಸಾಧನೆ ಎಂದರು. ವಿದೇಶಕ್ಕೆ ಹೋದರೆ ಇರುವುದು ಪಾಸ್ ಪೊರ್ಟ್ ಹೊರತು ವ್ಯಕ್ತಿಯ ಜನಪ್ರಿಯತೆಯಿಂದ ಅಲ್ಲ ಎಂದು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಓದಿ: ಪೆನ್​ಡ್ರೈವ್​ ಪ್ರಕರಣ: ತ್ವರಿತಗತಿಯಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಲು ಎಸ್​ಐಟಿಗೆ ಸೂಚನೆ; ಜಿ.ಪರಮೇಶ್ವರ್​​​ - G Parameshwar

ETV Bharat Logo

Copyright © 2024 Ushodaya Enterprises Pvt. Ltd., All Rights Reserved.