ETV Bharat / state

ಉತ್ತಮ ಮುಂಗಾರು: ಮಾರುಕಟ್ಟೆಯಲ್ಲಿ ವಹಿವಾಟು ಜೋರು, ಹುಬ್ಬಳ್ಳಿಯಲ್ಲಿ ಕಳೆಗಟ್ಟಿದ ಗಣೇಶೋತ್ಸವ ಸಂಭ್ರಮ - Ganesha festival

ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಗಣೇಶನ ಹಬ್ಬಕ್ಕೆ ಸಿದ್ಧತೆ ಜೋರಾಗಿದೆ. ನಗರದ ಮಾರುಕಟ್ಟೆಯಲ್ಲಿ ವಿವಿಧ ಅಲಂಕೃತ ವಸ್ತುಗಳು ಜನರನ್ನು ಸೆಳೆಯುತ್ತಿವೆ.

Ganesha idol
ಗಣೇಶ ಮೂರ್ತಿ ತಯಾರಿಸುತ್ತಿರುವುದು (ETV Bharat)
author img

By ETV Bharat Karnataka Team

Published : Aug 30, 2024, 5:16 PM IST

ಗಣೇಶ ಮಹಾಮಂಡಳಿ ಉಪಾಧ್ಯಕ್ಷ ಶಾಂತರಾಜ ಪೋಳ (ETV Bharat)

ಹುಬ್ಬಳ್ಳಿ: ಗಣೇಶೋತ್ಸವ ಆಚರಣೆಗೆ ದಿನಗಣನೆ ಆರಂಭವಾಗಿದ್ದು, ಅವಳಿ ನಗರದಲ್ಲಿ ಭರದ ಸಿದ್ಧತೆ ನಡೆದಿದೆ. ಉತ್ತಮ ಮುಂಗಾರು ಮಳೆಯಿಂದಾಗಿ ರೈತರು ಬಿತ್ತನೆ ಕಾರ್ಯ ಮುಗಿಸಿ, ಬೆಳೆಗಳ ಆರೈಕೆಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಯಲ್ಲಿ ವ್ಯಾಪಾರ, ವಹಿವಾಟು ಚುರುಕು ಪಡೆದಿದ್ದು, ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಗಣೇಶೋತ್ಸವ ಸಂಭ್ರಮ ಕಳೆಗಟ್ಟಿದೆ.

ಕಳೆದ ವರ್ಷ ತೀವ್ರ ಬರಗಾಲವಿತ್ತು. ರೈತರ ಬೆಳೆಗಳೆಲ್ಲ ನೀರಿಲ್ಲದೆ ಒಣಗಿ ಹೋಗಿ ಅಪಾರ ನಷ್ಟ ಅನುಭವಿಸಿದ್ದರು. ಇದು ಗಣೇಶೋತ್ಸವ ಆಚರಣೆ ಮೇಲೂ ಪರಿಣಾಮ ಬೀರಿತ್ತು. ಆದರೆ, ಈ ಬಾರಿ ಮಳೆ ಜೋರಾಗಿ ಸುರಿದಿದೆ. ಹೆಸರು ಬೆಳೆಯೂ ಕೈಗೆ ಬಂದಿದೆ. ಹೀಗಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಗಣಪನ ಮೂರ್ತಿ ಪ್ರತಿಷ್ಠಾಪನೆಗೆ ಸಿದ್ಧತೆ ಜೋರಾಗಿಯೇ
ನಡೆದಿದೆ. ಮಾರುಕಟ್ಟೆಯಲ್ಲೂ ತರಹೇವಾರಿ ಅಲಂಕೃತ ವಸ್ತುಗಳು ಆಕರ್ಷಿಸತೊಡಗಿವೆ.

ಹುಬ್ಬಳ್ಳಿ ಗಣೇಶನೆಂದ್ರೆ ವಿಶೇಷ : ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮುಂಬೈ ಹಾಗೂ ಹೈದ್ರಾಬಾದ್ ಮಾದರಿಯಲ್ಲಿ ಬೃಹತ್ ಪ್ರಮಾಣದ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುವ ವಾಡಿಕೆ ಇದೆ.‌ ಇಲ್ಲಿ ಕಳೆದ ಹಲವು ದಶಕಗಳಿಂದ 10 ಅಡಿಯಿಂದ ಹಿಡಿದು 21 ಅಡಿಗಳವರೆಗಿನ‌ ಬೃಹತ್ ಗಣೇಶ ಮೂರ್ತಿಗಳನ್ನು ‌ಪ್ರತಿಷ್ಠಾಪನೆ ಮಾಡಲಾಗುತ್ತಿದೆ.‌

Ganesha idol
ಗಣೇಶ ಮೂರ್ತಿ (ETV Bharat)

ಈ ಕುರಿತಂತೆ ಹುಬ್ಬಳ್ಳಿ ಗಣೇಶೋತ್ಸವ ಮಹಾಮಂಡಳಿ ಉಪಾಧ್ಯಕ್ಷ ಶಾಂತರಾಜ ಪೋಳ ಮಾತನಾಡಿದ್ದು, ಮಹಾಮಂಡಳ ಅಂದಾಜಿಸಿದ ಪ್ರಕಾರ, 500 ರಿಂದ 600 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಇದರಲ್ಲಿ ಮರಾಠಗಲ್ಲಿಯ ಹುಬ್ಬಳ್ಳಿ ಕಾ ಮಹಾರಾಜ ಹಾಗೂ ದಾಜಿ ಬಾನಪೇಟೆಯ ಹುಬ್ಬಳ್ಳಿ ಕಾ ರಾಜ 21 ಅಡಿ ಎತ್ತರವಿರಲಿದೆ. ಹಳೇ ಹುಬ್ಬಳ್ಳಿ ಮಹಾರಾಜನ ಎತ್ತರ 15 ಅಡಿ ಇರಲಿದೆ. 100ಕ್ಕೂ ಹೆಚ್ಚು ಮೂರ್ತಿಗಳು 15 ಅಡಿ ಎತ್ತರ ಇರಲಿವೆ. ಕ್ರಮವಾಗಿ 5ನೇ ದಿನ, 7ನೇ ದಿನ, 9 ಹಾಗೂ 11 ನೇ ದಿನ ಬೃಹತ್ ಮೆರವಣಿಗೆ ಮೂಲಕ ಗಣೇಶ ನಿಮಜ್ಜನ ಮಾಡಲಾಗುತ್ತದೆ. ಆಯಾ ಪ್ರದೇಶದ ಪ್ರಮುಖರು ಹಂತ ಹಂತವಾಗಿ ಯಾವುದೇ ಗೊಂದಲ, ಗಲಾಟೆಗೆ ಅವಕಾಶ ನೀಡದಂತೆ ಬೆಳಗ್ಗೆಯಿಂದ ಮೆರವಣಿಗೆ ಪ್ರಾರಂಭವಾಗಿ ರಾತ್ರಿ 10 ಗಂಟೆಯವರೆಗೂ ನಡೆಯಲಿದೆ ಎಂದರು.

Ganesha idol
ಗಣೇಶ ಮೂರ್ತಿ ತಯಾರಿಕೆ (ETV Bharat)

ಆತಂಕ ದೂರ : ಎರಡು ವರ್ಷಗಳ ಹಿಂದೆ ನಗರದಲ್ಲಿ ಗಣೇಶೋತ್ಸವದ ವೇಳೆ ಚಾಕು ಇರಿತ ಹಾಗೂ ಕೋವಿಡ್ ಕಾರಣದಿಂದ ಪೊಲೀಸ್ ಇಲಾಖೆ ಸಾಕಷ್ಟು ನಿರ್ಬಂಧ ಹೇರುತ್ತಿತ್ತು. ಹುಬ್ಬಳ್ಳಿಯ ಗಣೇಶೋತ್ಸವ ನೋಡುವುದಕ್ಕೆ ಬರಲು ಜನರು ಭಯ ಭೀತರಾಗಿದ್ದರು. ಈ ಬಾರಿ ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಅವರು ವಾಣಿಜ್ಯ ನಗರಿಯಲ್ಲಿ ಅಕ್ರಮ ಚಟುವಟಿಕೆ ತಡೆಗಟ್ಟುತ್ತಿರುವ ಹಿನ್ನೆಲೆ ಆತಂಕ ದೂರವಾಗಿದೆ.

ಮರುಕಳಿಸಲಿದೆ ಹಳೇ ವೈಭವ : ಹುಬ್ಬಳ್ಳಿ ಗಣೇಶೋತ್ಸವ ನೋಡಲು ಜಿಲ್ಲೆ ಅಲ್ಲದೆ ಅಕ್ಕಪಕ್ಕದ ಜಿಲ್ಲೆಯ ಜನರು ಆಗಮಿಸುತ್ತಾರೆ. ರಾತ್ರಿಯಿಡಿ ಸರತಿ‌ಸಾಲಿನಲ್ಲಿ ನಿಂತು ಗಣೇಶನ ದರ್ಶನ ಪಡೆಯುತ್ತಾರೆ. ಆದ್ರೆ ಇತ್ತೀಚಿಗೆ ಪ್ರತಿಕೂಲ ಹವಾಮಾನ, ಮಳೆ, ಚಳಿಯಿಂದ ಜನರು ಬರಲು ಹಿಂದೇಟು ಹಾಕುತ್ತಿದ್ದಾರೆ. ಆದ್ರೂ ಸಾಕಷ್ಟು ಜನ ಕುಟುಂಬ ಸಮೇತ ಆಗಮಿಸಿ ಗಣೇಶನ ದರ್ಶನ ಪಡೆಯುತ್ತಾರೆ.

Ganesha idol
ಗಣೇಶ ಮೂರ್ತಿ ತಯಾರಿಸುತ್ತಿರುವುದು (ETV Bharat)

ಡಿಜೆಗೆ ನಿರ್ಬಂದ ಹೇರಿದ ಪೊಲೀಸ್ ಇಲಾಖೆ : ಹುಬ್ಬಳ್ಳಿ ಕಾ ರಾಜಾ, ಹುಬ್ಬಳ್ಳಿ ಮಹಾರಾಜ್ ಗಣೇಶ ಮೆರವಣಿಗೆ 11ನೇ ದಿನಕ್ಕೆ ಜರುಗಲಿದೆ. ಅದರ ವೀಕ್ಷಣೆಗೆ ಲಕ್ಷಾಂತರ ಜನ ಆಗಮಿಸುತ್ತಾರೆ‌.‌ ಭದ್ರತೆ ಪೊಲೀಸ್ ಇಲಾಖೆಗೆ ತಲೆನೋವಾಗಿದೆ. ಹೀಗಾಗಿ ಪೊಲೀಸರು ರಾತ್ರಿ 10 ಗಂಟೆಯವರೆಗೆ ಡಿಜೆಗೆ ಅನುಮತಿ ನೀಡಿದ್ದಾರೆ. ಇನ್ನಷ್ಟು ಗಂಟೆ ಅವಕಾಶ ಕೊಡಬೇಕು ಎಂದು ಗಣೇಶ ಮಹಾಮಂಡಳಿ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರಿಗೆ ಮನವಿ ಮಾಡಿದೆ.‌

ಪಿಒಪಿ ಮಾರಾಟಕ್ಕೆ ಕಣ್ಗಾವಲು: ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದ್ದ ಪಿಒಪಿ ಗಣಪತಿ ಮೂರ್ತಿಗಳನ್ನು ವಶಕ್ಕೆ ಪಡೆಯುವ ಕಾರ್ಯದಲ್ಲಿ ಪಾಲಿಕೆ ಅಧಿಕಾರಿಗಳು ತೊಡಗಿದ್ದಾರೆ. ಪರಿಸರ ಹಾನಿ ಮಾಡುವ ಇಂಥ ಮೂರ್ತಿಗಳು ಜಿಲ್ಲೆ ಪ್ರವೇಶಿಸದಂತೆ ನಿರ್ಬಂಧ ಹೇರಲಾಗುತ್ತಿದೆ. ಇದು‌ ಕೂಡ ಉತ್ತಮ ಬೆಳವಣಿಗೆಯಾಗಿದೆ.

ಇದನ್ನೂ ಓದಿ : ಗಣೇಶ ಹಬ್ಬದ ಆಚರಣೆಗೆ ಯಾವುದೇ ಚ್ಯುತಿ ಬರದಂತೆ ಅಗತ್ಯ ಕ್ರಮವಹಿಸಿ: ಬಿಬಿಎಂಪಿ ಮುಖ್ಯ ಆಯುಕ್ತರ ಸೂಚನೆ - Ganesha Festival

ETV Bharat Logo

Copyright © 2024 Ushodaya Enterprises Pvt. Ltd., All Rights Reserved.