ETV Bharat / state

ಪರಿಷತ್​ನಲ್ಲಿ ಪ್ರತಿಧ್ವನಿಸಿದ ಉ.ಕ ಅಭಿವೃದ್ಧಿ: ಕಿತ್ತೂರು ಕರ್ನಾಟಕಕ್ಕೂ‌ ₹5 ಸಾವಿರ ಕೋಟಿ ಕೊಡುವಂತೆ ಹುಕ್ಕೇರಿ ಮನವಿ - NORTH KARNATAKA PROBLEMS

ಪರಿಷತ್ ಕಲಾಪದಲ್ಲಿ ಇಂದು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಸದಸ್ಯರು ದನಿ ಎತ್ತಿದರು.

ಪರಿಷತ್ ಕಲಾಪ
ಪರಿಷತ್ ಕಲಾಪ (ETV Bharat)
author img

By ETV Bharat Karnataka Team

Published : 3 hours ago

ಬೆಳಗಾವಿ: ವಿಧಾನಪರಿಷತ್​​ನಲ್ಲಿಂದು ನಡೆದ ಕಲಾಪದಲ್ಲಿ ಉತ್ತರ ಕರ್ನಾಟಕ ಭಾಗದ ಹಲವು ಸಮಸ್ಯೆಗಳ ಕುರಿತು ಈ ಭಾಗದ ಸದಸ್ಯರು ದನಿ ಎತ್ತಿದರು. ಕಲಾಪದಲ್ಲಿ ಹಾಜರಾತಿ ಕಡಿಮೆ ಇದ್ದ ಹಿನ್ನೆಲೆಯಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಗರಂ ಆದ ಘಟನೆಯೂ ನಡೆಯಿತು.

ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಗೆ ಅವಕಾಶ ನೀಡಿದ ವೇಳೆ ಮಾತನಾಡಿದ ಹಿರಿಯ ಸದಸ್ಯ ಪ್ರಕಾಶ ಹುಕ್ಕೇರಿ, ಬೆಳಗಾವಿಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ‌ ಕಾಮಗಾರಿ ಪೂರ್ಣಗೊಂಡಿದೆ. ಪ್ರಾಧ್ಯಾಪಕರು, ವೈದ್ಯರು, ನರ್ಸ್, ಸಿಬ್ಬಂದಿ ಸೇರಿ 585 ಮಂದಿ ನೇಮಕಾತಿಗೆ 38 ಕೋಟಿ ರೂ. ಅನುದಾನದ ಅವಶ್ಯಕತೆ ಇದೆ. ತಕ್ಷಣ ಸರ್ಕಾರ ಅನುದಾನ ಒದಗಿಸಿ ಆಸ್ಪತ್ರೆ ಕಾರ್ಯಾರಂಭ ಮಾಡಿಸಬೇಕು ಎಂದು ಒತ್ತಾಯಿಸಿದರು.

ಅಲ್ಲದೇ, ಕಲ್ಯಾಣ ಕರ್ನಾಟಕ ಭಾಗಕ್ಕೆ 5 ಸಾವಿರ ಕೋಟಿ ವಿಶೇಷ ಅನುದಾನ‌ ನೀಡುವಂತೆ, ಹಿಂದುಳಿದಿರುವ ಕಿತ್ತೂರು ಕರ್ನಾಟಕಕ್ಕೂ ವಿಶೇಷ ಅನುದಾನ‌ ಒದಗಿಸಬೇಕು. ಬಹುದಿನಗಳ ಬೇಡಿಕೆ ಆಗಿರುವ ಚಿಕ್ಕೋಡಿ ಜಿಲ್ಲೆ ರಚನೆ ಮಾಡಬೇಕು. ಚಿಕ್ಕೋಡಿಯಲ್ಲಿ ಸದ್ಯ 100 ಹಾಸಿಗೆ ಆಸ್ಪತ್ರೆಯಿದ್ದು, ಇದನ್ನು 250 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಬೇಕು. ಹಾಸಿಗೆ ಕೊರತೆಯಿಂದ ಇಲ್ಲಿನ ಜನರು ಸಾಂಗಲಿ, ಮಿರಜ್ ಆಸ್ಪತ್ರೆಗೆ ಹೋಗುವ ಸ್ಥಿತಿಯಿದೆ‌. ಬೆಳಗಾವಿಗೆ ಮಂಜೂರಾಗಿರುವ ಕ್ಯಾನ್ಸರ್ ಆಸ್ಪತ್ರೆಗೆ 10 ಎಕರೆ ಜಾಗದ ಕೊರತೆಯಿದೆ. ಹಾಗಾಗಿ, ಚಿಕ್ಕೋಡಿಯಲ್ಲಿ ನಾನು ಜಾಗ ಒದಗಿಸುತ್ತೇನೆ. ಈ ಸಂಬಂಧ ಸಿಎಂ ಅವರನ್ನು ಕೂಡ ಭೇಟಿಯಾಗಿದ್ದು, ತಕ್ಷಣ ಎಲ್ಲಾ ವಿಚಾರಗಳ ಬಗ್ಗೆ ಸರ್ಕಾರ ಕ್ರಮ ವಹಿಸುವಂತೆ ಆಗ್ರಹಿಸಿದರು.

ಜೆಡಿಎಸ್ ಸದಸ್ಯ ಕೆ.ಎ.ತಿಪ್ಪೇಸ್ವಾಮಿ ಮಾತನಾಡಿ, ಆಂಧ್ರ ಪ್ರದೇಶದ ನಾಗಾರ್ಜುನ ಸಾಗರ ಆಣೆಕಟ್ಟು ಯೋಜನೆ‌ ಅನುಷ್ಠಾನ ವೇಳೆ 10 ವರ್ಷ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿ, ಆ ಹಣವನ್ನು ಈ ಯೋಜನೆಗೆ ಬಳಸಿ ಪೂರ್ಣಗೊಳಿಸಲಾಗಿತ್ತು. ಅದೇ ಮಾದರಿಯಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ ಯೋಜನೆಯಲ್ಲೂ‌ ಅನುಸರಿಸಬೇಕು. ಹಿಂದೆ 52 ಸಾವಿರ ಕೋಟಿ ರೂ ಬೇಕಾಗಿದ್ದ ಯುಕೆಪಿ ಈಗ 1.02 ಲಕ್ಷ ಕೋಟಿಗೆ ಬಂದು ನಿಂತಿದೆ. ಪ್ರತಿವರ್ಷ 25 ಸಾವಿರ ಕೋಟಿ ಮೀಸಲಿಟ್ಟು ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿದರು.

ಸದಸ್ಯ ಕೆ‌‌.ಎಸ್.ನವೀನ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಬಹಳಷ್ಟು ಸಂಪನ್ಮೂಲಗಳಿವೆ. ಆದರೆ, ಈ ಭಾಗದ ಅಭಿವೃದ್ಧಿ ಅಂದುಕೊಂಡಷ್ಟು ಆಗುತ್ತಿಲ್ಲ. ಇದಕ್ಕೆ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಕಾರಣ.‌ ಕರ್ನಾಟಕ ರಾಜ್ಯದ ಇತಿಹಾಸದಲ್ಲಿ 22 ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದು, ಈ ಪೈಕಿ ಉ.ಕ.ದ 6 ಮಂದಿ ಮಾತ್ರ ಮುಖ್ಯಮಂತ್ರಿ ಆಗಿದ್ದಾರೆ ಎಂಬ ವಿಷಯವನ್ನು ಸದನದ‌ ಮುಂದಿಟ್ಟರು.

ಇದನ್ನೂ ಓದಿ: 'ವಕ್ಫ್ ಅಕ್ರಮ ಮುಚ್ಚಿಹಾಕಲು ವಿಜಯೇಂದ್ರ 150 ಕೋಟಿ ರೂ. ಆಫರ್ ಮಾಡಿದ್ದರು': ಮಾಣಿಪ್ಪಾಡಿ ಆರೋಪ ಪ್ರಸ್ತಾಪಿಸಿದ ಪ್ರಿಯಾಂಕ್ ಖರ್ಗೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.