ETV Bharat / state

'ಲೋಕ' ಕದನ: ಇಂದಿನಿಂದ ಹಿರಿಯ ನಾಗರಿಕರು, ವಿಶೇಷಚೇತನರಿಂದ ಮನೆಯಲ್ಲೇ ಅಂಚೆ ಮತದಾನ - Postal voting - POSTAL VOTING

ಇಂದಿನಿಂದ ಮನೆಯಲ್ಲೇ ಹಿರಿಯ ನಾಗರಿಕರು, ವಿಶೇಷಚೇತನರಿಗೆ ಅಂಚೆ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗ ನೀಡಿದೆ.

ಅಂಚೆ ಮತದಾನ
ಅಂಚೆ ಮತದಾನ
author img

By ETV Bharat Karnataka Team

Published : Apr 13, 2024, 12:23 PM IST

ಬೆಂಗಳೂರು : ಹಿರಿಯ ನಾಯಕರು ಹಾಗೂ ಅರ್ಹ ವಿಶೇಷಚೇತನರಿಗಾಗಿ ಮನೆಯಲ್ಲೇ ಮತದಾನ ಮಾಡಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ. 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ವಿಶೇಷಚೇತನರಿಗೆ ಇಂದಿನಿಂದ (ಏ.13 ರಿಂದ) ಏಪ್ರಿಲ್​ 18 ರವರೆಗೂ ಮತದಾನ ಪ್ರಕ್ರಿಯೆ ನಡೆಯಲಿದೆ.

ಮೊದಲು ಅರ್ಜಿ ಸಲ್ಲಿಕೆ ಮಾಡಿರುವ ಅರ್ಹ ಮತದಾರರ ಮನೆಗೆ ತೆರಳಿ ಅಧಿಕಾರಿಗಳ ತಂಡ ಅಂಚೆ ಮತದಾನ ಮಾಡಿಸಲಿದೆ. ಯಾವ ದಿನ ಅಧಿಕಾರಿಗಳ ತಂಡ ಭೇಟಿ ನೀಡಲಿದೆ ಎಂಬುದರ ಕುರಿತು ಮೊದಲೇ ಮತದಾರರಿಗೆ ಒದಗಿಸಲಾಗುತ್ತದೆ. 14 ಕ್ಷೇತ್ರಗಳಲ್ಲಿ ಒಟ್ಟು 36,691 ಹಿರಿಯ ನಾಗರಿಕರು, 12,957 ವಿಶೇಷಚೇತನರು ನೋಂದಣಿ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ 85 ವರ್ಷಕ್ಕೂ ಮೇಲ್ಪಟ್ಟ ಒಟ್ಟು 2,47,342 ಪುರುಷ, 3,22,726 ಮಹಿಳಾ ಹಾಗೂ 5 ಇತರ ಸೇರಿ 5,70,073 ಮತದಾರರಿದ್ದಾರೆ. ವಿಶೇಷಚೇತನರ ಪೈಕಿ 3,58,383 ಪುರುಷರು ಹಾಗೂ 2,60,633 ಮಹಿಳೆಯರು ಹಾಗೂ 53 ಇತರ ಮತದಾರರಿದ್ದಾರೆ.

ಕ್ಷೇತ್ರವಾರು ಮತದಾರರೆಷ್ಟು? : 85 ವರ್ಷ ಮೇಲ್ಪಟ್ಟ ಮತದಾರರು : ಬೆಂಗಳೂರು ಗ್ರಾಮಾಂತರ 2,240, ಬೆಂಗಳೂರು ಕೇಂದ್ರ 1,762, ಬೆಂಗಳೂರು ಉತ್ತರ 1,975, ಬೆಂಗಳೂರು ದಕ್ಷಿಣ 2,469, ಚಿಕ್ಕಬಳ್ಳಾಪುರ 1,639, ಕೋಲಾರ 1,433, ಮೈಸೂರು - ಕೊಡಗು 2,475, ಮಂಡ್ಯ 2,570, ಹಾಸನ 2,636, ಚಾಮರಾಜನಗರ 982, ತುಮಕೂರು 3,069, ಚಿತ್ರದುರ್ಗ 2,723, ದಕ್ಷಿಣ ಕನ್ನಡ 6,053 ಹಾಗೂ ಉಡುಪಿ - ಚಿಕ್ಕಮಗಳೂರು 4,665.

ವಿಶೇಷಚೇತನರು : ಬೆಂಗಳೂರು ಗ್ರಾಮಾಂತರ 768, ಬೆಂಗಳೂರು ಕೇಂದ್ರ 60, ಬೆಂಗಳೂರು ಉತ್ತರ 87, ಬೆಂಗಳೂರು ದಕ್ಷಿಣ 54, ಚಿಕ್ಕಬಳ್ಳಾಪುರ 941, ಕೋಲಾರ 806, ಮೈಸೂರು - ಕೊಡಗು 918, ಮಂಡ್ಯ 1,075, ಹಾಸನ 1,377, ಚಾಮರಾಜನಗರ 445, ತುಮಕೂರು 889, ಚಿತ್ರದುರ್ಗ 2059, ದಕ್ಷಿಣ ಕನ್ನಡ 1,975 ಹಾಗೂ ಉಡುಪಿ- ಚಿಕ್ಕಮಗಳೂರು 1503.

ಇದನ್ನೂ ಓದಿ : ಮೈಸೂರು-ಕೊಡಗು ಕ್ಷೇತ್ರ: ಏ.13ರಿಂದ 17ರವರೆಗೆ ಹಿರಿಯ ನಾಗರಿಕರಿಗೆ ಮನೆಯಲ್ಲೇ ಮತದಾನ ಅವಕಾಶ - Mysuru Kodagu Constituency

ETV Bharat Logo

Copyright © 2024 Ushodaya Enterprises Pvt. Ltd., All Rights Reserved.