ETV Bharat / state

ಹಾವೇರಿ: ಕೈತುಂಬಾ ಆದಾಯದ ಕನಸು ಕಂಡ ರೈತರಿಗೆ ನಿರಾಶೆ - CORN SEEDS - CORN SEEDS

ಪ್ರತಿವರ್ಷ ಎಕರೆಗೆ 25ರಿಂದ 30 ಕ್ವಿಂಟಾಲ್​ ಮೆಕ್ಕೆಜೋಳ ಇಳುವರಿ ಪಡೆಯುತ್ತಿದ್ದ ರೈತರು ಈ ಬಾರಿ 50 ಕ್ವಿಂಟಾಲ್​ ಫಸಲು ಪಡೆಯುವ ಆಸೆಯಿಂದ ಹೊಸ ಬೀಜ ಬಿತ್ತಿ ಕೈ ಸುಟ್ಟುಕೊಂಡಿದ್ದಾರೆ.

Corn
ಮೆಕ್ಕೆಜೋಳ (ETV Bharat)
author img

By ETV Bharat Karnataka Team

Published : Sep 3, 2024, 11:28 AM IST

Updated : Sep 3, 2024, 1:05 PM IST

ಹಾವೇರಿ: ಮೆಕ್ಕೆಜೋಳದ ಗಿಡಗಳು ಸೊಂಪಾಗಿ ಬೆಳೆದು ನಿಂತರೂ ಬಹಳಷ್ಟು ಗಿಡಗಳು ಇನ್ನೂ ತೆನೆಗಳನ್ನೇ ಬಿಟ್ಟಿಲ್ಲ. ಕೆಲವು ಗಿಡಗಳು ತೆನೆ ಬಿಟ್ಟರೂ ಗಾತ್ರ ಚಿಕ್ಕದಾಗಿವೆ. ಉತ್ತಮ ಇಳುವರಿಯ ನಿರೀಕ್ಷೆಯಲ್ಲಿದ್ದ ಸವಣೂರು ತಾಲೂಕಿನ ತೊಂಡೂರು ಗ್ರಾಮದ ರೈತರಿಗೆ ಈಗ ನಿರಾಸೆಯಾಗಿದೆ.

ಹಾವೇರಿ: ಕೈತುಂಬಾ ಆದಾಯದ ಕನಸು ಕಂಡ ರೈತರಿಗೆ ನಿರಾಶೆ (ETV Bharat)

ಗ್ರಮದ 10ಕ್ಕೂ ಅಧಿಕ ರೈತರು ಸುಮಾರು 50ಕ್ಕೂ ಹೆಚ್ಚು ಎಕರೆ ಭೂಮಿಯಲ್ಲಿ ಗೋವಿನ ಜೋಳ ಬಿತ್ತಿದ್ದರು. ಗಿಡಗಳು ಆಳೆತ್ತರ ಬೆಳೆದು ನಿಂತಿವೆ. ಆದರೆ ತೆನೆಗಳು ಬೆರಳೆಣಿಕೆಯಷ್ಟಿವೆ. ಪ್ರತಿವರ್ಷ ಎಕರೆಗೆ ಸುಮಾರು 25ರಿಂದ 30 ಕ್ವಿಂಟಾಲ್​ ಮೆಕ್ಕೆ ಜೋಳ ಬೆಳಯುತ್ತಿದ್ದ ರೈತರು ಈ ವರ್ಷ ಹೊಸ ಬೀಜದಿಂದ 40 ಕ್ವಿಂಟಾಲ್​ ಮೆಕ್ಕೆಜೋಳ ಫಸಲು ಸಿಗುವ ಖುಷಿಯಲ್ಲಿದ್ದರು. ಆದರೀಗ ಗಿಡಗಳಲ್ಲಿ ಬಿಟ್ಟಿರುವ ತೆನೆಗಳು ಕೂಡ ಚಿಕ್ಕದಾಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.

"ಈ ವರ್ಷ ಎಕರೆಗೆ 40 ಕ್ವಿಂಟಾಲ್​ ಫಸಲು ಕೊಡುವ ಬೀಜ ಸಿಕ್ಕಿದೆ ಎಂದು ಹೊಸ ತಳಿಯ ಮೆಕ್ಕೆಜೋಳದ ಬೀಜ ತಂದು ಬಿತ್ತನೆ ಮಾಡಿದ್ದೆವು. ಒಂದು ಪಾಕೆಟ್​ ಬೀಜಕ್ಕೆ ಎರಡು ಸಾವಿರ ರೂ. ಕೊಟ್ಟಿದ್ದೆವು. ಗಿಡಗಳು ಚೆನ್ನಾಗಿ ಬೆಳೆದು ನಿಂತಿವೆ. ಆದರೆ ಇವುಗಳಲ್ಲಿ ಬಿಟ್ಟಿರುವ ತೆನೆಗಳನ್ನು ನೋಡಿದರೆ 40 ಕ್ವಿಂಟಾಲ್​ ಬದಲು ಐದು ಕ್ವಿಂಟಲ್​ ಇಳುವರಿ ಬರುವುದು ಅನುಮಾನ. ಎಕರೆಗೆ ಕನಿಷ್ಟ 25 ಸಾವಿರ ಖರ್ಚು ಮಾಡಿದ್ದೇವೆ. ಸುಮಾರು 50 ಸಾವಿರ ಆದಾಯ ಬರುತ್ತದೆ ಎನ್ನುವ ಕನಸು ಕಂಡಿದ್ದೆವು. ಆದರೆ ಈ ಹೊಸ ತಳಿಯ ಬೀಜ ನಮಗೆ ನಷ್ಟ ತಂದಿದೆ. ಅಧಿಕ ಲಾಭವಿರಲಿ, ಪ್ರತಿ ಎಕರೆಗೆ ಹಾಕಿದ ಖರ್ಚು ಸಹ ಈ ಫಸಲಿನಲ್ಲಿ ಸಿಗುವುದಿಲ್ಲ. ಸೊಂಪಾಗಿ ಬೆಳೆದಿರುವ ಗಿಡಗಳಲ್ಲೂ ಅವುಗಳ ರವದಿಗೆ ಚುಕ್ಕೆ ಕಾಣಿಸಿಕೊಂಡಿದ್ದು, ಸೊಪ್ಪು ಕೂಡ ಜಾನುವಾರುಗಳಿಗೆ ಹಾಕಲು ಸಾಧ್ಯವಿಲ್ಲ" ಎಂದು ರೈತರು ಬೇಸರ ವ್ಯಕ್ತಪಡಿಸಿದರು.

Farmers in Corn Farm
ಮೆಕ್ಕೆಜೋಳ ತೋಟದಲ್ಲಿ ರೈತರು (ETV Bharat)

"ಕಳೆದ ವರ್ಷ ಬರದಿಂದ ತತ್ತರಿಸಿದ್ದೆವು. ಈ ವರ್ಷ ಮಳೆಗಾಲ ಉತ್ತಮವಾಗಿದೆಯೆಂದು ಸಾಲ ಮಾಡಿ ಬಿತ್ತನೆ ಮಾಡಿದರೆ ಈಗ ಈ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಇಳುವರಿ ಇಲ್ಲ, ಮತ್ತೊಂದೆಡೆ ಎತ್ತುಗಳಿಗೆ ಹಾಕಲು ಸೊಪ್ಪು ಸಹ ಬರದಂತಾಗಿದೆ. ಇದಕ್ಕೆಲ್ಲಾ ಕಳಪೆ ಬಿತ್ತನೆ ಬೀಜ ನೀಡಿದ್ದೇ ಕಾರಣ. ನಮ್ಮ ಅಕ್ಕಪಕ್ಕದ ರೈತರು ಬೇರೆ ಕಂಪೆನಿಯ ಬೀಜ ಬಿತ್ತನೆ ಮಾಡಿದ್ದು, ಅವರ ಗಿಡ ಮತ್ತು ತೆನೆಗಳು ಸದೃಢವಾಗಿ ಬೆಳೆದಿವೆ" ಎಂದು ರೈತರು ದೂರಿದರು.

"ಈ ಕುರಿತಂತೆ ಬಿತ್ತನೆ ಬೀಜದ ಕಂಪನಿಯವರಿಗೆ ತಿಳಿಸಿದರೆ ಬಂದು ನೋಡಿ ಹೋಗಿದ್ದು ಬಿಟ್ಟರೆ ಪರಿಹಾರದ ಬಗ್ಗೆ ಮಾತನಾಡಿಲ್ಲ. ಪದೇ ಪದೇ ಕರೆ ಮಾಡಿದ್ದರಿಂದ ಅವರು ಕೂಡ ಈಗ ಫೋನ್ ಕರೆ ಎತ್ತುತ್ತಿಲ್ಲ. ಹೀಗಾದರೆ ರೈತರನ್ನು ಕಾಪಾಡುವವರು ಯಾರು? ನಮಗೆ ಆದಾಯ ಬೇಡ, ಕನಿಷ್ಟ ಈ ಬೆಳೆ ಬೆಳೆಯಲು ನಾವು ಎಕರೆಗೆ ಮಾಡಿದ 25 ಸಾವಿರ ಖರ್ಚನ್ನಾದರೂ ಪರಿಹಾರವಾಗಿ ನೀಡಬೇಕು" ಎಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಕಳಪೆ ಬೀಜದಿಂದ ಬೆಳೆ ನಷ್ಟ: ಹಾಳಾದ ಆಲೂಗಡ್ಡೆ ಕಿತ್ತೆಸೆದು ಬೆಳಗಾವಿ ರೈತರ ಆಕ್ರೋಶ - Belagavi Farmers Protest

Last Updated : Sep 3, 2024, 1:05 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.