ಉತ್ತರಕನ್ನಡ/ಬಳ್ಳಾರಿ: ಚುನಾವಣಾ ಕರ್ತವ್ಯದಲ್ಲಿದ್ದ ಸಿಬ್ಬಂದಿ ಅಸ್ವಸ್ಥಗೊಂಡಿರುವ ಘಟನೆ ಉತ್ತರ ಕನ್ನಡ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ವರದಿಯಾಗಿದೆ.
ಸಶಿರಸಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಮಾರಿಕಾಂಬ ಶಾಲೆಯ ಚುನಾವಣಾ ಬೂತ್ ನಂಬರ್ 113ರಲ್ಲಿ ಕೆಲಸ ಮಾಡುತ್ತಿದ್ದ ಚುನಾವಣಾ ಸಿಬ್ಬಂದಿ ಪ್ರಕಾಶ್ ಕೋರಿ ಎಂಬವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು. ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸಾ ವೈದ್ಯರಿಲ್ಲದ ಕಾರಣ ಬೇರೆಡೆ ಸ್ಥಳಾಂತರ ಮಾಡಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಬಳ್ಳಾರಿಯಲ್ಲಿ ಸಿಬ್ಬಂದಿ ಅಸ್ವಸ್ಥ: ಕುಡುತಿನಿ ಮತದಾನ ಕೇಂದ್ರದ ಸಿಬ್ಬಂದಿಗೆ ರಕ್ತದೊತ್ತಡದ ಸಮಸ್ಯೆ ಕಂಡುಬಂದಿದ್ದು ಆಂಬ್ಯುಲೆನ್ಸ್ನಲ್ಲಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕಳುಹಿಸಿ ಚಿಕಿತ್ಸೆ ನೀಡಲಾಗಿದೆ. ಇದೀಗ ಅವರು ಚೇತರಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಒಂದೇ ಮತಗಟ್ಟೆಯಲ್ಲಿ ಮೂರು ತಲೆಮಾರಿನ ಜನ: ಅಜ್ಜಿ, ಮಗಳು, ಮೊಮ್ಮಗಳಿಂದ ವೋಟಿಂಗ್ - Hubballi Voting