ETV Bharat / state

ಹಾನಗಲ್ ಗ್ಯಾಂಗ್​ ರೇಪ್​ ಪ್ರಕರಣ: ಪೊಲೀಸರಿಂದ 873 ಪುಟಗಳ ಚಾರ್ಜ್​ ಶೀಟ್ ಸಲ್ಲಿಕೆ

ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ಪೊಲೀಸರು ಚಾರ್ಜ್​ಶೀಟ್ ಸಲ್ಲಿಸಿದ್ದಾರೆ.

ಹಾನಗಲ್ ಗ್ಯಾಂಗ್​ ರೇಪ್​ ಪ್ರಕರಣ
ಹಾನಗಲ್ ಗ್ಯಾಂಗ್​ ರೇಪ್​ ಪ್ರಕರಣ
author img

By ETV Bharat Karnataka Team

Published : Mar 8, 2024, 3:54 PM IST

Updated : Mar 8, 2024, 10:56 PM IST

ಎಸ್ಪಿ ಅಂಶುಕುಮಾರ್

ಹಾವೇರಿ: ಜಿಲ್ಲೆಯ ಹಾನಗಲ್ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಪೊಲೀಸರು 873 ಪುಟಗಳ ಚಾರ್ಜ್​ ಶೀಟ್ ಸಲ್ಲಿಸಿದ್ದಾರೆ. ಗ್ಯಾಂಗ್ ರೇಪ್ ಘಟನೆ ನಡೆದು 58 ದಿನಗಳ ಬಳಿಕ ಹಾನಗಲ್ ಜೆಎಂಎಫ್​​ಸಿ ಕೋರ್ಟ್​​ಗೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. ಗುರುತು ಪತ್ತೆ ಪರೇಡ್ ವೇಳೆ ತನ್ನ ಮೇಲೆ ಅತ್ಯಾಚಾರ ಎಸಗಿದ್ದ 7 ಪ್ರಮುಖ ಆರೋಪಿಗಳನ್ನು ಸಂತ್ರಸ್ತೆ ಗುರುತಿಸಿದ್ದರು. ಇದನ್ನು ಆಧರಿಸಿ ಪ್ರಮುಖ 7 ಆರೋಪಿಗಳು ಸೇರಿದಂತೆ 19 ಜನರ ಹೆಸರುಗಳನ್ನು ಪೊಲೀಸರು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.

ಜ.8 ರಂದು ಹಾನಗಲ್ ಬಳಿಯ ನಾಲ್ಕರ ಕ್ರಾಸ್ ಬಳಿ ಶಿರಸಿ ಮೂಲದ 26 ವರ್ಷದ ಮಹಿಳೆ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಈ ಪ್ರಕರಣ ಸಂಬಂಧ ಒಟ್ಟು 19 ಆರೋಪಿಗಳನ್ನು ಹಾನಗಲ್ ಪೊಲೀಸರು ಬಂಧಿಸಿದ್ದರು. 20 ದಿನಗಳ ಹಿಂದೆಯೇ ಪ್ರಕರಣದ ತನಿಖೆಯನ್ನು ಪೊಲೀಸರು ಪೂರ್ಣಗೊಳಿಸಿದ್ದರು. ಆದರೆ, ಫೊರೆನ್ಸಿಕ್ ಲ್ಯಾಬ್ ವರದಿ ಹಾಗೂ ಡಿಎನ್​ಎ ವರದಿಗಳು ಬಂದ ಬಳಿಕ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.

ಗ್ಯಾಂಗ್ ರೇಪ್ ಘಟನೆಗೆ ಸಂಬಂಧಿಸಿದಂತೆ ಹಲವು ಸಾಕ್ಷಾಧಾರಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಡಿಎನ್​ಎ ಸ್ಯಾಂಪಲ್, ಕೂದಲು, ಆರೋಪಿಗಳ ರಕ್ತದ ಮಾದರಿ ಸೇರಿದಂತೆ ಘಟನೆ ವೇಳೆ ಸಿಕ್ಕ ಬಟ್ಟೆಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು, ಘಟನೆ ವೇಳೆ ಬಳಸಿದ್ದ ಬೈಕ್, ಕಾರ್ ಸೇರಿದಂತೆ ಎಲ್ಲದರ ಬಗ್ಗೆ ಸಂಪೂರ್ಣವಾಗಿ ಚಾರ್ಜ್ ಶೀಟ್​​ನಲ್ಲಿ ಉಲ್ಲೇಖ ಮಾಡಲಾಗಿದೆ. ಫೋರೆನ್ಸಿಕ್ ತಜ್ಞರು, ವೈದ್ಯರು, ಪೊಲೀಸರು, ಕೆಲವು ಸ್ಥಳೀಯರು ಸೇರಿದಂತೆ 87 ಸಾಕ್ಷಿಗಳನ್ನು ಚಾರ್ಜ್ ಶೀಟ್​​ನಲ್ಲಿ ಪೊಲೀಸರು ದಾಖಲಿಸಿದ್ದಾರೆ.

ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ, 873 ಪುಟಗಳ ಚಾರ್ಜ್​ ಶೀಟ್ ಸಲ್ಲಿಸಲಾಗಿದೆ. ಪ್ರಕರಣದಲ್ಲಿ ಆರೋಪಿಗಳಿಗೆ ಯಾವುದೇ ಸಂಘಟನೆಗಳ ಜೊತೆ ಸಂಬಂಧ ಇಲ್ಲ ಎಂದು ಹಾವೇರಿ ಎಸ್ಪಿ ಅಂಶುಕುಮಾರ್ ಸ್ಪಷ್ಟಪಡಿಸಿದ್ದಾರೆ.

ಘಟನೆ ಹಿನ್ನೆಲೆ: ಹಾವೇರಿ ಜಿಲ್ಲೆ ಹಾನಗಲ್ ಸಮೀಪದ ಲಾಡ್ಜ್​ನಲ್ಲಿ ಜೋಡಿಯೊಂದು ತಂಗಿತ್ತು. ಈ ಬಗ್ಗೆ ಮಾಹಿತಿ ತಿಳಿದ ಕೆಲ ಯುವಕರು ಗುಂಪು ಲಾಡ್ಜ್​ಗೆ ಏಕಾಏಕಿ ನುಗ್ಗಿ ಜೋಡಿಯ ಮೇಲೆ ಹಲ್ಲೆ ಮಾಡಿತ್ತು. ಬಳಿಕ ಲಾಡ್ಜ್​ನಿಂದ ಹೊರಗೆ ಎಳೆದುಕೊಂಡು ಬಂದು ವ್ಯಕ್ತಿ ಮತ್ತು ಸಂತ್ರಸ್ತೆಗೆ ಬೆದರಿಕೆ ಹಾಕಿದ್ದರು. ಹಲ್ಲೆ ನಡೆಸಿ ಆವಾಜ್ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಆ ಬಳಿಕ ಹಲ್ಲೆ ಮಾಡಿದ ಆರೋಪಿಗಳು ಹಾನಗಲ್ ಸಮೀಪದ ಅರಣ್ಯ ಪ್ರದೇಶಕ್ಕೆ ಮಹಿಳೆಯನ್ನು ಕರೆದುಕೊಂಡು ಹೋಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು.

ಹಾನಗಲ್ ಪೊಲೀಸ್ ಠಾಣೆಯಲ್ಲಿ ಜ.10 ರಂದು ಮೊದಲು ಹಲ್ಲೆ ಪ್ರಕರಣ ದಾಖಲಾಗಿತ್ತು. ನಂತರ ನ್ಯಾಯಾಧೀಶರ ಮುಂದೆ ಮಹಿಳೆ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಕುರಿತಂತೆ ಹೇಳಿಕೆ ನೀಡಿದ್ದರು. ಮಹಿಳೆಯ ಆರೋಪ ಆಲಿಸಿದ ನ್ಯಾಯಾಧೀಶರು, ಸಾಮೂಹಿಕ ಅತ್ಯಾಚಾರದ ಆರೋಪಿಗಳ ಬಂಧನಕ್ಕೆ ಆದೇಶಿಸಿದ್ದರು. ನಂತರ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದರು.

ಇದನ್ನೂ ಓದಿ: ಹಾನಗಲ್​ ಗ್ಯಾಂಗ್​ ರೇಪ್​ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ

Last Updated : Mar 8, 2024, 10:56 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.