ETV Bharat / state

ಆನೇಕಲ್‌: ಬಂಧನದ ವೇಳೆ ಪೊಲೀಸರ ಮೇಲೆ ದಾಳಿ; ಆರೋಪಿ ಕಾಲಿಗೆ ಗುಂಡೇಟು - Police Shot Accused - POLICE SHOT ACCUSED

ಆನೇಕಲ್​ನಲ್ಲಿ ಶನಿವಾರ ಬಂಧನದ ವೇಳೆ ದಾಳಿಗೆ ಮುಂದಾದ ಕೊಲೆ ಆರೋಪಿಯ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ.

ಬಂಧಿತ ಆರೋಪಿ ವೆಂಕಟರಾಜು ತುಕಡೆ
ಬಂಧಿತ ಆರೋಪಿ ವೆಂಕಟರಾಜು ತುಕಡೆ (ETV Bharat)
author img

By ETV Bharat Karnataka Team

Published : Aug 4, 2024, 12:28 PM IST

ಬೆಂಗಳೂರು ಗ್ರಾಮಾಂತರ ಎಎಸ್ಪಿ ನಾಗರಾಜ್ ಹೇಳಿಕೆ (ETV Bharat)

ಆನೇಕಲ್​​​​: ಇಲ್ಲಿನ ರಾಗಿಹಳ್ಳಿ ಅರಣ್ಯ ಪ್ರದೇಶದಲ್ಲಿ ಬಂಧಿಸಲು ತೆರಳಿದ್ದಾಗ ದಾಳಿಗೆ ಮುಂದಾದ ಆರೋಪಿ ವೆಂಕಟರಾಜು ತುಕಡೆ ಎಂಬಾತನ ಕಾಲಿಗೆ ಜಿಗಣಿ ಪೊಲೀಸರು​ ಗುಂಡೇಟು ನೀಡಿದ್ದಾರೆ.

2 ಕೊಲೆ ಸೇರಿದಂತೆ ಇತರ ಪ್ರಕರಣದಲ್ಲಿ ಭಾಗಿಯಾಗಿದ್ದ ವೆಂಕಟರಾಜು ಕಾಡಿನ ಸಮೀಪ ಅಡಗಿರುವ ಮಾಹಿತಿ ಮೇರೆಗೆ ಬಂಧಿಸಲು ಪೊಲೀಸರು ತೆರಳಿದ್ದರು. ಗಾಂಜಾ ಮತ್ತಿನಲ್ಲಿದ್ದ ಆರೋಪಿ ಪೊಲೀಸರ ಸೂಚನೆ ಕಡೆಗಣಿಸಿ ದಾಳಿಗೆ ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಸ್ವರಕ್ಷಣೆಗೆ ಇನ್ಸ್​ಪೆಕ್ಟರ್​ ಮಂಜುನಾಥ್​ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.

ತಿಂಗಳ ಹಿಂದೆ ಆರೋಪಿ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಬೆಸ್ತಮಾನಹಳ್ಳಿ ಮುನೇಂದ್ರ ಎಂಬವರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ. ಆರೋಪಿಯನ್ನು ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು ಗ್ರಾಮಾಂತರ ಎಎಸ್ಪಿ ನಾಗರಾಜ್ ಹೇಳಿಕೆ: "ಕಳೆದ 4 ತಿಂಗಳಿನಿಂದ ಬೇಕಾಗಿದ್ದ ರೌಡಿ ವೆಂಕಟರಾಜು ತುಕಡೆಯನ್ನು ಹಿಡಿಯಲು ತಂಡ ಕಟ್ಟಲಾಗಿತ್ತು. ಕಳೆದ 2 ತಿಂಗಳಲ್ಲಿ ಆನೇಕಲ್​ ಭಾಗದಲ್ಲಿ 3 ಕೊಲೆಯಾಗಿತ್ತು. ಹುಡುಗರು ಗುಂಪು ಕಟ್ಟಿಕೊಂಡು ನಾನು ಹೆಚ್ಚು, ನೀನು ಹೆಚ್ಚಾ ಎಂದು ಒಬ್ಬರಿಗೊಬ್ಬರು ಹತ್ಯಾ ಪ್ರಯತ್ನ ಮಾಡುತ್ತಿದ್ದರು. ವೆಂಕಟರಾಜು ತುಕಡೆ ಮೇಲೆ 4 ಬಾಕಿ ಉಳಿದ ವಾರೆಂಟ್​ಗಳಿತ್ತು. 2 ಕೊಲೆ ಪ್ರಕರಣಗಳು, 4 ಹತ್ಯಾ ಪ್ರಯತ್ನ ಪ್ರಕರಣಗಳು ಇತ್ತು. ಹೀಗಾಗಿ ಈತನನ್ನು ಹಿಡಿಯುವ ಪ್ರಯತ್ನದಲ್ಲಿ ಪೊಲೀಸರ ತಂಡ ಬಂದು ಎಚ್ಚರಿಕೆ ನೀಡಿದಾಗ ನಮ್ಮ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ. ಆ ಸಂದರ್ಭದಲ್ಲಿ ನಮ್ಮ ಜಿಗಣಿ ಇನ್ಸ್​ಪೆಕ್ಟರ್​ ಮಂಜುನಾಥ್​ ಅವರು ಸಾಹಸ ಪ್ರದರ್ಶಿಸಿ ಆತನ ಮೇಲೆ ಗುಂಡು ಹಾರಿಸಿ ಬಂಧನ ಪಡಿಸಿದ್ದಾರೆ. ಈ ಪ್ರಯತ್ನವನ್ನು ನಮ್ಮ ಇಲಾಖೆ ಶ್ಲಾಘಿಸುತ್ತದೆ" ಎಂದಿದ್ದಾರೆ.

ಇದನ್ನೂ ಓದಿ: 38 ಮನೆಗಳ್ಳತನ ಪ್ರಕರಣ: ಗೆಳೆಯ, ಗೆಳತಿ ಬಂಧನ, ₹45 ಲಕ್ಷ ಮೌಲ್ಯದ ಆಭರಣ ವಶಕ್ಕೆ - House Burglary Case

ETV Bharat Logo

Copyright © 2025 Ushodaya Enterprises Pvt. Ltd., All Rights Reserved.