ETV Bharat / state

ಕೋಲಾರ: ಜಿಲೆಟಿನ್ ಕಡ್ಡಿ ಸೇರಿ ಭಾರಿ ಸ್ಫೋಟಕ ವಶಕ್ಕೆ ಪಡೆದ ಪೊಲೀಸರು - heavy explosives

ಕರ್ನಾಟಕ - ಆಂಧ್ರಪ್ರದೇಶ ಗಡಿಯಲ್ಲಿ ಪೊಲೀಸರು ಬೃಹತ್​ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಿಲೆಟಿನ್ ಕಡ್ಡಿ ಸೇರಿ ಭಾರಿ ಸ್ಫೋಟಕ ವಶಕ್ಕೆ ಪಡೆದ ಪೊಲೀಸರು

author img

By ETV Bharat Karnataka Team

Published : Apr 8, 2024, 2:01 PM IST

Updated : Apr 8, 2024, 2:53 PM IST

ಕೋಲಾರ: ಕರ್ನಾಟಕ ಮತ್ತು ಆಂಧ್ರ ಗಡಿಯಲ್ಲಿರುವ ನಂಗಲಿ ಚೆಕ್ ಪೋಸ್ಟ್​ನಲ್ಲಿ ಪೊಲೀಸರು ಬೃಹತ್ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ನಂಗಲಿ ಚೆಕ್ ಪೋಸ್ಟ್​ನಲ್ಲಿ ತಪಾಸಣೆ ವೇಳೆ​ ಕಾರೊಂದರಲ್ಲಿ ಸಾಗಿಸಲಾಗುತ್ತಿದ್ದ ಸ್ಫೋಟಕಗಳನ್ನು ವಶಕ್ಕೆ ಪಡೆಯಲಾಗಿದೆ.

ಕಾರಿನಲ್ಲಿ 1200 ಜಿಲೆಟಿನ್ ಕಡ್ಡಿಗಳು, 7 ಬಾಕ್ಸ್ ವೈರ್, 6 ಡೆಟರ್ನೇಟರ್ಸ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಆರೋಪಿಯೊಬ್ಬನನ್ನು ವಶಕ್ಕೆ ಪಡೆಯಲಾಗಿದೆ. ಪೊಲೀಸರ ಕಣ್ತಪ್ಪಿಸಿ ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.

ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಯಾವುದಾದರೂ ಅಕ್ರಮ ಕಲ್ಲು ಗಣಿಗಾರಿಕೆಗೆ ಸಾಮಗ್ರಿಗಳನ್ನು ಸಾಗಿಸಲಾಗುತ್ತಿತ್ತಾ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಓದಿ: ₹ 146 ಕೋಟಿ ಆದಾಯ ಗಳಿಸಿ ಮತ್ತೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ರಾಜ್ಯದಲ್ಲಿ ನಂಬರ್ 1 - Kukke Subramanya Temple

Last Updated : Apr 8, 2024, 2:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.