ETV Bharat / state

ಶಿವಮೊಗ್ಗದಲ್ಲಿ ಮತ್ತೆ ಸದ್ದು ಮಾಡಿದ ಪೊಲೀಸರ ಗನ್; ರೌಡಿಶೀಟರ್ ಕಾಲಿಗೆ ಗುಂಡೇಟು - Police Open Fire On Accused - POLICE OPEN FIRE ON ACCUSED

ಶಿವಮೊಗ್ಗದಲ್ಲಿ ಆರೋಪಿ ಭುವಿತ್​ ಬಲಗಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ.

Accused Bhuvit
ಆರೋಪಿ ಭುವಿತ್ (ETV Bharat)
author img

By ETV Bharat Karnataka Team

Published : Aug 12, 2024, 10:00 PM IST

ಆರೋಪಿ ಬಲಗಾಲಿಗೆ ಪೊಲೀಸರ ಗುಂಡೇಟು (ETV Bharat)

ಶಿವಮೊಗ್ಗ: ಶಿವಮೊಗ್ಗದಲ್ಲಿ ಪೊಲೀಸರ ಗನ್ ಮತ್ತೆ ಸದ್ದು ಮಾಡಿದೆ. ರೌಡಿಶೀಟರ್ ಭುವಿತ್ (26) ಎಂಬಾತನ ಬಲಗಾಲಿಗೆ ಗುಂಡೇಟು ಹೊಡೆದಿದ್ದಾರೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಆಗಿರುವ ಆರೋಪಿ ಮೇಲೆ ಕೊಲೆ, ಕೊಲೆ ಯತ್ನ, ದರೋಡೆ ಸೇರಿದಂತೆ ಹಲವು ಪ್ರಕರಣಗಳಿವೆ. ಭುವಿತ್ ಹಲವು ಪ್ರಕರಣದಲ್ಲಿ ಕೋರ್ಟ್​ಗೆ ಹಾಜರಾಗದೆ ತಲೆ‌ಮರೆಸಿಕೊಂಡು ಓಡಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇಂದು‌ ಶಿವಮೊಗ್ಗ ಹೊರವಲಯದ ಬೊಮ್ಮನಕಟ್ಟೆಯ ತುಂಗಾ ಮೇಲ್ದಂಡೆ ಕಾಲುವೆ ಬಳಿ ಇರುವ ಖಚಿತ ಮಾಹಿತಿ ಮೇರೆಗೆ ವಿನೋಬನಗರ ಪಿಎಸ್ಐ ಸುನೀಲ್ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಹೋಗಿದ್ದಾರೆ. ಈ ವೇಳೆ ಭುವಿತ್ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಗಾಯಗೊಂಡಿದ್ದಾರೆ.

ಪಿಎಸ್ಐ ಸುನೀಲ್ ತಮ್ಮ ಸಿಬ್ಬಂದಿಯ ರಕ್ಷಣೆ ಹಾಗೂ ಸ್ವರಕ್ಷಣೆಗಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ನಂತರ ರೌಡಿಶೀಟರ್ ಕಾಲಿಗೆ ಗುಂಡೇಟು ಹೊಡೆದಿದ್ದಾರೆ. ಗಾಯಗೊಂಡ ಪೊಲೀಸರು ಹಾಗೂ ಭುವಿತ್‌ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಪಿಸ್ತೂಲ್‌, ಮಾರಕಾಸ್ತ್ರ ಹಿಡಿದು ಬೆದರಿಸುತ್ತಿದ್ದ ವ್ಯಕ್ತಿ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.