ETV Bharat / state

ಹುಬ್ಬಳ್ಳಿಯಲ್ಲಿ ನಡೆದ ಅಮಾನವೀಯ ಕೃತ್ಯಕ್ಕೆ ಪೊಲೀಸ್ ನಿರ್ಲಕ್ಷ್ಯವೇ ಕಾರಣ: ಶಾಂತ ಭೀಷ್ಮ ಸ್ವಾಮೀಜಿ - Anjali Murder Case

ಬಸವಣ್ಣ, ಅಂಬಿಗರ ಚೌಡಯ್ಯನವರ ನಾಡಿನಲ್ಲಿ ನಡೆದ ಅಮಾನವೀಯ ಕೃತ್ಯಕ್ಕೆ ಪೊಲೀಸ್ ನಿರ್ಲಕ್ಷ್ಯವೇ ಕಾರಣ ಎಂದು ಶಾಂತ ಭೀಷ್ಮ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

Police negligence  Dharwad  inhumane act in Hubli  Shanta Bhishma Swamiji
ಶಾಂತ ಭೀಷ್ಮ ಸ್ವಾಮೀಜಿ (ಕೃಪೆ: ETV Bharat)
author img

By ETV Bharat Karnataka Team

Published : May 17, 2024, 5:56 PM IST

Updated : May 17, 2024, 6:52 PM IST

ಶಾಂತ ಭೀಷ್ಮ ಸ್ವಾಮೀಜಿ ಹೇಳಿಕೆ (ಕೃಪೆ: ETV Bharat)

ಹುಬ್ಬಳ್ಳಿ: ಬಸವಣ್ಣನವರ ಮತ್ತು ಅಂಬಿಗರ ಚೌಡಯ್ಯನ ಈ‌ ನಾಡಿನಲ್ಲಿ ಇಂತಹ ಕೃತ್ಯ ನಡೆದಿದೆ. ನೇಹಾ ಹತ್ಯೆ ಬಳಿಕ‌ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿತ್ತು. ಈ‌ ಕೃತ್ಯ ನಡೆಯುವ ಮುಂಚೆಯೇ ಆತನಿಂದ ಬೆದರಿಕೆ‌ ಬಂದಿತ್ತು. ಆದರೆ ಈ ವಿಚಾರದಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಇದಕ್ಕೆ ನೇರವಾಗಿ ಪೊಲೀಸ್ ಇಲಾಖೆಯೇ ಕಾರಣ ಎಂದು ಅಂಬಿಗರ ಚೌಡಯ್ಯನ ಗುರುಪೀಠದ ಶಾಂತ ಭೀಷ್ಮ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ಅಂಜಲಿ ನಿವಾಸದ ಮುಂದೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನೇಹಾ ಹತ್ಯೆಗೂ ನ್ಯಾಯ ಸಿಗಬೇಕು. ಅಂಜಲಿ‌ ಹತ್ಯೆಗೂ ನ್ಯಾಯ ಸಿಗಬೇಕು. ನೇಹಾ ಪ್ರಕರಣದಂತೆಯೇ ಈ‌ ಪ್ರಕರಣದ ಕುರಿತು ತ್ವರಿತ ನ್ಯಾಯಾಲಯ ತೆರೆಯಬೇಕು. ಶೀಘ್ರವೇ ಈ‌ ಪ್ರಕರಣದಲ್ಲಿ ಅಂಜಲಿ‌ ಸಾವಿಗೆ ನ್ಯಾಯ ಸಿಗಬೇಕು. ಅಂಜಲಿ‌ ಕುಟುಂಬಕ್ಕೆ‌ ಆರ್ಥಿಕ‌ ನೆರವಿನ ಜೊತೆಗೆ ಸೂರು‌ ಕಲ್ಪಿಸಬೇಕು ಎಂದರು.

ಅಂಜಲಿ‌ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಬೇಕು‌. ಈ‌ ನಿಟ್ಟಿನಲ್ಲಿ ನಾಳೆ ನಮ್ಮ‌ಸಮಾಜದಿಂದ‌ ಉಗ್ರ ಹೋರಾಟ ನಡೆಸಲಿದ್ದೇವೆ. ನಾಳೆ ಬೆಳಗ್ಗೆ 10.30 ಕ್ಕೆ ಅಂಜಲಿ‌ ಮನೆಯಿಂದ‌ ಚೆನ್ನಮ್ಮ‌ ವೃತ್ತದವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಿದ್ದೇವೆ. ಬೃಹತ್ ಮಟ್ಟದಲ್ಲಿ ಈ‌ ಹೋರಾಟದಲ್ಲಿ ಅಂಬಿಗರ ಸಮಾಜದ ನೂರಾರು ಜನರ ನೇತೃತ್ವದಲ್ಲಿ‌ ಪ್ರತಿಭಟನೆ ನಡೆಸಲಿದ್ದೇವೆ. ಪ್ರತಿಭಟನೆ ಮೂಲಕ‌ ರಾಜ್ಯ ಸರ್ಕಾರ ಹಾಗೂ ಸಿಎಂಗೆ ಮನವಿ ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.

ಇದೇ ವೇಳೆ ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ ಮಾತನಾಡಿ, ನಾಳೆ ನಾವು ವಾರ್ಡ್ ವತಿಯಿಂದ ಹೋರಾಟ ಮಾಡಲಿದ್ದೇವೆ. ಅಂಜಲಿ ಅಂಬಿಗೇರ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಲಿದ್ದೇವೆ. ಅಂಜಲಿ ನಿವಾಸಿದಿಂದ ದಾಜಿಬಾನಪೇಟೆ, ಮಂಗಳವಾರ ಪೇಟೆ ಮಾರ್ಗವಾಗಿ ಚೆನ್ನಮ್ಮ ವೃತ್ತದವರೆಗೂ ಪ್ರತಿಭಟನೆ ಮಾಡುತ್ತೇವೆ ಎಂದರು.

ನಾಳೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅಂಜಲಿ ಮನೆಗೆ ಬರಲಿದ್ದಾರೆ. ವಿನಯ ಕುಲಕರ್ಣಿ ಕೂಡ ಮಾತಾಡಿದ್ದಾರೆ. ಸರ್ಕಾರದ ಗಮನಕ್ಕೆ ತರೋದಾಗಿ ತಿಳಿಸಿದ್ದಾರೆ.‌ ಅಂಬಿಗೇರ ಸಮುದಾಯದ ಶ್ರೀಗಳ ಜೊತೆ ಅನೇಕ ಮಠಾಧೀಪತಿಗಳು ನಾಳೆ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಅಂಜಲಿ ಕುಟುಂಬಕ್ಕೆ ಮನೆ ಇಲ್ಲ. ಅವರ ಮನೆ ಖಾಲಿ ಮಾಡಿಸೋ‌ ಕೆಲಸ ಆಗ್ತಿದೆ. ದಿಂಗಾಲೇಶ್ವರ ಸ್ವಾಮೀಜಿಗಳು ಮಾತನಾಡಿ ಸರಿ ಮಾಡಿದ್ದಾರೆ. ಹೀಗಾಗಿ ಸರ್ಕಾರ ಅವರಿಗೆ ಮನೆ ಕೊಡಬೇಕು. ಇದು ಕೊಲೆ ಒಬ್ಬನೇ ಮಾಡಲು ಸಾಧ್ಯ ಇಲ್ಲ. ಅವನು ಯಾರ ಜೊತೆ ಗಾಂಜಾ ಸೇದಿದ್ದ ಅನ್ನೋದು ತನಿಖೆಯಾಗಬೇಕು. ಪೊಲೀಸರು ಯಾರ ಒತ್ತಡಕ್ಕೆ ಒಳಗಾಗಬಾರದು. ಸಿಪಿಐ ಅಮಾಯಕ. ಅವರ ತಲೆದಂಡ ಆಯ್ತು. ಅವರನ್ನು ಅಮಾನತು ಮಾಡಿರೋದು ಬೇಸರದ ಸಂಗತಿ ಎಂದರು.

ನನ್ನ ಮೊಮ್ಮಗಳ ಕೊಲೆಯಾದಂಗೆ ಅವನು ಕೊಲೆಯಾಗಬೇಕು. ಗಲ್ಲು ಶಿಕ್ಷೆಯಾಗಬೇಕು. ಇಲ್ಲದಿದ್ದರೆ ಜನ್ಮ ಹೋಗಬೇಕು ಎಂದು ಅಂಜಲಿ ಅಜ್ಜಿ ಗಂಗಮ್ಮ ಶಾಪ ಹಾಕಿದರು. ಒಂದು ತಿಂಗಳಲ್ಲಿ ಎರಡು ಜೀವ ಹೋಗಿವೆ. ಹೀಗಾಗಿ ಅವನಿಗೆ ಗಲ್ಲು ಶಿಕ್ಷೆಯಾಗಬೇಕು. ಅವ ವಿಶ್ವ ಬರೀ ಸುಳ್ಳು ಹೇಳ್ತಾನೆ. ಅಂಜಲಿ ಕೆಲ ದಿನ ಅವರ ಅತ್ತೆಯವರ ಮನೆಯಲ್ಲಿ ಇದ್ಲು. ಅಂಜಲಿ ಕೊಲೆಯಾಗೋ ಮುನ್ನವೇ ಮನೆ ಖಾಲಿ ಮಾಡಿ ಅಂದಿದ್ರು. ನಾನು ಎರಡು ತಿಂಗಳ ಸಮಯ ತೆಗೆದುಕೊಂಡಿನಿ. ಸರ್ಕಾರ ನಮಗೆ ಜಾಗ ಕೊಡಬೇಕು ಎಂದು ಒತ್ತಾಯಿಸಿದರು.

ಇದೇ ವೇಳೆ ಮಾಜಿ ಸಚಿವ ಹಾಗೂ ಶಾಸಕ ವಿನಯ ಕುಲಕರ್ಣಿ ಅಂಜಲಿ ಅಜ್ಜಿ ಗಂಗಮ್ಮ ಜೊತೆ ಮಾತನಾಡಿ, ಕೊಲೆಗೆ ಬೇಸರ ವ್ಯಕ್ತಪಡಿಸಿದರು. ನಿಮ್ಮ ಜೊತೆ ನಾವು ಇದ್ದೇವೆ, ನೀವು ಧೈರ್ಯವಾಗಿ ಇರಿ ಎಂದು ಧೈರ್ಯ ತುಂಬಿದರು.

ಓದಿ: ಅತ್ಯಾಚಾರ ಆರೋಪ ಪ್ರಕರಣ: ವಕೀಲ ದೇವರಾಜೇಗೌಡ ಪೊಲೀಸ್ ಕಸ್ಟಡಿ ಅಂತ್ಯ - DEVERAJEGOWDA POLICE CUSTODY END

Last Updated : May 17, 2024, 6:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.