ETV Bharat / state

ದರ್ಶನ್ ಸೇರಿ ನಾಲ್ವರ ಪೊಲೀಸ್ ಕಸ್ಟಡಿ ಇಂದು ಅಂತ್ಯ: ನ್ಯಾಯಾಂಗ ಬಂಧನ ಸಾಧ್ಯತೆ - Darshan Police custody - DARSHAN POLICE CUSTODY

ಕಳೆದ 12 ದಿನಗಳಿಂದ ಪೊಲೀಸ್‌ ಕಸ್ಟಡಿಯಲ್ಲಿರುವ ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳ ಕಸ್ಟಡಿ ಅವಧಿ ಇಂದಿಗೆ ಅಂತ್ಯವಾಗಲಿದ್ದು, ನ್ಯಾಯಾಂಗ ಬಂಧನಕ್ಕೊಳಗಾಗುವ ಸಾಧ್ಯತೆ ಇದೆ.

Darshan
ನಟ ದರ್ಶನ್​ (ETV Bharat)
author img

By ETV Bharat Karnataka Team

Published : Jun 22, 2024, 11:25 AM IST

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕಳೆದ 12 ದಿನಗಳಿಂದ ಪೊಲೀಸ್‌ ಕಸ್ಟಡಿಯಲ್ಲಿರುವ ನಟ ದರ್ಶನ್ ಸೇರಿದಂತೆ ನಾಲ್ವರು ಆರೋಪಿಗಳ ಕಸ್ಟಡಿ ಅವಧಿ ಇಂದಿಗೆ ಅಂತ್ಯವಾಗಲಿದೆ. ಆರೋಪಿಗಳಾದ ದರ್ಶನ್, ವಿನಯ್, ಪ್ರದೋಶ್ ಹಾಗೂ ಧನರಾಜ್ ಇಂದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರುವುದು ಬಹುತೇಕ ಖಚಿತವಾಗಿದೆ.

ಪ್ರಕರಣದ ಬಂಧಿತ ಆರೋಪಿಗಳನ್ನು ಗುರುವಾರ ನ್ಯಾಯಾಲಯದ ಎದುರು ಹಾಜರುಪಡಿಸಿದ್ದ ಪೊಲೀಸರು, ದರ್ಶನ್, ವಿನಯ್, ಪ್ರದೋಶ್ ಹಾಗೂ ಧನರಾಜ್ ಅವರನ್ನು ಇನ್ನೂ ಎರಡು ದಿನ ಕಸ್ಟಡಿಗೆ ಪಡೆದಿದ್ದರು. ದರ್ಶನ್ ಮನೆಯಲ್ಲಿ ಸಿಕ್ಕ ಹಣದ ಮೂಲದ ಕುರಿತು ತನಿಖೆ, ಸಾಕ್ಷ್ಯನಾಶಕ್ಕಾಗಿ ವಿನಯ್ ಹಾಗೂ ಪ್ರದೋಶ್ ಮಾಡಿದ್ದ ಯತ್ನಗಳು ಹಾಗೂ ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ನೀಡಲು ಧನರಾಜ್ ಒದಗಿಸಿದ್ದ ಮೆಗ್ಗರ್ ಡಿವೈಸ್ ಕುರಿತು ತನಿಖೆ ಅಗತ್ಯ ಇರುವುದರಿಂದ ನಾಲ್ವರನ್ನೂ ಕಸ್ಟಡಿಗೆ ಪಡೆಯಲಾಗಿತ್ತು. ಇಂದು ಕಸ್ಟಡಿ ಅವಧಿ ಮುಕ್ತಾಯವಾಗುವ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

ಇದನ್ನೂ ಓದಿ: ನಟ ದರ್ಶನ್​ಗೆ ಸಿಟ್ಟು, ಸ್ವಲ್ಪ ಮುಂಗೋಪ ಇದೆಯೇ ಹೊರತು ಕೊಲೆ ಮಾಡುವ ವ್ಯಕ್ತಿಯಲ್ಲ: ಶಾಸಕ ಉದಯ್ ಗೌಡ - MLA uday gowda

ಆರೋಪಿತರನ್ನು ಈಗಾಗಲೇ ಮೂರು ಬಾರಿ ಕಸ್ಟಡಿಗೆ ಪಡೆದಿರುವುದರಿಂದ ಮತ್ತೊಮ್ಮೆ ಕಸ್ಟಡಿಗೆ ಪಡೆಯುವ ಅವಕಾಶಗಳು ಕಡಿಮೆ ಎನ್ನಲಾಗಿದೆ. ಹಾಗಾಗಿ ದರ್ಶನ್ ಸೇರಿದಂತೆ ನಾಲ್ವರು ಇಂದು ಜೈಲು ಪಾಲಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ದರ್ಶನ್ ಸೇರಿ ನಾಲ್ವರಿಗೆ ಎರಡು ದಿನ ಪೊಲೀಸ್ ಕಸ್ಟಡಿ ವಿಸ್ತರಣೆ: ಪವಿತ್ರಾ ಗೌಡ ಸೇರಿ ಉಳಿದವರು ಜೈಲಿಗೆ - RENUKASWAMY MURDER CASE

ETV Bharat Logo

Copyright © 2024 Ushodaya Enterprises Pvt. Ltd., All Rights Reserved.