ಹುಬ್ಬಳ್ಳಿ: ಅಪ್ರಾಪ್ತೆ ಜೊತೆ ಪೊಲೀಸ್ ಹೆಡ್ಕಾನ್ಸಟೇಬಲ್ ಅನುಚಿತವಾಗಿ ವರ್ತಿಸಿರುವ ಆರೋಪ ಕೇಳಿ ಬಂದಿದ್ದು, ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.
ಆರೋಪ ಕೇಳಿಬಂದ ಬೆನ್ನಲ್ಲೇ ಶಬರಿ ನಗರದ ಎಮ್.ಎ.ಖಾದಿರನವರ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದು, ಕಾನೂನು ಕ್ರಮ ಕೈಗೊಂಡಿದ್ದಾರೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮಾತನಾಡಿ, "ಭಾನುವಾರ ಮಧ್ಯಾಹ್ನ 3 ರಿಂದ 4 ಗಂಟೆಯ ಸುಮಾರಿಗೆ 9 ವರ್ಷದ ಬಾಲಕಿಯನ್ನು ಮನೆಯೊಳಗೆ ಕರೆದು ಅನುಚಿತವಾಗಿ ವರ್ತಿಸಿರುವ ಆರೋಪ ಕೇಳಿ ಬಂದಿದೆ. ಬಾಲಕಿ ಪೋಷಕರಿಗೆ ಈ ಬಗ್ಗೆ ಹೇಳಿದ ನಂತರ ಆರೋಪಿಗೆ ಹೊಡೆದಿದ್ದಾರೆ. ಬಳಿಕ ಬಾಲಕಿ ಮತ್ತು ಪೋಷಕರ ಹೇಳಿಕೆ ಪಡೆದು ಇಂದು ಪೋಕ್ಸೋ ಪ್ರಕರಣ ದಾಖಲಿಸಿಕೊಂಡು, ಆತನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗಿದೆ. ಅನುಚಿತವಾಗಿ ವರ್ತಿಸಿದ ವ್ಯಕ್ತಿ ಯಾರೇ ಆಗಿರಲಿ. ಆತನ ಮೇಲೆ ಕೇಸ್ ದಾಖಲಾದ ಮೇಲೆ ಆರೋಪಿ ಆರೋಪಿಯೇ. ಇಲಾಖೆಗೆ ಸೇರಿದವನು ಎಂಬ ಪ್ರಶ್ನೆ ಬರುವುದಿಲ್ಲ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಆರೋಪಿಗೆ ಥಳಿಸಿದ ಸ್ಥಳೀಯರು: ಅಪ್ರಾಪ್ತ ಬಾಲಕಿ ಜೊತೆ ಅನುಚಿತವಾಗಿ ವರ್ತಿಸಿದ ಆರೋಪ ಕೇಳಿಬಂದ ಬಳಿಕ ಬಾಲಕಿಯ ಮನೆಯವರು, ಆರೋಪಿಗೆ ಹೊಡೆದಿರುವ ವಿಡಿಯೋ ವೈರಲ್ ಆಗಿದೆ.
ಇದನ್ನೂ ಓದಿ: ಬೆಂಗಳೂರು: ಪಟಾಕಿ ಸಿಡಿಸುವಾಗ ಸ್ನೇಹಿತರ ನಡುವಿನ ಹುಚ್ಚಾಟಕ್ಕೆ ಯುವಕ ಬಲಿ, 6 ಮಂದಿ ಬಂಧನ