ಬೆಂಗಳೂರು: ಯುವತಿಯ ಫೋನ್ ನಂಬರನ್ನು ಕಾಲ್ ಗರ್ಲ್ಸ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದ ಪಿಜಿಯೊಂದರ ವ್ಯವಸ್ಥಾಪಕನನ್ನು ಬೆಂಗಳೂರು ಪೂರ್ವ ವಿಭಾಗದ ಸಿಇಎನ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಶೇಷಾದ್ರಿಪುರಂ ಪಿಜಿಯಲ್ಲಿ ರೂಮ್ ಪಡೆದಿದ್ದ 25 ವರ್ಷದ ಯುವತಿ, ನಂತರ ಅಲ್ಲಿನ ವ್ಯವಸ್ಥೆ ಇಷ್ಟವಾಗದೇ ಉಳಿದುಕೊಳ್ಳಲು ಹಿಂದೇಟು ಹಾಕಿದ್ದಳು. ಅಡ್ಮಿಶನ್ ಕ್ಯಾನ್ಸಲ್ ಮಾಡಿಕೊಂಡಿದ್ದ ಯುವತಿ, ಗೂಗಲ್‌ನಲ್ಲಿ ಪಿಜಿಯ ಅವ್ಯವಸ್ಥೆಯ ಕುರಿತು ನೆಗೆಟಿವ್ ರಿವ್ಯೂ ಬರೆದಿದ್ದಳು. ಇದರಿಂದ ಕೋಪಗೊಂಡಿದ್ದ ವ್ಯವಸ್ಥಾಪಕ ಆನಂದ್ ಶರ್ಮಾ, ಆಕೆಯ ಫೋನ್ ನಂಬರನ್ನು ಕೆಲವು ಕಾಲ್ ಗರ್ಲ್ಸ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದಾನೆ.
ಸ್ವಲ್ಪ ದಿನಗಳ ಬಳಿಕ ಯುವತಿಗೆ ಅಪರಿಚಿತ ನಂಬರ್ಗಳಿಂದ ಬರುತ್ತಿದ್ದ ಕರೆಗಳಲ್ಲಿ ಅನೇಕರು ಅಸಭ್ಯವಾಗಿ ಮಾತನಾಡಲಾರಂಭಿಸಿದ್ದರು. ಇದರಿಂದ ಬೇಸತ್ತ ಯುವತಿ ಬೆಂಗಳೂರು ಪೂರ್ವ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ ಆರೋಪಿಯ ಕೃತ್ಯ ಬಯಲಾಗಿದೆ.
ಇದನ್ನೂ ಓದಿ: ಮಂಗಳೂರು: 300 ಕೋಟಿ ದರೋಡೆಗೆ ಸಂಚು; 9 ಲಕ್ಷ ಕದ್ದ ಗ್ರಾಪಂ ಸದಸ್ಯ ಸೇರಿ 10 ಜನರ ಬಂಧನ - house robbery in Mangaluru