ETV Bharat / state

ಹಾವೇರಿ: ಹಗಲು ವೇಷಧಾರಿಗಳಿಂದ ಶ್ರೀರಾಮ ಕಥಾನಕ ಪ್ರದರ್ಶನ - ಶ್ರೀರಾಮ ಕಥಾನಕ ಪ್ರದರ್ಶನ

ಹಗಲು ವೇಷಧಾರಿ ಕಲಾವಿದರು ಹಾವೇರಿ ನಗರದಲ್ಲಿ ಶ್ರೀರಾಮ ಲಕ್ಷ್ಮಣ ಆಂಜನೇಯ ಪಾತ್ರಗಳನ್ನು ಮಾಡಿ ಶ್ರೀರಾಮ ಕಥಾನಕ ಪ್ರದರ್ಶನ ಮಾಡಿದರು.

Eಹಗಲು ವೇಷಧಾರಿಗಳಿಂದ ಶ್ರೀರಾಮ ಕಥಾನಕ ಪ್ರದರ್ಶನ
ಹಗಲು ವೇಷಧಾರಿಗಳಿಂದ ಶ್ರೀರಾಮ ಕಥಾನಕ ಪ್ರದರ್ಶನ
author img

By ETV Bharat Karnataka Team

Published : Jan 21, 2024, 8:51 PM IST

Updated : Jan 21, 2024, 11:07 PM IST

ಹಗಲು ವೇಷಧಾರಿಗಳಿಂದ ಶ್ರೀರಾಮ ಕಥಾನಕ ಪ್ರದರ್ಶನ

ಹಾವೇರಿ: ಕಲಾಪ್ರಕಾರಗಳಲ್ಲಿ ಒಂದಾದ ಹಗಲುವೇಷ ಇದೀಗ ಮೂಲೆ ಗುಂಪಾಗಲಾರಂಭಿಸಿದೆ. ಈಗಾಗಲೇ ನಗರಗಳಿಂದ ದೂರ ಸರಿದ ಹಗಲುವೇಷ ಕಲಾವಿದರು ಗ್ರಾಮಾಂತರ ಪ್ರದೇಶಗಳಲ್ಲಿ ಪ್ರದರ್ಶನ ನಡೆಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಇದೀಗ ಆಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಆಗುತ್ತಿರುವುದು ಈ ಕಲಾವಿದರಿಗೂ ಸಂತಸ ತಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧ ಹಗಲುವೇಷ ಕಲಾವಿದರು ಭಾನುವಾರ ನಗರದಲ್ಲಿ ಶ್ರೀರಾಮ ಲಕ್ಷ್ಮಣ ಆಂಜನೇಯ ಪಾತ್ರಗಳ ಮೂಲಕ ಸಂಭ್ರಮಿಸಿದರು.

ನಗರದ ಬಸ್ ನಿಲ್ದಾಣದ ಬಳಿ ಹಗಲು ವೇಷಧಾರಿಗಳು ವೇಷ ಹಾಕಿ ರಾಮನ ಕುರಿತ ಹಾಡುಗಳನ್ನು ಹೇಳುವ ಮೂಲಕ ಗಮನ ಸೆಳೆದರು. ಶ್ರೀರಾಮನ ಪಾತ್ರಧಾರಿ ಕೈಯಲ್ಲಿ ಬಿಲ್ಲುಹಿಡಿದು ಬತ್ತಳಿಕೆ ಹಿಡಿದು ಗಮನಸೆಳೆದರೇ, ಆಂಜನೇಯ
ಪಾತ್ರಧಾರಿ ಮರ ಕಟ್ಟಡ ಏರುವ ಮೂಲಕ ಆಶ್ಚರ್ಯಗೊಳಿಸಿದ. ಹಾರ್ಮೋನಿಯಂ, ತಬಲಾ ಹಿಡಿದ ಕಲಾವಿದರು ಈ ಪಾತ್ರಗಳಿಗೆ ಹಿನ್ನೆಲೆ ಸಂಗೀತ ನೀಡಿದರು.

ಹೊಸಮನಿ ಸಿದ್ದಪ್ಪ ವೃತ್ತದಿಂದ ಪ್ರದರ್ಶನ ಆರಂಭಿಸಿದ ಈ ಕಲಾವಿದರು ಇಲ್ಲಿಯ ಪ್ರಮುಖ ರಸ್ತೆಗಳಲ್ಲಿ ಕಲಾಪ್ರದರ್ಶನ ನಡೆಸಿದರು. ನಂತರ ನಗರದಲ್ಲಿರುವ ಶ್ರೀರಾಮ ಮಂದಿರದಲ್ಲಿ ತಮ್ಮ ಪಾತ್ರಗಳನ್ನ ಮುಕ್ತಾಯಗೊಳಿಸಿದರು. ಪ್ರತಿವೃತ್ತದಲ್ಲಿ ಪ್ರದರ್ಶನ ನೀಡುತ್ತಿದ್ದ ಈ ಕಲಾವಿದರು ಹಾಡು, ಡೈಲಾಗ್ ಹೇಳುವ ಮೂಲಕ ಜನರಲ್ಲಿ ಶ್ರೀರಾಮನ ಕಥಾನಕವನ್ನ ಪ್ರಸ್ತುತ ಪಡಿಸಿದರು. ಜನರು ಹಗಲುವೇಷ ಪಾತ್ರಧಾರಿಗಳಾದ ಶ್ರೀರಾಮ ಮತ್ತು ಆಂಜನೇಯನಿಗೆ ನಮಸ್ಕಾರ ಮಾಡಿ ಕಾಲುಬಿದ್ದು ಆಶೀರ್ವಾದ ಪಡೆದರು.

ಅಷ್ಟೇ ಅಲ್ಲದೆ ಪಾತ್ರಧಾರಿಗಳಿಗೆ ಹಣ ನೀಡಿ ಪ್ರೋತ್ಸಾಹಿಸಿದರು. ಈ ಹಗಲುವೇಷಧಾರಿ ತಂಡ ಕಳೆದ ಹಲವು ದಿನಗಳಿಂದ
ಜಿಲ್ಲೆಯ ಪ್ರಮುಖ ಪಟ್ಟಣಗಳಲ್ಲಿ ರಾಮಾಂಜನೇಯ ಲಕ್ಷ್ಮಣ ಪಾತ್ರ ಹಗಲುವೇಷ ಹಾಕಿ ಜನರ ಬಳಿ ಹೋಗುತ್ತಿದೆ. ಕಳೆದ ಕೆಲ ದಿನಗಳಿಂದ ಹಾನಗಲ್, ಶಿಗ್ಗಾಂವಿ, ಹಿರೇಕೆರೂರು, ಸವಣೂರು ಪ್ರದೇಶ ನೀಡಿದ ಈ ತಂಡ ಸೋಮವಾರ ರಾಣೆಬೆನ್ನೂರಲ್ಲಿ ಪ್ರದರ್ಶನ ನೀಡಲಿದೆ.

ಈ ಕುರಿತಂತೆ ಮಾತನಾಡಿದ ಶ್ರೀರಾಮ ವೇಷಧಾರಿ ಮಾಲತೇಶ, ನಾವು ತಮ್ಮ ತಾತನ ಕಾಲದಿಂದ ಈ ವೇಷ ಹಾಕುತ್ತಿರುವುದಾಗಿ ತಿಳಿಸಿದರು. ನಮ್ಮ ಕುಲ ಕಸಬು ಇದಾಗಿದ್ದು, ನಮ್ಮ ಮುತ್ತಾತ ಸೇರಿದಂತೆ ತಲಾತಲಾಂತರದಿಂದ
ಇದನ್ನು ನಮ್ಮ ಮನೆತನ ಉಳಿಸಿಕೊಂಡು ಬಂದಿದೆ. ಇದರಿಂದ ಬದುಕು ಕಟ್ಟಿಕೊಂಡಿರುವ ನಾವು ಇತ್ತಿಚೀನ ದಿನಗಳಲ್ಲಿ ಮೊಬೈಲ್ ಟಿವಿ ಮತ್ತು ಇತರ ಉಪಕರಣಗಳಿಂದ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಇದಲ್ಲದೆ ಸರ್ಕಾರದಿಂದ ಸಹ ತಮಗೆ ಯಾವುದೇ ಸಹಾಯವಿಲ್ಲಾ. ನಗರದ ಜನ ನಮ್ಮನ್ನು ಕೈಬಿಟ್ಟು ವರ್ಷಗಳೇ ಕಳೆದಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಈಗ ನಮಗೆ ಗ್ರಾಮಗಳ ಜನರೇ ಆಶ್ರಯದಾತರು. ಗ್ರಾಮ ಗ್ರಾಮಗಳಿಗೆ ತೆರಳಿ ಶ್ರೀರಾಮನ ಕಥಾನಕವನ್ನು ತಿಳಿಸುವ
ಮೂಲಕ ಜೀವನ ನಡೆದಿದೆ. ಸರ್ಕಾರ ನಮ್ಮಂತಹ ಕಲಾವಿದರ ಸಹಾಯಕ್ಕೆ ಬಂದರೆ ಹಗಲುವೇಷಕ್ಕೆ ಇನ್ನಷ್ಟು ಪ್ರೋತ್ಸಾಹ ಸಿಕ್ಕಂತಾಗುತ್ತದೆ. ನಮ್ಮ ನೆರವಿಗೆ ಸರ್ಕಾರ ಬರಬೇಕು ಎಂದು ಶ್ರೀರಾಮಪಾತ್ರಧಾರಿ ಮಾಲತೇಶ ಮನವಿ ಮಾಡಿದರು.

ಇದನ್ನೂ ಓದಿ: ಕುಂದಾನಗರಿ ಕಲಾವಿದನ ಕೈಯಲ್ಲಿ ಅರಳಿದ ರಾಮಮಂದಿರ ಪ್ರತಿಕೃತಿ

Last Updated : Jan 21, 2024, 11:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.